‘ನಾನು ಮಂಡ್ಯ ಗೌಡ್ತಿ. ಅದನ್ನ ನನ್ನಿಂದ ಯಾರೂ ಕಿತ್ತುಕೊಳ್ಳೋಕ್ಕೆ ಆಗಲ್ಲ’

ಮಂಡ್ಯ: ಮಂಡ್ಯದಲ್ಲಿಂದು ಮಾತನಾಡಿದ ಮಾಜಿ ಸಂಸದೆ ರಮ್ಯಾ, ಮಂಡ್ಯದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಮಂಡ್ಯದಲ್ಲಿ ನೀವೊಂದು ತೊಟ್ಟಿಮನೆ ಕಟ್ಟಿಸಬೇಕೆಂದು ಹೇಳಿದ್ದಿರಿ. ಅದರ ಬಗ್ಗೆ ಏನಾದರೂ ಯೋಚನೆ ಮಾಡಿದ್ದೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ಈಗಾಗಲೇ ಮಂಡ್ಯದಲ್ಲಿ ನನ್ನ ಅಜ್ಜನಿಗೆ ಸೇರಿದ ತೊಟ್ಟಿಮನೆ ಇದೆ. ಆದರೆ ನಾನೊಂದು ತೊಟ್ಟಿ ಮನೆ ಕಟ್ಟಿಸಬೇಕೆಂದಿದ್ದೇನೆ. ಮುಂದೆ ಸಮಯ ಬಂದಾಗ, ಖಂಡಿತ ಕಟ್ಟಿಸುತ್ತೇನೆ ಎಂದಿದ್ದಾರೆ.

ಇನ್ನು ಮಂಡ್ಯದ ಬಗ್ಗೆ ಮಾತನಾಡಿರುವ ರಮ್ಯಾ, ನೋಡಿ ನಾನು ಮಂಡ್ಯದವಳೇ. ನಾನು ಮಂಡ್ಯ ಗೌಡ್ತಿ. ಅದನ್ನ ನನ್ನಿಂದ ಯಾರೂ ಕಿತ್ತುಕೊಳ್ಳೋಕ್ಕೆ ಆಗಲ್ಲ. ಅದನ್ನ ಯಾರೂ ಚೇಂಜ್ ಮಾಡೋಕ್ಕೂ ಆಗಲ್ಲ. ಇದು ನನ್ನ ತಾಯಿ ಊರು. ನನ್ನ ಅಪ್ಪ ಸತ್ತಿದ್ದು ಇಲ್ಲೇ. ಅವರು ನನ್ನನ್ನು ಚುನಾವಣೆಗೆ ನಿಲ್ಲಿಸಬೇಕೆಂದು ಇಲ್ಲಿಗೆ ಕರೆದುಕೊಂಡು ಬಂದಿದ್ದರು. ಅವರು ಹೋದ ಸಮಯದಲ್ಲಿ, ನನ್ನ ಕಷ್ಟಕಾಲದಲ್ಲಿ ನನಗೆ ಬೆಂಬಲ ನೀಡಿದ ಮಂಡ್ಯ ಜನತೆಯನ್ನು ನಾನು ಎಂದಿಗೂ ಮರೆಯುವುದಕ್ಕೆ ಆಗುವುದಿಲ್ಲ. ನನಗೆ ಅವರ ಮೇಲಿರುವ ಗೌರವ, ಪ್ರೀತಿ, ಯಾವಾಗಲೂ ಹೀಗೆ ಇರತ್ತೆ. ಯಾವಾಗಲೂ ಅದು ಕಡಿಮೆಯಾಗುವುದಿಲ್ಲ ಎಂದು ರಮ್ಯಾ ಹೇಳಿದ್ದಾರೆ.

