ಚಲಿಸುತ್ತಿರುವ ವಾಹನದಿಂದ ಹೊರಬಿದ್ದ ಬಾಲಕಿಯರು: Viral Video

National News: ಮಕ್ಕಳನ್ನು ಶಾಲೆಯಿಂದ ವ್ಯಾನ್‌ನಲ್ಲಿ ಕರೆದುಕೊಂಡು ಹೋಗುವಾಗ, ಚಾಲಕನ ನಿರ್ಲಕ್ಷ್ಯದಿಂದ, ವ್ಯಾನ್ ಹಿಂದೆಗಡೆ ಕೂತಿದ್ದ ಬಾಲಕಿಯರು, ರಸ್ತೆಗೆ ಬಿದ್ದ ಘಟನೆ ನಡೆದಿದ್ದು, ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

ಗುಜರಾತ್‌ನ ವಡೋದರಾದಲ್ಲಿ ಈ ಘಟನೆ ನಡೆದಿದ್ದು, ಮಕ್ಕಳು ವ್ಯಾನ್‌ನಿಂದ ಕೆಳಗೆ ಬಿದ್ದ ದೃಶ್ಯ ಸ್ಥಳದಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಇಬ್ಬರೂ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ಬಿದ್ದ ಸ್ಥಳದಲ್ಲೇ ಇದ್ದ ಜನ, ಅವರನ್ನು ಎಬ್ಬಿಸಿ, ರಕ್ಷಿಸಿದ್ದಾರೆ. ಮಕ್ಕಳ ಕಾಲಿಗೆ ಪೆಟ್ಟಾಗಿದ್ದು, ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ.

ಇನ್ನು ವ್ಯಾನ್‌ನಿಂದ ಮಕ್ಕಳು ಬಿದ್ದದ್ದನ್ನು ಗಮನಿಸದ ಚಾಲಕನನ್ನು ಬೈದು, ಅಲ್ಲಿನ ಸ್ಥಳೀಯರು ಗಾಡಿ ನಿಲ್ಲಿಸಿದ್ದಾರೆ. ಬಳಿಕ, ವ್ಯಾನ್‌ನಲ್ಲಿದ್ದ ಚಾಲಕ, ಮಕ್ಕಳೆಲ್ಲ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ಒಟ್ಟಾರೆಯಾಗಿ ಪೋಷಕರು ಮಕ್ಕಳನ್ನು ಚಾಲಕರ ಮೇಲಿನ ನಂಬಿಕೆಯಿಂದ ಶಾಲೆಗೆ ಕಳಿಸುತ್ತಾರೆ. ಆದರೆ ಕೆಲ ಚಾಲಕರಿಗೆ ಅದರ ಪರಿವೇ ಇಲ್ಲದಿರುವುದು ವಿಪರ್ಯಾಸದ ಸಂಗತಿ.

11 ಲಕ್ಷ ಮೌಲ್ಯದ 202 ಸೈಲೆನ್ಸರ್ ನಾಶ ಮಾಡಿದ್ದೇವೆ‌, ನಿಯಮ ಉಲ್ಲಂಘಿಸಿದರೆ ಹುಷಾರ್: ಕಮೀಷನರ್ ಎಚ್ಚರಿಕೆ

ಚೆನ್ನಮ್ಮ ವೃತ್ತದ ಬಳಿಯಲ್ಲಿ 200ಕ್ಕೂ ಅಧಿಕ ಸೈಲೆನ್ಸರ್ ನಾಶ: ಕರ್ಕಶ ಶಬ್ದ ಮಾಡಿದರೇ ಹುಷಾರ್..!

ಡಾ.ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ಸಂತ್ರಸ್ತನ ವಿರುದ್ಧ ಪ್ರಕರಣ ದಾಖಲು

About The Author