ಯಾರು ಆಚಾರ್ಯ ಚಾಣಕ್ಯರ ಮಾತನ್ನ ಪರಿಪಾಲನೆ ಮಾಡ್ತಾರೋ, ಅವರು ಜೀವನದಲ್ಲಿ ಖಂಡಿತ ಯಶಸ್ಸು ಕಾಣುತ್ತಾರೆ ಅನ್ನೋದು ಹಿರಿಯರ ಮಾತು. ಅದು ನಿಜವೂ ಹೌದು. ಜೀವನದಲ್ಲಿ ಹೇಗಿರಬೇಕು. ಎಂಥವರನ್ನ ನಂಬಬೇಕು. ಎಂಥ ಮಾತನ್ನಾಡಬೇಕು. ಎಂಥ ಜೀವನ ಸಂಗಾತಿಯನ್ನು ವಿವಾಹವಾಗಬೇಕು ಅನ್ನೋ ಬಗ್ಗೆ ಚಾಣಕ್ಯರು, ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಇಂದು ನಾವು ಚಾಣಕ್ಯರ ಜೀವನದ ಒಂದು ಕಥೆಯನ್ನ ಹೇಳಲಿದ್ದೇವೆ. ಆ ಕಥೆಯ ಬಗ್ಗೆ ತಿಳಿಯೋಣ ಬನ್ನಿ..
ಚಾಣಕ್ಯನ ಇಬ್ಬರೂ ಗೂಢಾಚಾರಿಗಳಾದ ಆರ್ಯ ಮತ್ತು ಚತ್ರಕ, ಗ್ರೀಕ್ ರಾಜನ ಸಾಮ್ರಾಜ್ಯದಲ್ಲಿ ಗೂಢಾಚಾರ ಮಾಡಲು ಹೋಗಿ ಸಿಕ್ಕಿಬಿದ್ದರು. ಅವರಿಗೆ ಮೃತ್ಯುದಂಡವನ್ನು ಘೋಷಣೆ ಮಾಡಲಾಗಿತ್ತು. ಗಲ್ಲು ಶಿಕ್ಷೆ ನೀಡಲಾಗಿದ್ದರೂ ಕೂಡ ಆ ಗುಪ್ತಚರರ ಮುಖದಲ್ಲಿ ಯಾವುದೇ ಭಯವಿರಲಿಲ್ಲ. ಅವರು ರಾಜನ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುತ್ತಿದ್ದರು. ನೀವು ಸಾಯುವುದಕ್ಕೂ ಮುನ್ನ ನಿಮ್ಮ ಕೊನೆಯ ಆಸೆ ಏನು ಹೇಳಿ ಎಂದು ಕೇಳಿದರು.
ಅದಕ್ಕೆ ಚತ್ರಕ, ನನಗೆ ಸಾವಿನ ಭಯವಿಲ್ಲ, ಆದ್ರೆ ನನ್ನ ಸಾವಿನ ಜೊತೆಗೆ, ನಾನು ಕಲಿತಿರುವ ಅದ್ಭುತ ಕಲೆಯೂ ನಷ್ಟವಾಗುತ್ತದೆ ಅನ್ನೋದೇ ಬೇಸರ ನನಗೆ ಎನ್ನುತ್ತಾನೆ. ಆಗ ರಾಜ ಏನದು ನಿನ್ನಲ್ಲಿರುವ ಕಲೆ ಎಂದು ಕೇಳುತ್ತಾನೆ. ಅದಕ್ಕೆ ಚತ್ರಕ, ನಾನು ಕುದುರೆಗಳಿಗೆ ಪರೀಕ್ಷಕ ಎಂಬ ತರಬೇತಿ ನೀಡಬಲ್ಲೆ. ಮತ್ತು ನಾನು ತರಬೇತಿ ನೀಡಿದ ಕುದುರೆಗಳು 20 ರಿಂದ 25 ಅಡಿ ಹಾರುತ್ತದೆ. ಅಲ್ಲದೇ ಯುದ್ಧ ಭೂಮಿಯಲ್ಲಿ ಶತ್ರುಗಳಿಗೆ ಚಳ್ಳೆಹಣ್ಣು ತಿನ್ನಿಸುವ ಸಾಮರ್ಥ್ಯವೂ ಅವುಗಳಿಗಿರುತ್ತದೆ. ಗಾಳಿಗಿಂತ ವೇಗವಾಗಿ ಅವು ಓಡುತ್ತದೆ. ಎಂದು ಹೇಳುತ್ತಾನೆ.
ಆಗ ರಾಜ ಈ ವಿದ್ಯೆ ಕಲಿಸಲು ಎಷ್ಟು ಸಮಯ ಬೇಕಾಗುತ್ತದೆ ಎಂದು ಕೇಳುತ್ತಾನೆ. ಆಗ ಚತ್ರಕ ನನಗೆ ಈ ವಿದ್ಯೆ ಕಲಿಸಲು 4ರಿಂದ 6 ತಿಂಗಳ ಸಮಯ ಬೇಕಾಗುತ್ತದೆ. ಆರ್ಯ ನನ್ನ ಜೊತೆ ಈ ವಿದ್ಯೆ ಕಲಿಸಲು ಸಾಥ್ ನೀಡಿದರೆ, ಇನ್ನೂ ಬೇಗ ಕಲಿಸಿಕೊಡುವೆ ಎನ್ನುತ್ತಾನೆ. ಆಗ ರಾಜ, ನನ್ನ ಕುದುರೆಗಳಿಗೆ ನೀವಿಬ್ಬರೂ ಈ ವಿದ್ಯೆ ಕಲಿಸಬೇಕು. ಅದು ವಿದ್ಯೆ ಕಲಿತು ನೀವು ಹೇಳಿದಂತೆ ಮಾಡಿದರೆ, ನಿಮಗೆ ಬಿಡುಗಡೆಗೊಳಿಸಲಾಗುತ್ತದೆ. ಅದು ವಿದ್ಯೆ ಕಲಿಯದಿದ್ದರೆ, ನಿಮಗೆ ಗಲ್ಲಿಗೇರಿಸಲಾಗುತ್ತದೆ ಎನ್ನುತ್ತಾನೆ. ನಂತರ ಏನಾಗುತ್ತದೆ…? ರಾಜನ ಕುದುರೆಗಳು ವಿದ್ಯೆ ಕಲಿಯುತ್ತದಾ..? ಆರ್ಯ, ಚತ್ರಕ ಸಾವಿನಿಂದ ತಪ್ಪಿಸಿಕೊಳ್ಳುತ್ತಾರಾ..? ಅನ್ನೋ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ.