ಬೆಂಗಳೂರು: ಇಂದು ಬೆಂಗಳೂರಿನಲ್ಲಿ ನಟ ಶಿವರಾಜ್‌ಕುಮಾರ್ ಪತ್ನಿ ಗೀತಾ ಶಿವರಾಜ್‌ಕುಮಾರ್ ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೀತಾ ಶಿವರಾಜ್‌ಕುಮಾರ್ ಮತ್ತು ಮಾಜಿ ಮಂತ್ರಿ ಡಿ.ಬಿ.ಲಿಂಗಯ್ಯ ಅವರನ್ನ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷವು ಈ ನಾಡಿನ ಭವಿಷ್ಯ. ಪಕ್ಷದ ತತ್ವ-ಸಿದ್ಧಾಂತಗಳು ಹಲವು ನಾಯಕರನ್ನು ಸೆಳೆಯುತ್ತಿವೆ. ಇಂದು ಪಕ್ಷಕ್ಕೆ ಸೇರ್ಪಡೆಗೊಂಡ ಶ್ರೀಮತಿ ಗೀತಾ ಶಿವರಾಜಕುಮಾರ್ ಹಾಗೂ ಮಾಜಿ ಮಂತ್ರಿ, ಮೂರು ಬಾರಿ ಶಾಸಕರಾದ ಶ್ರೀ ಡಿ.ಬಿ ಲಿಂಗಯ್ಯ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಅಭಿನಂದಿಸಿದೆ ಎಂದು ಡಿಕೆಶಿ ಟ್ವೀಟ್ ಮಾಡಿದರು.
ನಾಳೆ ಸೊರಬದಲ್ಲಿ ಸಹೋದರ ಮಧು ಬಂಗಾರಪ್ಪ ಪರ ಪ್ರಚಾರ ಮಾಡಲಿರುವ ಗೀತಾಗೆ ಪತಿ ಶಿವರಾಜ್‌ಕುಮಾರ್ ಕೂಡ ಸಾಥ್ ನೀಡಲಿದ್ದಾರೆ. ಮಧು ಬಂಗಾರಪ್ಪ ತಮ್ಮ ಸ್ವಂತ ಸಹೋದರ ಕುಮಾರ ಬಂಗಾರಪ್ಪ ವಿರುದ್ಧ ಚುನಾವಣೆಗೆ ನಿಂತಿದ್ದು, ಗೀತಾ ಕುಮಾರ್ ಬಂಗಾರಪ್ಪ ವಿರುದ್ಧ ಪ್ರಚಾರಕ್ಕಿಳಿಯಲಿದ್ದಾರೆ.
ಕಾಂಗ್ರೆಸ್ ಪಕ್ಷವು ಈ ನಾಡಿನ ಭವಿಷ್ಯ. ಪಕ್ಷದ ತತ್ವ-ಸಿದ್ಧಾಂತಗಳು ಹಲವು ನಾಯಕರನ್ನು ಸೆಳೆಯುತ್ತಿವೆ. ಇಂದು ಪಕ್ಷಕ್ಕೆ ಸೇರ್ಪಡೆಗೊಂಡ ಶ್ರೀಮತಿ ಗೀತಾ ಶಿವರಾಜಕುಮಾರ್ ಹಾಗೂ ಮಾಜಿ ಮಂತ್ರಿ, ಮೂರು ಬಾರಿ ಶಾಸಕರಾದ ಶ್ರೀ ಡಿ.ಬಿ ಲಿಂಗಯ್ಯ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಅಭಿನಂದಿಸಿದೆ. pic.twitter.com/0HU5InWJoN
— DK Shivakumar (@DKShivakumar) April 28, 2023
‘ದಮ್-ತಾಕತ್ ಇದ್ದ ಸಿಎಂ ಅಥವಾ 56 ಇಂಚಿನ ಎದೆಯ ಪ್ರಧಾನಿ ಬರಲಿ, ನಾನು ಚರ್ಚೆಗೆ ಸಿದ್ಧ’