ಕಲಬುರಗಿ: ಕೊಲೆಗೆ ಸುಪಾರಿ ಪಡೆದ ಪ್ರೇಯಸ್ಸಿಯೇ ಪ್ರೀಯಕರನೊಬ್ಬನನ್ನು ಸಿನಿಮೀಯ ರೀತಿಯಲ್ಲಿ ಬರ್ಬರ ಹತ್ಯೆಗೈದಿರುವ ಘಟನೆ ನಗರದಲ್ಲಿಂದು ತಡವಾಗಿ ಬೆಳಕಿಗೆ ಬಂದಿದೆ.
ಕೊಲೆಯ ಲೈವ್ ದೃಶ್ಯವನ್ನು ಮೋಬೈಲ್ನನಲ್ಲಿ ಸೇರೆ ಹಿಡಿದ ಪ್ರೇಯಸಿ ತನ್ನ ಇನ್ನೋರ್ವ ಪ್ರೀಯಕರನಿಗೆ ಕಳುಹಿಸಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಹೆತ್ತ ಮಗಳಂತಾನು ನೋಡದೆ ಹತ್ಯೆಗೈದ ಪಾಪಿ ತಂದೆ
ಕಳೆದ ಜೂನ್ 24 ರಂದು ನಗರದ ಹೊರವಲಯದ ವಾಜಪೇಯಿ ಬಡಾವಣೆ ಬಳಿ ಆಳಂದ ತಾಲೂಕಿನ ಶುಕ್ರವಾಡಿ ಗ್ರಾಮದ ದಯಾನಂದ ಲಾಡಂತಿ (24) ಎಂಬ ಯುವಕನನ್ನ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣ ಬೆನ್ನಟ್ಟಿದ ಪೊಲೀಸರು ಆರೋಪಿಗಳನ್ನ ಪತ್ತೆ ಮಾಡಿದ್ದಾರೆ. ಆದ್ರೆ ಕೊಲೆಯ ಹಿನ್ನಲೆಯ ಸ್ಟೋರಿ ಕೇಳಿದ ಪೊಲೀಸರೇ ಒಂದುಕ್ಷಣ ದಂಗಾಗಿದ್ದಾರೆ. ಇದನ್ನೂ ಓದಿ: 50 ವರ್ಷ ಪೂರೈಸಿದ ಸೌರವ್ ದಾದಾ
ದಯಾನಂದ ದುಬೈನಲ್ಲಿ ಪೇಟಿಂಗ್ ಕೆಲಸ ಮಾಡುತ್ತಿದ್ದ, ಇತ್ತೀಚಿಗಷ್ಟೇ ತನ್ನೂರಿಗೆ ಬಂದು ಮತ್ತೆ ಮರಳಿ ದುಬೈ ಹೋಗಲು ಸಿದ್ದತೆ ನಡೆಸಿದ್ದ, ಈ ನಡುವೆ ಕಲಬುರಗಿ ಬಸವೇಶ್ವರ ಕಾಲೋನಿ ನಿವಾಸಿ ಅಂಬಿಕಾ ಎಂಬ ವಿವಾಹಿತ ಮಹಿಳೆಯಿಂದ ದಯಾನಂದ ಮೊಬೈಲ್ ಗೆ ಕರೆಬಂದಿತ್ತು. ಮಿಸ್ ಆಗಿ ಬಂದಿದ್ದ ಮೊಬೈಲ್ ಕರೆ ದಯಾನಂದನಿಗೆ ಅಂಬಿಕಾಳ ಮೇಲೆ ಪ್ರೀತಿ ಹುಟ್ಟುವಂತೆ ಮಾಡಿತ್ತು. ಇನ್ನೂ ಮದುವೆಯಾಗದ ದಯಾನಂದ ಮೂರೇ ದಿನಗಳಲ್ಲಿ ಸಂಪೂರ್ಣವಾಗಿ ಅಂಬಿಕಾಳ ಪ್ರೀತಿಯ ಬಲೆಗೆ ಬಿದ್ದಿದ್ದ. ಆದ್ರೆ ಅಂಬಿಕಾ ದಯಾನಂದನನ್ನ ಕೊಲೆ ಮಾಡುವ ಉದ್ದೇಶದಿಂದಲೇ ಆತನನ್ನ ತನ್ನ ಬಲೆಗೆ ಹಾಕಿಕೊಂಡಿದ್ದಳು.
