International News: ಬಾಲಕಿಯೊಬ್ಬಳು ಶಾಲೆಯಿಂದ ಮನೆಗೆ ಹೋಗುವಾಗ, ಹಿಂದಿನಿಂದ ಬಂದ ವ್ಯಕ್ತಿ ಆಕೆಗೆ ಮುತ್ತು ಕೊಟ್ಟು, ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ದೃಶ್ಯ ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗಿದೆ.
ಈ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ ಎನ್ನಲಾಗಿದ್ದು, ಆರೋಪಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಬಾಲಕಿ ಶಾಲೆಗೆ ಹೋಗಿ ಬರುತ್ತಿದ್ದಾಗ, ಜನಸಂದಣಿ ಇಲ್ಲದ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಕಾಮುಕ, ಆಕೆಯ ಬೆನ್ನಟ್ಟಿ ಓಡಿ ಹೋಗಿದ್ದಾನೆ. ಬಳಿಕ, ಕಟ್ಟಡವೊಂದರ ಬಳಿ, ಆಕೆಯನ್ನು ತಬ್ಬಿಕೊಂಡು, ಮುತ್ತಿಕ್ಕಿ ಕಿರುಕುಳ ನೀಡಿದ್ದಾನೆ.
ಆ ಬಾಲಕಿ ಜೋರಾಗಿ ಚೀರಾಟ ನಡೆಸಿದಾಗ, ಅಲ್ಲಿಂದ ಕಾಮುಕ ಓಡಿ ಹೋಗಿದ್ದಾನೆ. ಆದರೆ ಅವನ ಮುಖ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಕ್ಲೀಯರ್ ಆಗಿ ಸೆರೆಯಾದ ಕಾರಣ, ಪೊಲೀಸರು ಸುಲಭವಾಗಿ ಆ ಕಾಮುಕನನ್ನು ಬಂಧಿಸಿದ್ದಾರೆ.
One line for the mindset of the whole community pic.twitter.com/T2oQSXdbKC
— 𝐒𝐮𝐝𝐡𝐢𝐫 भारतीय 🇮🇳 (@seriousfunnyguy) March 18, 2024
ಭಾರತೀಯ ವಿದ್ಯಾರ್ಥಿ ಯುಎಸ್‌ನಲ್ಲಿ ಶವವಾಗಿ ಪತ್ತೆ: 2024ರ 9ನೇ ಕೊ*ಲೆ ಕೇಸ್ ಇದು..
ಟಿಕೇಟ್ ಕೈ ತಪ್ಪಿದ್ದಕ್ಕೆ ಬಿಜೆಪಿ ಸಂಸದ ಮುನಿಸ್ವಾಮಿ ಏನು ಹೇಳಿದರು ಗೊತ್ತಾ..?