Political News: ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಾನಾ ಮರ್ಯಾದೆ ಇದ್ದಲ್ಲಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಸಿದ್ದರಾಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರ ಕೈಯಲ್ಲೂ ರಾಜ್ಯ ನಡೆಸಲು ಸಾಧ್ಯವಿಲ್ಲ. ಇವರಿಬ್ಬರ ರಾಜೀನಾಮೆ ತೆಗೆದುಕ“ಂಡು, ಮೂರನೇಯವರನ್ನು ಸಿಎಂ ಮಾಡಿದರಷ್ಟೇ ಸರಿಯಾಗೋದು. ಹೀಗೆ ಮಾಡಿ ಗೌರವ ಉಳಿಸಿಕ“ಳ್ಳಿ. ಇವರಿಬ್ಬರ ಕೈಯಲ್ಲಿ ಆಡಳಿತ ನಡೆಸಲು ಆಗೋದಿಲ್ಲ ಎಂದು ಹೆಚ್ಡಿಕೆ ಹೇಳಿದ್ದಾರೆ.
ಇಂದಿನ ಬೆಳವಣಿಗೆ ನೋಡಿದಾಗ, ರಾಜ್ಯ ಕುಲಗೆಟ್‌ಟರು ಪರ್ವಾಗಿಲ್ಲ. ನಾನು ಅಧಿಕಾರದಲ್ಲಿ ಮುಂದುವರಿಬೇಕು ಅಂತಾ ಹೇಳುವವರೇ ಇದ್ದಾರೆ. ನನ್ನ ಬಾಯಿ ಚಪಲಕ್ಕೆ ನಾನು ಆರೋಪ ಮಾಡುತ್ತಿಲ್ಲ. ಎಲ್ಲ ಎವಿಡೆನ್ಸ್ ಇರಿಸಿಯೇ ಮಾತನಾಡಿದ್ದೇನೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಇನ್ನು ಕೇತಗಾನಹಳ್ಳಿ ಕೇಸ್ ಬಗ್ಗೆ ಪ್ರತಿಕ್ರಿಯಿಸಿರುವ ಹೆಚ್ಡಿಕೆ, ನಾನು 40 ವರ್ಷಕ್ಕೂ ಮುಂಚೆ ಅಂದ್ರೆ, ನಾನು ರಾಜಕಾರಣಕ್ಕೆ ಬರುವುದಕ್ಕೂ ಮುನ್ನವೇ ಖರೀದಿಸಿದ್ದ ಜಮೀನು ಅದು. ನಾನು ಆ ಜಮೀನಿನಲ್ಲಿ ಏನಾದ್ರೂ ಅಕ್ರಮ ಮಾಡಿದ್ದರೆ ಮುಟ್ಟುಗೋಲು ಹಾಕಿಕ“ಳ್ಳಲಿ. ಹಲವು ವರ್ಷಗಳ ಹಿಂದಿನಿಂದಲೂ ನನ್ನನ್ನು ಜೈಲಿಗೆ ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ನನ್ನ ಜೈಲಿಗೆ ಕಳುಹಿಸಲು ಪ್ರಯತ್ನಿಸಿದವರಲ್ಲಿ ಓರ್ವ ತೀರಿಹೋದ. ಆದರೆ ನಾನು ಎಲ್ಲಿಯೂ ಕದ್ದು ಹೋಗಿಲ್ಲ. ಲೋಕಾಯುಕ್ತವನ್ನೂ ನಾನು ಫೇಸ್ ಮಾಡಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಅಲ್ಲದೇ, ಅದು ನಾನು ಕಷ್ಪಟ್ಟು ಮಾಡಿರುವ ಆಸ್ತಿ. ಇವರ ಹಾಗೆ ಲೂಟಿ ಮಾಡಿರುವ ಆಸ್ತಿ ಅಲ್ಲ. ಅಧಿಕಾರಿಗಳನ್ನು ಇರಿಸಿಕ“ಂಡು ಆಟವಾಡುತ್ತಿದ್ದೀರಾ..? ಇದನ್ನೆಲ್ಲಾ ಕೋರ್ಟ್ ತೀರ್ಮಾನ ಮಾಡುತ್ತದೆ ಎಂದು ಹೆಚ್ಡಿಕೆ ಹೇಳಿದ್ದಾರೆ.