Jeeni Health Mix: ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ರಾಜ್ಯದಲ್ಲಿ ಅದ್ಯಾವ ಮಟ್ಟಿಗೆ ಮೋಡಿ ಮಾಡಿತ್ತು ಅಂದ್ರೆ, ಆಗಷ್ಟೇ ಬಂದಿದ್ದ ಜೀನಿ ಮಿಲೆಟ್ ಹೆಲ್ತ್ ಮಿಕ್ಸ್, ಫಟಾಫಟ್ ಅಂತ ಖಾಲಿಯಾಗುವಷ್ಟು. ಈಗಲೂ ಸಹ ಜೀನಿ ಮಿಲೆಟ್ ಹೆಲ್ತ್ ಮಿಕ್ಸ್‌ಗೆ ಅಷ್ಟೇ ಡಿಮ್ಯಾಂಡ್ ಇದೆ. ಇದರ ಸೇವನೆಯಿಂದ ಅದೆಷ್ಟೋ ಜನಕ್ಕೆ ಬಿಪಿ, ಶುಗರ್ ಕಂಟ್ರೋಲಿಗೆ ಬಂದಿದೆ. ಎಷ್ಟೋ ಜನರ ಬೆಳಗ್ಗಿನ ತಿಂಡಿಯೇ ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಆಗಿದೆ.
ಇನ್ನು ಇದಾದ ಬಳಿಕ ಬಂದಿದ್ದು, ಜೀನಿ ಸರಿಹಿಟ್ಟು. ಮಕ್ಕಳನ್ನು ಆ್ಯಕ್ಟೀವ್ ಮಾಡಲು, ತೂಕ ಹೆಚ್ಚಿಸಲು ಏನು ಮಾಡಬೇಕು ಅಂತಾ ಕಸಿಿವಿಸಿಯಲ್ಲಿದ್ದ ಅಮ್ಮಂದಿರ ಕೈಗೆ ಜೀನಿ ಸರಿಹಿಟ್ಟು ಸಿಕ್ಕಿದ್ದೇ ಸಿಕ್ಕಿದ್ದು, ಅಮ್ಮಂದಿರು ಫುಲ್ ಖುಷ್. ಇನ್ನು ಜೀನಿ ವತಿಯಿಂದ ಬೇರೆ ಬೇರೆ ವಿಧದ ಹಿಟ್ಟು, ಮಿಕ್ಸ್, ಗಾಣದ ಎಣ್ಣೆ ಎಲ್ಲ ಪ್ರಾಡಕ್ಟ್‌ಗಳು ಸಹ ರಾಜ್ಯಕ್ಕೆ ಪರಿಚಯವಾಯಿತು. ದೇಶಾದ್ಯಂತ ನೀವು ಎಲ್ಲೇ ಹೋದ್ರೂ, ನಿಮಗೀಗ ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಸಿಗತ್ತೆ.
ಅಲ್ಲದೇ, ಜೀನಿ ಕಂಪನಿಯ ಇನ್ನೊಂದು ವಿಶೇಷತೆ ಅಂದ್ರೆ, ದಕ್ಷಿಣ ಭಾರತದಲ್ಲೇ ನಂಬರ್ ಒನ್ ಮಿಲೆಟ್ ಮಿಕ್ಸ್ ಅಂದ್ರೆ, ಅದು ಜೀನಿ ಮಿಲೆಟ್ ಮಿಕ್ಸ್. ಬರೀ ಆರೋಗ್ಯಕ್ಕಷ್ಟೇ ಸಂಬಂಧ ಪಟ್ಟ ಪ್ರಾಾಡಕ್ಟ್‌ಗಳಲ್ಲದೇ, ತೂಕ ಇಳಿಸಿಕೊಳ್ಳುವವರಿಗೂ ಕೂಡ ಇತ್ತೀಚೆಗೆ ಜೀನಿ ಸ್ಲಿಮ್ ಅನ್ನೋ ಪ್ರಾಾಡಕ್ಟ್ ಕೂಡ ಲಾಂಚ್ ಮಾಡಲಾಗಿದೆ.
ಅದೇ ರೀತಿ ಇದೀಗ ಜೀನಿ ಇನ್ನೊಂದು ಹೆಜ್ಜೆ ಮುಂದಿಟ್ಟು ವಿದೇಶಿಗರಿಗೂ, ವಿದೇಶದಲ್ಲಿರುವ ಭಾರತೀಯರಿಗೂ ತನ್ನ ಮಿಲೆಟ್ ಹೆಲ್ತ್ ಮಿಕ್ಸ್ ತಲುಪಿಸುವ ಕಾರ್ಯಕ್ಕೆ ಮುಂದಾಗಿದೆ. ಇಂಗ್ಲೆಂಡ್, ಅಮೆರಿಕಾ, ಸೌದಿ ಅರೇಬಿಯಾ, ಸಿಂಗಾಪುರ, ಯುಎಇ ದೇಶದಲ್ಲಿ ಈಗ ಅಮೇಜಾನ್ ಮೂಲಕ, ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ತರಿಸಿಕೊಳ್ಳಬಹುದು. ಜೊತೆಗೆ ಜೀನಿಯ ಎಲ್ಲ ಪ್ರಾಡಕ್ಟ್‌ಗಳನ್ನು ತರಿಸಿಕೊಳ್ಳಬಹುದು.
ಒಟ್ಟಾರೆ ಕನ್ನಡಿಗ ಮಂಜುನಾಥ್ ಅವರು, ತುಮಕೂರಿನಲ್ಲಿ ಸಣ್ಣದಾಗಿ ಶುರು ಮಾಡಿದ್ದ ಜೀನಿ ಮಿಲೆಟ್ಸ್ ಇದೀಗ ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆದು ನಿಂತಿದೆ. ಒಳ್ಳೆಯ ಗುಣಮಟ್ಟದ, ಆರೋಗ್ಯಕರ ಪ್ರಾಡಕ್ಟ್ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಅದೇ ನಮಗೆ ಯಶಸ್ಸು ತಂದು ಕೊಡುತ್ತದೆ ಎನ್ನುವುದಕ್ಕೆ ಜೀನಿ ಕಂಪನಿಯೇ ಉದಾಹರಣೆ ಅಂದ್ರೆ ತಪ್ಪಿಲ್ಲ. ಇದೇ ರೀತಿ ಜೀನಿ ಇಡೀ ಪ್ರಪಂಚದಾದ್ಯಂತ ಹೆಸರು ಮಾಡಲಿ ಎನ್ನುವುದು ನಮ್ಮ ಆಶಯ.