Health Tips: ಪಿತ್ತಕೋಶದಲ್ಲಿ ಕಲ್ಲಾಗಲು ಕಾರಣವೇನು..? ಈ ಸಮಸ್ಯೆಗೆ ಪರಿಹಾರವೇನು ಅಂತಾ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ.
ನಾವು ತ್ಯಾಜ್ಯಯುತವಾದ, ಜೀರ್ಣವಾಗದ ಆಹಾರವನ್ನು ಸೇವಿಸಿದಾಗ, ನಮ್ಮ ಪಿತ್ತಕೋಶದಲ್ಲಿ ಕಲ್ಲಾಗುವ ಸಾಧ್ಯತೆ ಇರುತ್ತದೆ. ನಾವು ಸೇವಿಸಿದ ಆಹಾರದಲ್ಲಿ ತ್ಯಾಜ್ಯವಿದ್ದರೆ, ಆ ತ್ಯಾಜ್ಯ ಒಂದೆಡೆ ಸೇರಿ, ಕಲ್ಲಾಗಿ ಮಾರ್ಪಾಡಾಗುತ್ತದೆ. ಹಾಗಾಗಿ ನಾವು ಸದಾ ಆರೋಗ್ಯಕರ ಆಹಾರವನ್ನೇ ಸೇವಿಸಬೇಕು. ಮತ್ತು ಹೆಚ್ಚು ಹೆಚ್ಚು ನೀರಿನ ಸೇವನೆ ಮಾಡಬೇಕು. ಇದರಿಂದ ನಾವು ನಮ್ಮ ದೇಹದಲ್ಲಿ, ಪಿತ್ತಕೋಶದಲ್ಲಿ ಕಲ್ಲಾಗುವುದನ್ನು ತಪ್ಪಿಸಬಹುದು.
ಅತಿಯಾಗಿ ಮಸಾಲೆ ಪದಾರ್ಥ, ಬೇಕರಿ ಆಹಾರ, ಮಾಂಸಾಹಾರ ಸೇವನೆ ಮಾಡುವುದರಿಂದಲೂ ಪಿತ್ತಕೋಶದಲ್ಲಿ ಕಲ್ಲು ಉತ್ಪತ್ತಿಯಾಗುತ್ತದೆ. ಏಕೆಂದರೆ, ಇವೆಲ್ಲವೂ ಬೇಗ ಜೀರ್ಣವಾಗುವ ಪದಾರ್ಥವಲ್ಲ. ಇದರ ಸೇವನೆ ನಂತರ ನಾವು ಹೆಚ್ಚೆಚ್ಚು ನೀರು ಕುಡಿಯಬೇಕಾಗುತ್ತದೆ. ಹಾಗೇನಾದರೂ ನಾವು ಸರಿಯಾಗಿ ನೀರಿನ ಸೇವನೆ ಮಾಡದಿದ್ದಲ್ಲಿ, ನಾವು ಅನಾರೋಗ್ಯಕ್ಕೀಡಾಗುತ್ತೇವೆ.
ಇನ್ನು ಪಿತ್ತಕೋಶದಲ್ಲಿ ಕಲ್ಲಾದರೆ, ಅದನ್ನು ಆಪರೇಷನ್ ಮೂಲಕವೇ ತೆಗೆಯಬೇಕು. ಅಥವಾ ಪಿತ್ತಕೋಶವನ್ನೇ ತೆಗೆಯಬೇಕು ಎಂದೇನಿಲ್ಲ. ನೀವು ದೇಶಿಯ ಪದ್ಧತಿ ಮೂಲಕ, ಕೆಲ ಔಷಧಿ, ಪಥ್ಯಗಳನ್ನು ಮಾಡಿ, ಪಿತ್ತಕೋಶದಲ್ಲಿರುವ ಕಲ್ಲನ್ನು ತೆಗೆಯಬಹುದು. ಈ ಬಗ್ಗೆ ವೈದ್ಯರು ಸಂಪೂರ್ಣವಾಗಿ ವಿವರಿಸಿದ್ದಾರೆ, ವೀಡಿಯೋ ನೋಡಿ.