Saturday, November 8, 2025

Latest Posts

ಸೆಪ್ಟೆಂಬರ್‌ 22ರಿಂದ ಹಾಲು, ಮೊಸರು ಬೆಲೆ ಇಳಿಕೆ?

- Advertisement -

ಕೇಂದ್ರ ಸರ್ಕಾರದಿಂದ ಜಿಎಸ್‌ಟಿ ಕಡಿತ ಬೆನ್ನಲ್ಲೇ, ರಾಜ್ಯದ ಜನರಿಗೆ ಕೆಎಂಎಫ್‌ ಗುಡ್‌ ನ್ಯೂಸ್‌ ಕೊಟ್ಟಿದೆ. ನಂದಿನಿ ಮೊಸರು, ತುಪ್ಪ, ಬೆಣ್ಣೆ, ಲಸ್ಸಿ, ಚೀಸ್‌ ಸೇರಿದಂತೆ ಹಲವು ಉತ್ಪನ್ನಗಳ ದರ ಇಳಿಕೆ ಆಗಿದೆ. ಸೆಪ್ಟೆಂಬರ್‌ 22ರ ಸೋಮವಾರದಿಂದಲೇ ಹೊಸ ದರ ಜಾರಿಗೆ ಬರುವ ಸಾಧ್ಯತೆ ಇದ್ದು, ಅಧಿಕೃತ ಆದೇಶವಷ್ಟೇ ಬಾಕಿ ಇದೆ.

ಸೆಪ್ಟೆಂಬರ್‌ 19ರ ಶುಕ್ರವಾರದಂದು, ಕೆಎಂಎಫ್ ಆಡಳಿತ ಮಂಡಳಿ ಮತ್ತು​​ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಯಾವುದರ ದರ ಎಷ್ಟು ಇಳಿಕೆ ಮಾಡಬೇಕು ಎಂಬ ಬಗ್ಗೆ ನಿರ್ಧಾರ ಮಾಡಲಾಗಿದೆ. ಮೊಸರಿನ ದರ ಲೀಟರ್‌ಗೆ 4 ರೂಪಾಯಿ ಇಳಿಕೆ ನಿರೀಕ್ಷೆ ಇದೆ. ಜೊತೆಗೆ ತುಪ್ಪ, ಬೆಣ್ಣೆ, ಲಸ್ಸಿ ಸೇರಿ ಹಲವು ಉತ್ಪನ್ನಗಳ ದರ ಕೂಡ ಇಳಿಕೆ ಆಗಿದೆ.

2017ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಲಾಗಿತ್ತು. 2022ರಲ್ಲಿ ಜಿಎಸ್‌ಟಿಯನ್ನ ಶೇಕಡ 22ಕ್ಕೆ ಹೆಚ್ಚಿಸಲಾಗಿತ್ತು. ಇತ್ತೀಚೆಗೆ ಕೇಂದ್ರ ಸರ್ಕಾರ ಹಾಲಿನ ಉತ್ಪನ್ನಗಳ ಮೇಲಿನ ಸರಕು ಸೇವಾ ತೆರಿಗೆಯನ್ನು, ಶೇಕಡ 12ರಿಂದ 5ಕ್ಕೆ ಇಳಿಕೆ ಮಾಡಿದೆ. ಹೀಗಾಗಿ ಕೆಎಂಎಫ್‌ ಉತ್ಪನ್ನಗಳ ದರ ಇಳಿಕೆ ಮಾಡಲಾಗ್ತಿದ್ದು, ಗ್ರಾಹಕರು ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.

- Advertisement -

Latest Posts

Don't Miss