Tuesday, April 15, 2025

Latest Posts

ಇಂದು ಕಾಂಗ್ರೆಸ್ ಸೇರಲಿದ್ದಾರೆ ದೊಡ್ಮನೆ ಸೊಸೆ..

- Advertisement -

ಬೆಂಗಳೂರು: ದೊಡ್ಮನೆ ಸೊಸೆಯಾಗಿರುವ ಗೀತಾ ಶಿವರಾಜ್‌ಕುಮಾರ್ ಇಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ನಟ ಶಿವಣ್ಣ ಮತ್ತು ಸಹೋದರ ಮಧು ಬಂಗಾರಪ್ಪ, ಗೀತಾ ಕಾಂಗ್ರೆಸ್ ಸೇರುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದು, ಪೂರ್ತಿ ಬೆಂಬಲ ನೀಡಿದ್ದಾರೆ.

ಇಂದು ಕಾಂಗ್ರೆಸ್ ಸೇರಲಿರುವ ಗೀತಾ, ನಾಳೆಯಿಂದ ಸೊರಬದಲ್ಲಿ ಮಧುಬಂಗಾರಪ್ಪ ಪರ ಪ್ರಚಾರ ನಡೆಸಲಿದ್ದಾರೆ. ಸೊರಬದಲ್ಲಿ ಸ್ವಂತ ಸಹೋದರ, ಕುಮಾರ್ ಬಂಗಾರಪ್ಪ ವಿರುದ್ಧ ಮಧು ಬಂಗಾರಪ್ಪ ಚುನಾವಣೆಗೆ ನಿಂತಿದ್ದು, ಮಧು ಬಂಗಾರಪ್ಪರಿಗೆ ಸಪೋರ್ಟ್ ಮಾಡುವ ಮೂಲಕ, ಸ್ವಂತ ಸಹೋದರನ ವಿರುದ್ಧ ಗೀತಾ ಶಿವರಾಜ್‌ಕುಮಾರ್ ಪ್ರಚಾರಕ್ಕಿಳಿಯಲಿದ್ದಾರೆ.

ಕಳೆದ ಬಾರಿ ಗೀತಾ ಶಿವರಾಜ್‌ಕುಮಾರ್ ಚುನಾವಣೆಗೆ ನಿಂತು, ಸೋಲನ್ನನುಭವಿಸಿದ್ದರು. ಹಾಗಾಗಿ ಈ ಬಾರಿ, ಕಾಂಗ್ರೆಸ್ ಸೇರುವ ಮೂಲಕ, ಮಧು ಬಂಗಾರಪ್ಪ ಪರ ಪ್ರಚಾರ ಮಾಡಿ, ಸಹೋದರನನ್ನು ಗೆಲ್ಲಿಸಲೇಬೇಕೆಂದು ಗೀತಾ ಪಣ ತೊಟ್ಟಿದ್ದಾರೆ.

‘ಕುತಂತ್ರಿಗಳು ಒಂದ್‌ ಹೆಣ್ಣುಮಗು ಮೇಲೆ ಕೇಸ್ ಹಾಕೋಕ್ಕೆ ಇಳಿದಿದ್ದಾರೆ’

ಮತದಾರರಿಗೆ ಆಮಿಷ ಒಡ್ಡಿದ್ರಾ ಹಾಸನದ ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ..?

ಮೋದಿ ವಿಷದ ಹಾವೆಂಬ ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಟ್ಟ ಮಲ್ಲಿಕಾರ್ಜುನ ಖರ್ಗೆ..

- Advertisement -

Latest Posts

Don't Miss