Ganesh Chaturthi Special: ಗಣೇಶನಿಗೆ ಪ್ರಿಯವಾದ ಪಂಚಕಜ್ಜಾಯ ರೆಸಿಪಿ

Spiritual: ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಗಣೇಶನಿಗೆ ಪ್ರಿಯವಾಗ ಮೋದಕ ಹೇಗೆ ತಯಾರಿಸುವುದು ಅಂತಾ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ, ಇಂದು ನಾವು ಗಣೇಶನಿಗೆ ಪ್ರಿಯವಾದ ಪಂಚಕಜ್ಜಾಯ ಹೇಗೆ ಮಾಡುವುದು ಎಂದು ಹೇಳಲಿದ್ದೇವೆ.

ಬೇಕಾಗುವ ಸಾಮಗ್ರಿ: ಒಂದು ಕಪ್ ಕಡ್ಲೆ, ಒಂದು ಕಪ್‌ ಕಾಯಿತುರಿ, ಬೆಲ್ಲ, ಏಲಕ್ಕಿ, ಒಂದು ಸ್ಪೂನ್ ತುಪ್ಪ.

ಮಾಡುವ ವಿಧಾನ: ಮೊದಲು ಕಡ್ಲೆಯನ್ನು ಒಂದು ಬೌಲಿಗೆ ಹಾಕಿ, ಚೆನ್ನಾಗಿ ತೊಳೆಯಿರಿ. ಬಳಿಕ ಪ್ಯಾನ್‌ಗೆ ಹಾಕಿ, ಘಮ ಬರುವವರೆಗೂ ಹುರಿಯಿರಿ. ಬಳಿಕ ಕಡ್ಲೆ ತಣಿದ ಬಳಿಕ, ಅದಕ್ಕೆ ಏಲಕ್ಕಿ ಹಾಕಿ ಮಿಕ್ಸಿಗೆ ಹಾಕಿ ಪುಡಿ ಮಾಡಿ. ಈಗ ಒಂದು ಕಪ್ ಕಾಯಿತುರಿ, ಅಷ್ಟೇ ಪ್ರಮಾಣದಲ್ಲಿ ಬೆಲ್ಲ ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಹುರಿದ ಎಳ್ಳು, ಪುಡಿ ಮಾಡಿಟ್ಟುಕೊಂಡ ಕಡ್ಲೆ, ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದ್ರೆ ಕಡ್ಲೆ ಪಂಚಕಜ್ಜಾಯ ರೆಡಿ.

About The Author