Web Story: ಇಂದು ವಿಶ್ವದೆಲ್ಲೆಡೆ ಕ್ರಿಸ್‌ಮಸ್ ಹಬ್ಬ ಆಚರಿಸಲಾಗುತ್ತಿದೆ. ಇನ್ನು ಒಂದೇ ವಾರದಲ್ಲಿ ನ್ಯೂ ಇಯರ್ ಕೂಡ ಬರಲಿದೆ. ಪ್ರತೀ ವರ್ಷ ಈ ಸಮಯದಲ್ಲಿ ಗೋವಾಾದಲ್ಲಿ ದೇಶದ ಬೇರೆ ಬೇರೆ ಭಾಗಗಳಿಂದ ಜನ ನ್ಯೂ ಇಯರ್ ಸೆಲೆಬ್ರೇಟ್ ಮಾಡಲು ಗೋವಾಗೆ ಬರುತ್ತಿದ್ದರು. ಪಾಾರ್ಟಿ ಎಂಜಾಯ್ ಮಾಡಿ, ತಿಂದು, ಕುಡಿದು ನ್ಯೂ ಇಯರ್ ಸೆಲೆಬ್ರೇಟ್ ಮಾಡುತ್ತಿದ್ದರು. ಆದರೆ ಕ್ರಿಸ್‌ಮಸ್, ನ್ಯೂ ಇಯರ್ ಬಂದರೂ ಕೂಡ, ಗೋವಾ ಮಾತ್ರ ಈ ವರ್ಷ ಖಾಲಿ ಖಾಲಿಯಾಗಿದೆ. ಹಾಗಾದ್ರೆ ಟೂರಿಸಂ ಈ ಮಟ್ಟಕ್ಕಿಳಿಯಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.
ಗೋವಾ ರಾಜ್ಯವನ್ನು ಪಾರ್ಟಿ ಕ್ಯಾಪಿಟಲ್ ಆಫ್ ಇಂಡಿಯಾ ಅಂತಲೇ ಕರೆಯಲಾಗುತ್ತದೆ. ಆದರೆ ಈ ಬಾರಿಯ ಗೋವಾ ಕ್ರಿಸ್‌ಮಸ್, ನ್ಯೂ ಇಯರ್ ಪಾರ್ಟಿ ಮಾತ್ರ ಸಪ್ಪೆ ಸಪ್ಪೆಯಾಗಿರಲಿದೆ. ರಸ್ತೆಗಳು ಖಾಲಿ ಖಾಲಿಯಾಗಿದೆ. ಹೊಟೇಲ್‌ನಲ್ಲಿ ರೂಮ್ ಗಳು ಖಾಲಿ ಖಾಲಿಯಾಗಿದೆ. ಸಂಜೆಯಾದ ಬಳಿಕ ರಂಗೇರುತ್ತಿದ್ದ ಬೀಚ್‌ಗಳು ಕೂಡ ಖಾಲಿ ಖಾಲಿಯಾಗಿದೆ.
ಬೆಲೆ ಹೆಚ್ಚಳ: ಮದ್ಯಪಾನದಿಂದ ಹಿಡಿದು, ರೂಮ್ ರೆಂಟ್, ಕ್ಯಾಬ್ ಸರ್ವಿಸ್, ಅಷ್ಟೇ ಯಾಕೆ ನಾವು ನೀವು 20 ರೂಪಾಯಿ ಕೊಟ್ಟು ಕುಡಿಯುವ ನೀರಿನ ಬಾಟಲಿ ಕೂಡ, ಡಿಸೆಂಬರ್ ತಿಂಗಳಲ್ಲಿ ಗೋವಾ ರಾಜ್ಯದಲ್ಲಿ ಮಾತ್ರ ಅದಕ್ಕಿಂತ ಹೆಚ್ಚಿನ ರೇಟ್‌ಗೆ ಮಾರಲ್ಪಡುತ್ತದೆ. ಇನ್ನು ಬ್ರ್ಯಾಂಡೆಡ್ ಜ್ಯೂಸ್ ವಿಷಯ ಕೇಳೋದೇ ಬೇಡ. ನಾನು ಮದ್ಯಪಾನ ಮಾಡೋದಿಲ್ಲಾ, ನಾರ್ಮಲ್ ಜ್ಯೂಸ್ ಸಾಕು ಅಂದ್ರು ಕೂಡ, ಅದಕ್ಕೂ ಅಗತ್ಯಕ್ಕಿಂತ ಹೆಚ್ಚು ರೇಟ್ ಕೊಟ್ಟು ಕುಡಿಯಬೇಕಾಗುತ್ತದೆ. ರೂಮ್ ಬಾಡಿಗೆ, ಕ್ಯಾಬ್ ಬಾಡಿಗೆ ಎಲ್ಲವೂ ಮೀತಿ ಮೀರಿರುವ ಕಾರಣಕ್ಕೆ, ಹೆಚ್ಚಿನ ಜನ ಗೋವಾಪಾರ್ಟಿ ಕ್ಯಾನ್ಸಲ್ ಮಾಡಿದದಾರೆ.
ಸ್ಕ್ಯಾಮ್ಸ್: ಹೊಟೇಲ್ ಬುಕಿಂಗ್ ಮಾಡುವಾಗ, ಸ್ಕೂಟಿ ಬುಕ್ ಮಾಡುವಾಗ, ಕ್ಯಾಬ್ ಬುಕ್ ಮಾಡಿದಾಗ, ಕೆಲವರು ಮೋಸ ಮಾಡುವವರೂ ಇದ್ದಾರೆ. ಈ ಕಾರಣಕ್ಕೆ ಗೋವಾಗೆ ಬಂದು ಸ್ಕ್ಯಾಮ್‌ಲ್ಲಿ ದುಡ್ಡು ಕಳೆದುಕೊಳ್ಳುವ ಬದಲು, ಇದ್ದಲ್ಲೇ ಮಜಾ ಮಾಡೋಣ ಅನ್ನೋದು ಹಲವರ ಮಾತು.
ವೀಸಾ ಫ್ರೀ ವಿದೇಶ ಪ್ರಯಾಣ: ಥೈಲ್ಯಾಂಡ್ ಸೇರಿ ಹಲವು ದೇಶಗಳಿಗೆ ವೀಸಾ ಫ್ರೀ ಪ್ರಯಾಣ ಮಾಡಬಹುದಾಗಿದ್ದು, ಈ ಕಾರಣಕ್ಕೆ ಜನ, ಗೋವಾಗೆ ಹೋಗುವ ಬದಲು, ಥೈಲ್ಯಾಂಡ್ ಸೇರಿ ಬೇರೆ ಬೇರೆ ದೇಶಗಳಿಗೆ ಹೋಗಿ, ಕ್ರಿಸ್‌ಮಸ್, ನ್ಯೂ ಇಯರ್ ಪಾರ್ಟಿ ಎಂಜಾಯ್ ಮಾಡುವ ನಿರ್ಧಾರ ಮಾಡಿದ್ದಾರೆ.