Tuesday, April 15, 2025

Latest Posts

Gautami Tadimalla : ಬಿಜೆಪಿಗೆ ನಟಿ ಗುಡ್ ಬೈ..! : ಬಿಜೆಪಿ ಮೇಲೆ ಗಂಭೀರ ಆರೋಪ ಮಾಡಿದ ನಟಿ

- Advertisement -

National News : ನಟಿ ಹಾಗು ರಾಜಕೀ ಯ ನಾಯಕಿ ಇದೀಗ ಬಿಜೆಪಿ ಗೆ ಗುಡ್ ಬೈ ಹೇಳಿದ್ದಾರೆ. ನನಗೆ ದ್ರೋಹ ಎಸಗಿದ ವ್ಯಕ್ತಿಗೆ ಬಿಜೆಪಿ ಪಕ್ಷ ಸಹಾಯ ಮಾಡುತ್ತಿದೆ ಎಂಬಂತಹ ಗಂಭೀರ ಆರೋಪವನ್ನು ಕೂಡಾ ನಟಿ ಮಾಡುತ್ತಿದ್ದಾರೆ…..

ತನಗೆ ದ್ರೋಹ ಬಗೆದ ಮತ್ತು ಮೋಸ ಮಾಡಿದ ವ್ಯಕ್ತಿಗೆ ಪಕ್ಷದ ಮುಖಂಡರು ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಟಿ-ರಾಜಕಾರಣಿ ಗೌತಮಿ ತಡಿಮಲ್ಲ ಇಂದು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.

ಇಂದು ನಾನು ನನ್ನ ಜೀವನದಲ್ಲಿ ಊಹಿಸಲಾಗದ ಪರಿಸ್ಥಿತಿಯಲ್ಲಿ ಬಂದು ನಿಂತಿದ್ದೇನೆ. ಪಕ್ಷ ಅಥವಾ ನಾಯಕರಿಂದ ನನಗೆ ಯಾವುದೇ ಬೆಂಬಲ ಸಿಗುವುದಿಲ್ಲ ಎಂಬ ವಿಷಯ ಅರಿವಾಗಿದೆ. ಆದರೆ ಅವರಲ್ಲಿ ಹಲವರು ಸಕ್ರಿಯವಾಗಿ ನನಗೆ ದ್ರೋಹ ಎಸಗಿದ ವ್ಯಕ್ತಿಗೆ ಸಹಾಯ ಮಾಡುತ್ತಿದ್ದಾರೆ ಮತ್ತು ಬೆಂಬಲಿಸುತ್ತಿದ್ದಾರೆ ಎಂಬುದು ನನಗೆ ತಿಳಿದು ಬಂದಿದೆ” ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಪತ್ರದಲ್ಲಿ ಬರೆದಿದ್ದಾರೆ.

ಬಿಜೆಪಿಯೊಂದಿಗಿನ ತನ್ನ 25 ವರ್ಷಗಳ ಒಡನಾಟವನ್ನು ಕೊನೆಗೊಳಿಸಿದ ಗೌತಮಿ ತಾಡಿಮಲ್ಲ, ಪಕ್ಷದ ಕೆಲವು ನಾಯಕರು ಸಿ ಅಳಗಪ್ಪನ್ಗೆ “ಸಕ್ರಿಯವಾಗಿ ಸಹಾಯ ಮಾಡುತ್ತಿದ್ದಾರೆ ಮತ್ತು ಬೆಂಬಲಿಸುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು. ಅಳಗಪ್ಪನ್ “ತನ್ನ ಆಸ್ತಿ, ಹಣ ಮತ್ತು ದಾಖಲೆಗಳನ್ನು ವಂಚಿಸಿದ್ದಾರೆ” ಎಂದು ಗೌತಮಿ ಆರೋಪಿಸಿದ್ದಾರೆ.

