ಡಿ ಬಾಸ್ “ಕ್ರಾಂತಿ”ಗೆ ಆಶೀರ್ವದಿಸಿದ ಶಿವಪ್ಪ..!
ಸ್ಯಾಂಡಲ್‌ವುಡ್‌ನ ಬಾಕ್ಸಾಫೀಸ್ ಸುಲ್ತಾನ್ ಮತ್ತೆ ಬಾಕ್ಸಾಫೀಸ್‌ನ ಧೂಳೆಬ್ಬಿಸೋಕೆ ಸಜ್ಜಾಗ್ತಿದ್ದಾನೆ. ಎಸ್, ಕ್ರಾಂತಿ ಚಿತ್ರದ ಸಿನಿಮಾದ ಪ್ರಚಾರ ರಾಜ್ಯದ ಮೂಲೆ ಮೂಲೆಗಳಲ್ಲೂ ಡಿ-ಭಕ್ತಗಣ ಅದ್ದೂರಿಯಾಗಿ ಮಾಡ್ತಿದ್ದಾರೆ. ದಾಸ ದರ್ಶನ್ ನಟನೆಯ ಸಿನಿಮಾ ಬರುತ್ತೆ ಅಂದ್ರೆ ಅಲ್ಲಿ ಬರೀ ಹಬ್ಬ ಅಲ್ಲ, ಅಭಿಮಾನಿಗಳಿಂದ ನಾಡ ಹಬ್ಬಾನೇ ನಡೆಯುತ್ತೆ. ಇನ್ನು ಸಿನಿಮಾ ರಿಲೀಸ್‌ಗೆ ಇನ್ನೊಂದು ತಿಂಗಳು ಇದೆ ಅನ್ನೋವಾಗಲೇ ಚಿತ್ರದ ಪ್ರಮೋಷನ್‌ನ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಮಾಡ್ತಾರೆ.
ಅದ್ರೆ ಈ ಬಾರಿ ಎಲ್ರಿಗೂ ಗೊತ್ತಿರೋ ಹಾಗೇ ಈ ಬಾರಿ ತಮ್ಮ ನೆಚ್ಚಿನ ನಟನ ಚಿತ್ರಕ್ಕೆ ಅಭಿಮಾನಿಗಳೇ ಸೇರಿ ಅದ್ಧೂರಿ ಪ್ರಚಾರವನ್ನ ಮಾಡ್ತಿದ್ದು, ಸಿನಿಮಾ ಶೂಟಿಂಗ್ ಮುಗಿಯೋ ಮೊದಲೇನೇ ಪ್ರಚಾರ ಶುರು ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು ಕ್ರಾಂತಿ ಸಿನಿಮಾದ್ದೇ ಕ್ರೇಜ್. ಇಂಟ್ರೆಸ್ಟಿAಗ್ ಅಂದ್ರೆ ಡಿ-ಬಾಸ್ ಕ್ರಾಂತಿ ಸಿನಿಮಾಗೆ ಒಳ್ಳೇದಾಗಲಿ, ಸಿನಿಮಾಗೆ, ಚಿತ್ರತಂಡಕ್ಕೆ ದೊಡ್ಡ ಸಕ್ಸಸ್ ಕೊಡಲಿ ಅಂತ ಅಭಿಮಾನಿಗಳು ಶಿವನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ.
ಅಚ್ಚರಿ ಹಾಗೂ ಖುಷಿ ಸಂಗತಿಯೇನAದ್ರೆ ಪೂಜೆ ಸಲ್ಲಿಸುವಾಗ, ಪುರೋಹಿತರು ಕ್ರಾಂತಿ ಸಿನಿಮಾಗೆ ಒಳ್ಳೆಯದಾಗಲಿ ಅಂತ ಹೇಳ್ತಿರುವಾಗಲೇ ಶಿವನ ಬಲಭಾಗದಿಂದ ಹೂವ ಬೀಳುತ್ತೆ. ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗ್ತಿದ್ದು, ಡಿ ಬಾಸ್ ಅಭಿಮಾನಿಗಳ ಭಕ್ತಿಗೆ ಮೆಚ್ಚಿ ಶಿವ ಆಶೀರ್ವದಿಸಿದ್ದಾರೆ ಅಂತ ಅಭಿಮಾನಿಗಳು ಸಂತಸ ವ್ಯಕ್ತಪಡಿಸ್ತಿದ್ದಾರೆ. ಎಲ್ಲಾ ಪಾಸಿಟಿವ್ ಆಗಿ ನಡೆಯುತ್ತಿದ್ದು, ಕ್ರಾಂತಿ ಸಿನಿಮಾ ಬಾಕ್ಸಾಫೀಸ್ ಧೂಳೆಬ್ಬಿಸೋದು ಪಕ್ಕಾ ಅಂತಿದೆ ಗಾಂಧೀನಗರ.
ಅಷ್ಟೇ ಅಲ್ಲ ತುಮಕೂರು, ಹಿರಿಯೂರು, ಶಿವಮೊಗ್ಗ, ಹೀಗೆ ರಾಜ್ಯದ ಬೀದಿ ಬೀದಿಗಳಲ್ಲೂ ಕ್ರಾಂತಿ ಪೋಸ್ಟರ್ ಹಿಡಿದು ಅಭಿಮಾನಿಗಳು ದಾಸನಿಗೆ ಜೈಕಾರ ಹಾಕ್ತಿದ್ದಾರೆ. ಎನಿವೇ ಸದ್ಯ ಪೋಲ್ಯಾಂಡ್‌ನಲ್ಲಿ ಸಾಂಗ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರೋ ಕ್ರಾಂತಿ ಟೀಂ, ಈ ತಿಂಗಳಾAತ್ಯದಲ್ಲಿ ಬೆಂಗಳೂರಿಗೆ ವಾಪಸ್ಸಾಗಲಿದೆ. ವಿ ಹರಿಕೃಷ್ಣ-ದಾಸನ ಕಾಂಬೋ ಈ ಬಾರಿ ಮತ್ತೆ ಹೇಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೊಡ್ಬೇಕಿದೆ.