Gadag News: ಕಳೆದ ಎರಡು ತಿಂಗಳದಿಂದ ವೈರಲ್ ಜ್ವರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಜನ ಜೀವನ ತತ್ತರವಾಗಿದೆ ಅಲ್ಲದೇ ಬಹುತೇಕ ಮಕ್ಕಳಲ್ಲಿ ಈ ವೈರಲ್ ಜ್ವರ ಹೆಚ್ಚಾಗಿ ಕಾಣುಸುತ್ತಿದೆ.ಇನ್ನೂ ಯುವಕರಲ್ಲಿ ಟೈಫಾಯಿಡ್ ಜ್ವರ್ ಕೂಡ ಕಾಣಿಸಿಕೊಳ್ಳುತ್ತಿದೆ.ಇದಕ್ಕೆಲ್ಲ ಕಾರಣ ಹವಾಮಾನ ವೈಪರಿತ್ಯ ಹಾಗೂ ಗ್ರಾಮಗಳಲ್ಲಿ ಸ್ವಚ್ಚತೆ ಹಾಗೂ ಸೊಳ್ಳೆಗಳ ಹಾವಳಿ ಎಂದು ತಿಳಿದು ಬಂದಿದೆ.
ಸದ್ಯ ಗದಗ ಜಿಲ್ಲಾದ್ಯಾಂತ ಸೊಳ್ಳೆಗಳು ಹಾವಳಿ ಹೆಚ್ಚಾಗಿದ್ದು ನಿತ್ಯ ಖಾಸಗಿ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆ ಸೇರಿದಂತೆ ತಾಲೂಕ ಆಸ್ಪತ್ರೆಗಳಲ್ಲಿ ನೂರಾರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.ದಿನನಿತ್ಯವೂ ರೋಗಿಗಳು ಸರದಿ ಸಾಲಿನಲ್ಲಿ ನಿಂತುಕೊಂಡು ಚೀಟಿ ಪಡೆಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ.
ಆಯಾ ಗ್ರಾಮದ ಗ್ರಾಮ ಪಂಚಾಯತಿಗಳು ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದ್ದು ಕೆಲವೊಂದು ಗ್ರಾಮ ಪಂಚಾಯತಿಗಳಲ್ಲಿ ಜಾಗೃತಿ ಮೂಡಿಸುವ ಗೊಜಿಗೆ ಹೊಗುತ್ತಿಲ್ಲ ಇನ್ನೂ ಸೊಳ್ಳೆಗಳ ನಿಯಂತ್ರಣಕ್ಕಾಗಿ ನಿತ್ಯ ಸಂಜೆ ಫಾಗಿಂಗ ಮಾಡಬೇಕಾಗಿದೆ ಆದರೆ ಇಲ್ಲಿಯವರೆಗೆ ಯಾವ ಗ್ರಾಮದಲ್ಲಿಯೂ ಫಾಗಿಂಗ್ ಮಾಡಿಲ್ಲ ಎಂದು ಜನರು ಆರೋಪಿಸಿದ್ದಾರೆ. ಇನ್ನೂ ಹಲವಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಇದುವರೆಗೂ ಚರಂಡಿ ಸ್ವಚ್ಚತೆ ಇಲ್ಲದಿರುವುದರಿಂದ ದಿನನಿತ್ಯವೂ ಸೊಳ್ಳೆಗಳು ಹೆಚ್ಚುತ್ತಲೇ ಇದೆ.ಎಂದು ಕೆಲವೊಂದು ಗ್ರಾಮಗಳಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.




