Gadag News: ಗದಗ: ವಕ್ಫ್ ಗದಗ ಜಿಲ್ಲಾ ಅಧಿಕಾರಿಗೆ ಲೋಕಾಯುಕ್ತ ಶಾಕ್ ನೀಡಿದೆ. ಲಂಚ ಸ್ವೀಕರಿಸುತ್ತಿದ್ದಾರೆ ಈ ಅಧಿಕಾರಿ ಲೋಕಾ ಬಲೆಗೆ ಬಿದ್ದಿದ್ದಾನೆ.
ಮಸೀದಿಗೆ ಅನುದಾನ ಬಿಡುಗಡೆ ಶಿಫಾರಸ್ಸು ಪತ್ರ ರವಾನಿಸಲು, 1 ಸಾವಿರ ರೂಪಾಯಿ ಲಂಚದ ಬೇಡಿಕೆ ಇttiದ್ದು, ಹಣ ಪಡೆಯುವಾಗಲೇ ಅಧಿಕಾರಿ ರೆಹೆಮತ್‌ಉಲ್ಲಾ ಪೆಂಡಾರಿ ಲೋಕಾ ಬಲೆಗೆ ಬಿದ್ದಿದ್ದಾನೆ.
ಎಸ್.ಎ.ಮಕಾಂದಾರ್ ಎಂಬುವವರು ಮುಳಗುಂದ ಮಸೀದಿ ಅನುದಾನಕ್ಕೆ ಶಿಫಾರಸ್ಸು ಮಾಡಲು ಮನವಿ ಮಾಡಿದ್ದರು. ಇದಕ್ಕಾಗಿ ಅಧಿಕಾರಿ 1 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇರಿಸಿದ್ದ. ಹಾಗಾಗಿ ಮಕಾಂದಾರ್ ಲೋಕಾಯುಕ್ತಕ್ಕೆ ಈ ಬಗ್ಗೆ ದೂರು ನೀಡಿದ್ದರು.
ದೂರು ನೀಡಿದ ಹಿನ್ನೆಲೆ ಲೋಕಾ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿಯೇ ಅಧಿಕಾರಿಯನ್ನ ಅರೆಸ್t ಮಾಡಿದ್ದಾರೆ. ಲೋಕಾಯುಕ್ತ ಎಸ್ ಪಿ ಹನಮಂತರಾಯ ಮಾರ್ಗದರ್ಶನದಲ್ಲಿ ರೇಡ್ ನಡೆದಿದ್ದು, ಡಿವೈಎಸ್ ಪಿ ವಿಜಯ್ ಬಿರಾದಾರ್ ತಂಡದಿಂದ ದಾಖಲೆ ಪರಿಶೀಲನೆ ನಡೆದಿದೆ.