Sandalwood: ಚಿತ್ರರಂಗದಲ್ಲಿ ಗ್ರೂಪಿಸಂ ನಡೆಯುತ್ತಿರುವ ಬಗ್ಗೆ ಮಾತನಾಡಿರುವ ಹಾಸ್ಯ ಕಲಾವಿದ ವಿಶ್ವ ಅವರು, ಇತ್ತೀಚೆಗೆ ಬರುವ ಕಲಾವಿದರು, ಗ್ರೂಪ್ ಮಾಡಿಕ“ಳ್ಳುತ್ತಿದ್ದಾರೆ. ಇದು ಭವಿಷ್ಯದಲ್ಲಿ ಅವರಿಗಾಗುವ ಆಪತ್ತು ಅಂತಲೇ ಹೇಳಿದ್ದಾರೆ. ಯಾಕೆ ಅಂತಾ ನೀವೇ ನೋಡಿ.
ಕೆಲ ಕಲಾವಿದರು ಕಲೆಯಿಂದ ಬರುವ ಹಣದಲ್ಲೇ ಬದುಕಬೇಕಾಗಿದೆ. ಅದರಿಂದಲೇ ಅವರು ಊಟ ಮಾಡುತ್ತಿದ್ದಾರೆ. ಆ ಹಣದಿಂದಲೇ ಮನೆ ಬಾಡಿಗೆ ಕಟ್ಟುತ್ತಿದ್ದಾರೆ. ಆ ಹಣವೇ ಅವರ ಮಕ್ಕಳ ಶಾಲೆಯ ಫೀಸ್ ಆಗಿದೆ. ಆದರೆ ಇತ್ತೀಚೆಗೆ ಬರುತ್ತಿರುವವರು ಗ್ರೂಪಿಸಂ ಮಾಡಿ, ಅಂಥ ಕಲಾವಿದರಿಗೆ ಅವಕಾಶವೇ ಸಿಗದ ಹಾಗೆ ಮಾಡುತ್ತಿದ್ದಾರೆ. ಈ ಬಗ್ಗೆ ಇಂದಿನ ಯುವ ಕಲಾವಿದರು ಯೋಚಿಸಬೇಕಿದೆ.
ಏಕೆಂದರೆ ಬರೀ ಸಿನಿಮಾ ಗೆಲ್ಲುವುದಲ್ಲ. ಚಿತ್ರರಂಗ ಗೆಲ್ಲಬೇಕು. ಆಗ ಎಲ್ಲ ಕಲಾವಿದರು ಚೆನ್ನಾಗಿರುತ್ತಾರೆ. ಆದರೆ ನೀವು ನೀವೇ ಬರೀ ಸಿನಿಮಾ ಗೆಲ್ಲಿಸುತ್ತೇವೆ ಅಂತಾ ಹೋದ್ರೆ, ಕೆಲಸ ಸಿಗದೇ, ಪರದಾಡುತ್ತಿರುವ ಕಲಾವಿದರು ಶಾಪ ಹಾಕುತ್ತಾರೆ ಎಂದು ವಿಶ್ವ ಬೇಸರ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ನಾವೂ ಟ್ಯಾಕ್ಸ್ ಕಟ್ಟುತ್ತೇವೆ. ಆದರೆ ನಮಗೆ ಅವಕಾಶವೂ ಇಲ್ಲ ಪೆನ್ಶನ್ ಕೂಡ ಇಲ್ಲ. ಸರ್ಕಾರಕ್ಕೆ ಕಲಾವಿದರಿಗೂ ಪೆನ್ಶನ್ ನೀಡಲಿಕ್ಕೆ ಆಗೋದಿಲ್ವಾ ಅಂತಾ ವಿಶ್ವ ಪ್ರಶ್ನಿಸಿದ್ದಾರೆ. ಪೂರ್ತಿ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