ಗೌತಮಿ ತಡಿಮಲ್ಲ ಅವರು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ತಮಿಳುನಾಡು ಪಕ್ಷದ ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈ ಅವರನ್ನು ಪೋಸ್ಟ್ನಲ್ಲಿ ಟ್ಯಾಗ್ ಮಾಡಿದ್ದಾರೆ. ಜೊತೆಗೆ ಅವರು “ತುಂಬಾ ನೋವು ಮತ್ತು ದುಃಖದಿಂದ ರಾಜೀನಾಮೆಯನ್ನು ನೀಡುತ್ತಿದ್ದೇನೆ, ಆದರೆ ದೃಢಸಂಕಲ್ಪದಿಂದ ಇದ್ದೇನೆ” ಎಂದು ಹೇಳಿದರು.
ಈ ಅಳಗಪ್ಪನ್ ಯಾರು? ಎಂಬುದನ್ನು ಗೌತಮಿ ತಡಿಮಲ್ಲ ಅವರೇ ಹೇಳಿದ್ದಾರೆ. “ನಾನು ಸುಮಾರು 20 ವರ್ಷಗಳ ಹಿಂದೆ ಗಂಡನಿಂದ ಬೇರೆಯಾಗಿ ಪ್ರತ್ಯೇಕ ಜೀವನ ನಡೆಸುತ್ತಿದ್ದೆ. ಆಗ ಅಳಗಪ್ಪನ್ ನನ್ನನ್ನು ಭೇಟಿಯಾಗಿದ್ದರು. ನಾನು ತಂದೆ-ತಾಯಿಯನ್ನು ಕಳೆದುಕೊಂಡ ಬಳಿಕ ಗಂಡನಿಂದಲೂ ಬೇರೆಯಾಗಿ ನನ್ನ ಮಗಳೊಂದಿಗೆ ಜೀವನ ಸಾಗಿಸುತ್ತಿದ್ದೆ.

ಈ ಸಮಯದಲ್ಲಿ ಅಳಗಪ್ಪನ್ ಅವರು ನನಗೆ ಕಾಳಜಿ ತೋರಿಸುವ ನಾಟಕವಾಡಿದರು. ನಾನು ಸಹ ನಂಬಿದೆ. ಸುಮಾರು 20 ವರ್ಷಗಳ ಹಿಂದೆ ನಾನು ಅವನಿಗೆ ನನ್ನ ಹಲವಾರು ಜಮೀನುಗಳ ಮಾರಾಟ ಮತ್ತು ದಾಖಲೆಗಳನ್ನು ವಹಿಸಿಕೊಟ್ಟಿದ್ದೆ. ಆದರೆ ಆತ ಒಳ್ಳೆಯವನು ಎಂಬ ಸೋಗಿನಲ್ಲಿ ನನಗೆ ವಂಚನೆ ಮಾಡಿದ. ಅದು ತಡವಾಗಿ ನನಗೆ ತಿಳಿಯಿತು ಎಂದು ಗೌತಮಿ ಹೇಳಿದ್ದಾರೆ.

T Raja Singh : ಬಿಜೆಪಿ ಶಾಸಕನಿಗೆ ಡಬಲ್ ಖುಷಿ..! ಅಮಾನತು ಹಿಂಪಡೆದ ಹೈಕಮಾಂಡ್

Bhupesh Baghel : ಅವಕಾಶ ಸಿಕ್ಕರೆ ಕೇಂದ್ರ ಸರ್ಕಾರ ನನನ್ನು ಬಂಧಿಸಬಹುದು : ಮುಖ್ಯಮಂತ್ರಿ ಭೂಪೇಶ್ ಬಾಘೆಲ್

ಪ್ರಧಾನಿ ಮೋದಿಯವರನ್ನ ಭೇಟಿ ಮಾಡುಸ್ತೀನಿ ಎಂದು ಜೋಶಿಯವರು ಹೇಳಿದ್ದಾರೆ

- Advertisement -

Latest Posts

Don't Miss