Political News: ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿದ ಬಳಿಕ, ಬಣ ಬಡಿದಾಟ ಕಡಿಮೆಯಾಗಿತ್ತು. ಆದರೆ ಇದೀಗ ಕುಮಾರ್ ಬಂಗಾರಪ್ಪ ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ನೀವು ಹೊಂದಾಣಿಕೆ ರಾಜಕಾರಣ ಮಾಡಿ, ಕೈಚೆಲ್ಲಿ ಕುಳಿತರೆ ಹೇಗೆ ಅಂತಾ ಪ್ರಶ್ನಿಸಿರುವ ಕುಮಾರ್ ಬಂಗಾರಪ್ಪ, ವಿಜಯೇಂದ್ರ ಅವರ ರಾಜಕಾರಣಕ್ಕೆ ನಮ್ಮ ವಿರೋಧವಿದೆ ಎಂದಿದ್ದಾರೆ. ಇನ್ನು ಯತ್ನಾಳ್ ಕೂಡ ಈ ಹಿಂದೆ ವಿಜಯೇಂದ್ರ ಬಿಜೆಪಿಗೆ ಇರೋ ತನಕ ನಾನು ಬಿಜೆಪಿಗೆ ಹೋಗಲ್ಲ ಎಂದು ಹೇಳಿದ್ದಾರೆ.
ಇನ್ನು ಬಿಜೆಪಿಯಲ್ಲಿಯೇ ಬಂಡಾಯವೆದ್ದಿರುವ ನಾಯಕರು, ಪಕ್ಷಕ್ಕೆ ನೂತನ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ಡಿಮ್ಯಾಂಡ್ ಮಾಡಿದ್ದಾರೆ. ಈ ಮೂಲಕ ಬಿಎಸ್‌ವೈ ಕುಟುಂಬ ರಾಜಕಾರಣವನ್ನು ಬಂಡಾಯ ನಾಯಕರು ವಿರೋಧಿಸಿದ್ದಾರೆ.
ಆದರೆ ಯಾರು ಏನೇ ಹೇಳಲಿ ನಾವಂತೂ ತಲೆಕೆಡಿಸಿಕ“ಳ್ಳಲ್ಲ ಎನ್ನುವ ರೀತಿ, ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಬಿಜೆೆಪಿ ಕಚೇರಿಗೆ ಬಂದು, ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ.