Political News: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಎರಡು ದಿನದ ಹಿಂದೆ ಗಂಟಲು ನೋವು, ಜ್ವರವೆಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು.
ಇದೀಗ ಗೌಡರು ಆರೋಗ್ಯವಾಗಿದ್ದು, ಡಿಸ್ಚಾರ್ಜ್ ಆಗಿ ಮನೆಗೆ ಹಿಂದಿರುಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ದೇವೇಗೌಡರಿಗೆ ಸುಸ್ತು ಮತ್ತು ಕೆಮ್ಮು ಇತ್ತು. ಗಂಟಲನೋವು ಸಹ ಇದ್ದು, ಡಾ.ಸತ್ಯನಾರಾಯಣ ತಂಡ ಇವರಿಗೆ ಚಿಕಿತ್ಸೆ ನೀಡಿತ್ತು.
ಇದೀಗ ದೊಡ್ಡಗೌಡರ ಆರೋಗ್ಯದಲ್ಲಿ ಸುದಾರಣೆ ಕಂಡಿದ್ದು, ಗೌಡರು ಬೆಂಗಳೂರಿನ ಪದ್ಮನಾಭನಗರದಲ್ಲಿರುವ ತಮ್ಮ ಮನೆಗೆ ತೆರಳಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಟ್ವೀಟ್ ಮಾಡಿದ್ದ ಗೌಡರು, ನನಗೆ ಅಂಥ ಆರೋಗ್ಯ ಸಮಸ್ಯೆ ಏನೂ ಆಗಿಲ್ಲ. ಸ್ವಲ್ಪ ಜ್ವರ, ಸುಸ್ತು ಆಗಿದೆ ಅಷ್ಟೇ. ಇನ್ನು ಕೆಲ ದಿನಗಳಲ್ಲೇ ನಾನು ಡಿಸ್ಚಾರ್ಜ್ ಆಗಿ ವಾಪಸ್ ಬರಲಿದ್ದೇನೆ ಎಂದಿದ್ದಾರೆ.
ಬೆಳ್ಳಿ ಪರ್ವ ಡಿ-25 ಕಾರ್ಯಕ್ರಮ: ದರ್ಶನ್ ಸಹಾಯ ನೆನೆದು ಭಾವುಕರಾದ ಸಂಸದೆ ಸುಮಲತಾ ಅಂಬರೀಷ್
ಕರಿಮಣಿ ಮಾಲೀಕ ಹಾಡು ಹಾಡಿ, ತುಳು ಹಾಡಿಗೆ ರೀಲ್ಸ್ ಮಾಡಿದ ಕಿಲಿ ಪೌಲ್..
ಕಿಂಗ್ ಚಾರ್ಲ್ಸ್‌ಗೆ ಕ್ಯಾನ್ಸರ್: ತಂದೆಯ ಆರೋಗ್ಯ ವಿಚಾರಿಸಲು ತೆರಳಿದ ಪ್ರಿನ್ಸ್ ಹ್ಯಾರಿ..