ಅಲ್ಲದೇ, ಬರೀ ರಾಜಕೀಯ ಅಂತಾ ಅಂದುಕೊಳ್ಳಬೇಡಿ. ಮಂಡ್ಯ ಜನತೆ ನನಗೆ ಕುಟುಂಬವಿದ್ದಂತೆ. ಹಾಗಾಗಿ ಇದನ್ನು ರಾಜಕೀಯಕ್ಕೆ ತಂದು ಹೇಳಬೇಡಿ ಎಂದು ರಮ್ಯಾ ಹೇಳಿದ್ದಾರೆ. ಇನ್ನು ನೀವು ಎಲ್ಲೆಲ್ಲಿ ಕ್ಯಾಂಪೇನ್ ಮಾಡಲಿದ್ದೀರಿ ಎಂದು ಕೇಳಿದ್ದಕ್ಕೆ ಉತ್ತರಿಸಿದ ರಮ್ಯಾ, ನಾನು ವರುಣಾ, ಮೈಸೂರು, ನಜಂನಗೂಡು, ಹುಬ್ಬಳ್ಳಿ, ಬಿಜಾಪುರ, ಬೆಂಗಳೂರು, ಇಲೆಲ್ಲ ಹೋಗಲಿದ್ದೇನೆ ಎಂದರು.

ಅಲ್ಲದೇ, ಮಂಡ್ಯಕ್ಕೆ ನೀವು ಬೇಗ ಬರಬಹುದಿತ್ತಲ್ಲ ಎಂದು ಕೇಳಿದ್ದಕ್ಕೆ, ಪ್ರತಿಕ್ರಿಯಿಸಿದ ರಮ್ಯಾ, ಇವರು ಲೀಸ್ಟ್ ಮಾಡುವಾಗಲೇ, ಲೇಟ್ ಆಗಿತ್ತು. ನಾನು 224 ಕ್ಷೇತ್ರಗಳಿಗೂ ಪ್ರಚಾರಕ್ಕೆ ಹೋಗಲಾಗುವುದಿಲ್ಲ. ಹಾಗಾಗಿ ಲೀಸ್ಟ್ ಮಾಡಿ, ಎಲ್ಲೆಲ್ಲಿ ಸಾಧ್ಯವಾಗುತ್ತದೋ ಅಲ್ಲೆಲ್ಲಾ ಪ್ರಚಾರಕ್ಕೆ ಹೋಗಲಿದ್ದೇನೆ . ನನಗೆ ಮತ್ತೆ ಮಂಡ್ಯಕ್ಕೆ ಬರಲು ಸಮಯವಿಲ್ಲ. ನನಗೆ ಮಂಡ್ಯದ ಇಂಚಾರ್ಜ್ ನೀಡಿದ್ದರೆ, ಇಲ್ಲೇ ಇರುತ್ತಿದ್ದೆ. ಪಕ್ಷಕ್ಕಾಗಿ ಓಡಾಡುತ್ತಿದ್ದೆ. ಆದರೆ ಸ್ಟಾರ್ ಕ್ಯಾಂಪೇನರ್ ಆಗಿರುವುದರಿಂದ, ಎಲ್ಲಾ ಕಡೆ ಹೋಗಬೇಕಾಗುತ್ತದೆ. ನಮ್ಮ ಅಭ್ಯರ್ಥಿಗಳು ಸ್ಟ್ರಾಂಗ್ ಆಗಿ ಇದ್ದಾರೆ. ಇವರೆಲ್ಲ ಗೆದ್ದೇ ಗೆಲ್ಲುತ್ತಾರೆ ಎಂದು ರಮ್ಯಾ ವಿಶ್ವಾಸ ವ್ಯಕ್ತಪಡಿಸಿದರು.

ಮತ್ತೆ ರಾಜಕೀಯಕ್ಕೆ ಬರುವ ಬಗ್ಗೆ ರಮ್ಯಾ ಹೇಳಿದ್ದೇನು..?

‘ರಾಜ್ಯದಲ್ಲಿ ಶಾಂತಿಯನ್ನು ಕದಡಿಸುತ್ತಿದ್ದಾರೆ. ನಾವು ಶಾಂತಿ ಮೂಡಿಸಬೇಕಾಗಿದೆ’

‘ಭಜರಂಗದಳ, ಪಿಎಫ್ಐ ಎರಡನ್ನೂ ಒಂದೇ ತಕ್ಕಡಿಯಲ್ಲಿ ತೂಗುತ್ತಿದ್ದೀರಿ. ನಿಮ್ಮ ವಿನಾಶ ಕಾದಿದೆ. ‘

About The Author