Friday, April 4, 2025

Latest Posts

ಅಡ್ವಾಣಿಯವರಿಗೆ ಭಾರತ ರತ್ನ ನೀಡಿರುವುದು ಖುಷಿ ತಂದಿದೆ: ಮಾಜಿ ಸಿಎಂ ಜಗದೀಶ್ ಶೆಟ್ಟರ್

- Advertisement -

Hubli News: ಹುಬ್ಬಳ್ಳಿ: ರಾಷ್ಟ್ರದ ಹಿರಿಯ ನಾಯಕರು, ಮಾಜಿ ಉಪ ಪ್ರಧಾನಿಗೆ ಭಾರತ ರತ್ನ ನೀಡಿರುವುದು ಅತ್ಯಂತ ಶ್ರೇಷ್ಠ ಗೌರವ. ಅಡ್ವಾಣಿ ಅವರಿಗೆ ಪ್ರಶಸ್ತಿ ಸಿಕ್ಕಿರೋದು ಬಹಳ ಸಂತೋಷ ತಂದಿದೆ. ಅವರಿಗೆ ಹಿಂದೆಯೆ ಭಾರತ ರತ್ನ ಪ್ರಶಸ್ತಿ ಸಿಗಬೇಕಿತ್ತು. ಇವತ್ತು ಸಿಕ್ಕಿರೋದು ಬಹಳ ಆನಂದ ಆಗಿದೆ. ನಾನು ಅಡ್ವಾಣಿ ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟ‌ರ್ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಬಿಜೆಪಿಯನ್ನು ಪ್ರಬಲ ಪ್ರತಿಪಕ್ಷವಾಗಿ ರೂಪಿಸಲು ಅವರ ಪಾತ್ರ ಬಹಳ ದೊಡ್ಡದು. ರಾಮ ಮಂದಿರದ ಕನಸು ಹೊತ್ತು ರಥ ಯಾತ್ರೆ ಮಾಡಿದ್ರು. ದೇಶದ್ಯಾಂತ ಹೋರಾಟ ಮಾಡಿದ್ರು. ನನಗೆ ಬಹಳ ನೆನಪಿದೆ ರಥಯಾತ್ರೆ ಹುಬ್ಬಳ್ಳಿಗೆ ಬಂದಾಗ ಇಲ್ಲಿ ಬೃಹತ್ ಸಭೆ ಇತ್ತು. ಆ ಸಭೆಯನ್ನು ನಾನೇ ನಿರ್ವಹಣೆ ಮಾಡಿದ್ದೇ,ನಾನೆ ನಿರೂಪಣೆ ಮಾಡಿದ್ದೆ. ಅವತ್ತು ನನಗೆ ಅವರು ಷಹಬ್ಬಾಸ್ ಗಿರಿ ಕೊಟ್ಟಿದ್ರು. ಪಕ್ಷಕ್ಕಾಗಿ ಅನೇಕ ಸಮಯ ಕೊಟ್ಟಿದ್ರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ನನಗೆ ಸ್ಪೀಕರ್ ಹುದ್ದೆ ನೀಡಲು ತೀರ್ಮಾನವಾಗಿತ್ತು. ಆಗ ನಾನು ರಿಜಕ್ಟ್ ಮಾಡಿದ್ದೆ, ಸ್ಪೀಕರ್ ಆದ್ರೆ ರಾಜಕೀಯ ಚಟುವಟಿಕೆ ಹಿಂದೆ ಸರಿಬೇಕಾಗತ್ತೆ ಅಂತಾ ನಾನು ಹಿಂದೇಟು ಹಾಕಿದ್ದೆ ಎಂದರು.

ಬಿಜೆಪಿ ಕಾರ್ಯಕಾರಿಣಿಗೆ ಗೈರು ವಿಚಾರಕ್ಕೆ ಮಾತನಾಡಿದ ಅವರು, ಕೌಟುಂಬಿಕ ಕಾರ್ಯಕ್ರಮ ಇರೋ ಕಾರಣಕ್ಕೆ ಹೋಗಿಲ್ಲ. ನಾನು ನಿನ್ನೆ ಅಧ್ಯಕ್ಷರಿಗೆ ತಿಳಿಸಿದ್ದೆ. ನಾನು ಯಾವ ಕಾರ್ಯಕ್ರಮ ತಪ್ಪಸಲ್ಲ. ನನ್ನ ಕೌಟುಂಬಿಕ ಕಾರ್ಯಕ್ರಮ ಕಾರಣ ಮೊದಲೇ ಫಿಕ್ಸ್ ಆಗಿತ್ತು. ಮುನೇನಕೊಪ್ಪ ಹೋಗದೆ ಇರೋದು ನನಗೆ ಗೊತ್ತಿಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್‌ ಗ್ಯಾರಂಟಿ ಹಳ್ಳ ಹಿಡಿದಿವೆ – ಕೇಂದ್ರ ಸಚಿವ ಜೋಶಿ ಲೇವಡಿ

ಪೊರಕೆ ಹಿಡಿದು ಬೀದಿ ಸ್ವಚ್ಛಗೊಳಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್

ಡಿಸಿಎಂ ಡಿಕೆಶಿಗೆ ಅಭಿಮಾನ ತೋರಿಸಲು ಹೋಗಿ ಬಯ್ಯಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು

- Advertisement -

Latest Posts

Don't Miss