ಅಂಬಿಕಾಳ ಮೊಸದ ಬಗ್ಗೆ ಅರಿವಿಲ್ಲದ ದಯಾನಂದ ಆಕೆ ಬಾ ಅಂತ ಕರೆದಿದ್ದೆ ತಡ ಕಲಬುರಗಿಗೆ ಒಡೋಡಿ ಬಂದಿದ್ದ. ಹೀಗೆ ಬಂದಿದ್ದ ದಯಾನಂದನನ್ನ ತನ್ನ ಸ್ಕೂಟಿಯಲ್ಲಿ ವಾಜಪೇಯಿ ಬಡಾವಣೆ ಬಳಿ ಕರೆದುಕೊಂಡು ಹೋಗಿದ್ದಳು. ಅಲ್ಲಿ ಆಟೋದಲ್ಲಿ ಬಂದಿದ್ದ ನಗರದ ಶಹಬಜಾರ್ ನಿವಾಸಿಗಳಾದ ಕೃಷ್ಣಾ, ನೀಲಕಂಠ, ಸುರೇಶ್, ಸಂತೋಷ್ ಅನ್ನೋರ ಮುಂದೆ ದಯಾನಂದ್ ನನ್ನು ನಿಲ್ಲಿಸಿದ್ದಳು. ಸ್ವತ ಮುಂದೆ ನಿಂತು ಅಂಬಿಕಾ ದಯಾನಂದನನ್ನು ಕೊಲೆ ಮಾಡಿಸಿದ್ದಳು ಅನ್ನೋದು ತನಿಖೆಯಲ್ಲಿ ಬಯಲಾಗಿದೆ.
ಯಾದಗಿರಿ ಜಿಲ್ಲೆಯ ಕೊಡೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ಪ್ರಾಥಮಿಕ ಸುರಕ್ಷಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಅಂಬಿಕಾಗೆ ಈಗಾಗಲೇ ಮದುವೆಯಾಗಿದ್ದು, ಓರ್ವ ಮಗಳು ಕೂಡಾ ಇದ್ದಾಳೆ. ಹೀಗಿದ್ರೂ ಇದೆ ದಯಾನಂದನ ಸಹೋದರ ಸಂಬಂಧಿಯಾದ ಅನೀಲ್ ಎಂಬಾತನೊಂದಿಗೆ ಫೇಸ್ ಬುಕ್‌ನಲ್ಲಿ ಪ್ರೇಮದಲ್ಲಿ ಬಿದ್ದಿದ್ದಳು. ಅನೀಲ್ ಸಿಆರ್‌ಪಿಎಫ್ ಯೋದನಾದ ಹಿನ್ನಲೆ ಬಾರ್ಡರ್‌ನಲ್ಲಿ ಕೆಲಸ ಮಾಡುತ್ತಿದ್ದ, ಆದ್ರೆ ಇತ್ತ ದಯನಂದ ಅನೀಲ್ ಹೆಂಡತಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದೆ ಕಾರಣಕ್ಕೆ ದಯಾನಂದನನ್ನ ಕೊಲೆ ಮಾಡೋದಕ್ಕೆ ತನ್ನ ಪ್ರೇಯಸಿ ಅಂಬಿಕಾಳಿಗೆ ಸುಪಾರಿ ಕೊಟ್ಟಿದ್ದ ಎನ್ನಲಾಗಿದೆ.. ಸುಪಾರಿ ಪಡೆದ ಅಂಬಿಕಾ ದಯಾನಂದ ಜೊತೆ ಪ್ರೀತಿಯ ನಾಟಕವಾಡಿ ಕೊಲೆ ಮಾಡಿದ್ದಾಳೆ. ಪ್ರೀಯಕರನಿಗೆ ಕಳೆಸಲು ತನ್ನ ಮೊಬೈಲ್ ದಿಂದ ಕೊಲೆಯ ಲೈವ್ ವಿಡಿಯೋ ಶೂಟ್ ಮಾಡಿ ಕಳಿಸಿದ್ದಳು. ಇದೀಗ ವಿಡಿಯೋ ವೈರಲ್ ಆಗಿದೆ.
ದಯಾನಂದನ ಕೊಲೆಗೆ ಅಂಬಿಕಾ ಆಂಡ್ ಗ್ಯಾಂಗ್ ಮೂರು ಲಕ್ಷಕ್ಕೆ ಸುಪಾರಿ ಪಡೆದಿದ್ದರು. ದಯಾನಂದ ಕೊಲೆಗೆ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ಗ್ರಾಮದವರೇ ಇಬ್ಬರು ಕೊಲೆ ಮಾಡಿದ್ದಾರೆ ಅಂತ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಆದ್ರೆ ಸದ್ಯ ಕೊಲೆ ಮಾಡಿದ್ದು, ಗ್ರಾಮದವರಲ್ಲಾ ಓರ್ವ ವಿವಾಹಿತ ಮಹಿಳೆ ಮತ್ತು ಆಕೆಯ ಸಹಚರರು ಅನ್ನೋದು ಬೆಳಕಿಗೆ ಬಂದಿದೆ. ಸದ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಬಿಕಾ ಸೇರಿ ಆರು ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ..