ಮಲ್ಲು ಜಮಖಂಡಿ ಅಂಡ್ ಟೀಂ ಅಂದ್ರೆ ಕರ್ನಾಟಕದಲ್ಲಿ ಮನೆಮಾತು. ವಾರಕ್ಕೆ ಎರಡು ಬಾರಿ ಗುರುವಾರ ಮತ್ತು ಭಾನುವಾರ ಎರಡು ಕಾಮಿಡಿ ಸ್ಕಿಟ್ ಮಾಡೋ ಈ ಟೀಂ ಈಗ ಕರ್ನಾಟಕದ ಫೇಮಸ್ ಕಾಮಿಡಿ ಟೀಂ. ಸಿನಿಮಾ ಮಾಡಬೇಕು ಅನ್ನೋ ಕನಸು ಕಂಡು ತಮ್ಮದೇ ಮೊಬೈಲ್‌ನಲ್ಲಿ ವಿಡಿಯೋ ಮಾಡೋಕೆ ಶುರುಮಾಡಿದ ಜಮಖಂಡಿಯ ಮಲ್ಲು ಕರ್ನಾಟಕ ಟವಿಯ ಜೊತೆ ತಮ್ಮ ಕಾಮಿಡಿ ವಿಡಿಯೋಗಳ ಯಶಸ್ಸಿನ ಹಿಂದಿನ ಸೀಕ್ರೆಟ್ ಮತ್ತು ಸಂಭ್ರಮವನ್ನು ಹಂಚಿಕೊAಡ್ರು.
ಮಲ್ಲು ಜಮಖಂಡಿಯವರ ಜೊತೆ ಶಂಕ್ರಣ್ಣ, ಸಂತೋಷ್, ಆನಂದ್ ಮತ್ತು ಇತರರು ಸೇರಿ ಮಾಡೋ ಹಾಸ್ಯದ ಕಥೆಗಳು ಎಲ್ಲರ ಅಚ್ಚುಮೆಚ್ಚು. ಪ್ರತಿ ವಿಡಿಯೋಗಳು ೧೦-೧೫ ಲಕ್ಷ ವೀಕ್ಷಣೆಗೊಳಗಾಗಿದ್ದು, ಯೂಟ್ಯೂಬ್‌ನಲ್ಲಿ ೮ ಲಕ್ಷ ೩೫ ಸಾವಿರಕ್ಕೂ ಹೆಚ್ಚು ಸಬ್‌ಸ್ಕೆçöÊಬರ್‌ಗಳು ಮಲ್ಲು ಜಮಖಂಡಿ ಯೂಟ್ಯೂಬ್ ಚಾನೆಲ್‌ಗೆ ಇದ್ದಾರೆ. ವಾರಕ್ಕೆರೆಡು ವಿಡಿಯೋ ಯಾವುದೇ ದೊಡ್ಡ ಖರ್ಚು ಇಲ್ಲದೇ ಮಾಡೋ ಈ ಟೀಂ ಬರೆಯುವ ಮೂಲಕ ಸ್ಕಿçಪ್ಟ್ ಮಾಡೋದಿಲ್ಲ ಅನ್ನೋದೇ ಇಂಟರೆಸ್ಟಿAಗ್.
ಊಟಕ್ಕೋ ತಿಂಡಿಗೋ ಕೂತಾಗ ಮಲ್ಲು ಅಂಡ್ ಟೀಂ ಒಂದು ಕಾನ್ಸೆಪ್ಟ್ ಯೋಚಿಸಿದರೆ ೧೦ ನಿಮಿಷದಲ್ಲಿ ಇಡಿಯ ಕಾನ್ಸೆಪ್ಟ್ ಎಲ್ಲರ ತಲೆಯಲ್ಲೂ ರೆಡಿಯಾಗುತ್ತೆ. ಸಂತೋಷ್ ಕ್ಯಾಮೆರಾ ಹಿಡಿದ್ರೆ, ಮಲ್ಲು ಜಮಖಂಡಿ, ಆನಂದ್, ಶಂಕ್ರಣ್ಣ ಪಟಪಟನೆ ಅಳು ಹುರಿದ ಹಾಗೆ ಡೈಲಾಗ್ ಹೊಡೀತಾರೆ. ಉತ್ತರ ಕರ್ನಾಟಕ ಶೈಲಿಯ ಮಾತುಗಳಿ ಇಲ್ಲಿ ಇಂಟರೆಷ್ಟಿAಗ್ ಆಗಿದ್ರೆ, ಸರಳ ವಿಷಯಗಳನ್ನೇ ಇಟ್ಟುಕೊಂಡು ಸುಂದರವಾಗಿ ಕಾಮಿಡಿ ಪ್ರಹಸನ ನಿರೂಪಿಸೋದು ಮಲ್ಲು ಜಮಖಂಡಿ ಟೀಂ ಸ್ಪೆಷಾಲಿಟಿ.
ದಿನಕ್ಕೆ ಸಾವಿಸ ಸಾವಿರ ಸಂಖ್ಯೆಯಲ್ಲಿ ನೋಡುಗರನ್ನು ಸೆಳೀತಾ ಇರೋ ಮಲ್ಲು ಜಮಖಂಡಿ ಅಂಡ್ ಟೀಂ ತಮ್ಮ ಜರ್ನಿಯನ್ನು ಕರ್ನಾಟಕ ಟಿವಿ ಜೊತೆ ಹಂಚಿಕೊAಡಿದೆ. ನಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಆ ವಿಡಿಯೋವನ್ನೂ ನೀವು ನೋಡಬಹುದು. ಕನ್ನಡಿಗರನ್ನು ರಂಜಿಸ್ತಾ ಇರೋ ಮಲ್ಲು ಅಂಡ್ ಟೀಂಗೆ ನಮ್ಮ ಕಡೆಯಿಂದ ಕಂಗ್ರಾಜುಲೇಷನ್ಸ್.
ಓಂ,
ಕರ್ನಾಟಕ ಟಿವಿ