Gadag News: ಮೈಸೂರು ರಾಜ್ಯಕ್ಕೆ ಕರ್ನಾಟಕ ನಾಮಕರಣಗೊಂಡು 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಗದಗ ನಗರದ ಕಾಟನ್ ಸೇಲ್ ಸೋಸೈಟಿ ಆವರಣದಲ್ಲಿ ಕರ್ನಾಟಕ ಸಂಭ್ರಮ-50 ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ಆ ಹಿನ್ನೆಲೆ ಐವತ್ತು ವರ್ಷಗಳ ಹಿಂದೆ ಜರುಗಿದ ಕರ್ನಾಟಕ ನಾಮಕರಣ ಸಂಭ್ರಮೋತ್ಸವದ ಐತಿಹಾಸಿಕ ಕಾರ್ಯಕ್ರಮದ ಮರುಸೃಷ್ಟಿಯ ಕಾರ್ಯಕ್ರಮಕ್ಕೆ ಗದಗ-ಬೆಟಗೇರಿ ಅವಳಿ ನಗರ ದೀಪಾಲಂಕಾರ ಹಾಗೂ ಚಿತ್ತಾರಗಳೊಂದಿಗೆ ಮದು ಮಗಳೇ ನಾಚುವಂತೆ ಸಿಂಗಾರಗೊಂಡಿದೆ. ಅವಳಿ ನಗರದ ವೃತ್ತಗಳು, ಬೀದಿಗಳು, ಜಿಲ್ಲಾಡಳಿತ ಭವನ ಸೇರಿದಂತೆ ಸರಕಾರಿ ಕಚೇರಿಗಳು ದೀಪಾಲಂಕರಗಳೊಂದಿಗೆ ಝಗಮಗಿಸುತ್ತಿರುವೆ.
ಗದಗ ಜಿಲ್ಲಾಡಳಿತ ಭವನಕ್ಕೆ ಮಾಡಿದಂತಹ ವಿದ್ಯುತ ದೀಪಾಲಂಕಾರ ಈಗ ಅವಳಿ ನಗರದ ಜನತೆಗೆ ಪೋಟೋ ಹಾಗೂ ಸೆಲ್ಫಿ ಸ್ಟಾಟ ಆಗಿದೆ. ತಡರಾತ್ರಿಯವರೆಗೂ ಅವಳಿ ನಗರದ ಸಾರ್ವಜನಿಕರು ಕುಟುಂಬ, ಸ್ನೇಹಿತರುಗಳು ತಂಡೊಪ ತಂಡವಾಗಿ ಜಿಲ್ಲಾಡಳಿತಕ್ಕೆ ಆಗಮಿಸಿ ಸೆಲ್ಫಿ ಹಾಗೂ ಪೊಟೊ ಶೂಟ ಮಾಡಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.