Tech News: ಜನಜಂಗುಳಿ ಇರುವ ಪ್ರದೇಶಕ್ಕೆ ನೀವು ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿರುತ್ತೀರಿ. ಅಥವಾ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿರುತ್ತೀರಿ. ಅವರು ಮರಳಿ ಮನೆಗೆ ಬರುವವರೆಗೂ, ಅವರ ಬಗ್ಗೆಯೇ ಚಿಂತೆ ಇರುತ್ತದೆ. ಅಂಥವರು ತಮ್ಮ ಮಕ್ಕಳ ರಕ್ಷಣೆಗಾಗಿ ಆ್ಯಪಲ್ ವಾಚ್ ಬಳಸಬಹುದು. ಅಥವಾ ಜಿಪಿಎಸ್ ಅಳವಡಿಸಬಹುದಾದ ವಾಚ್ ಬಳಸಬಹುದು.
ನಿಮ್ಮ ಬಳಿ ಆ್ಯಪಲ್ ಫೋನ್ ಇದ್ದಲ್ಲಿ, ಅದಕ್ಕೆ ಕನೆಕ್ಟ್ ಆಗುವಂಥ ಆ್ಯಪಲ್ ವಾಚ್ ಸಿಗುತ್ತದೆ. (ಅಥವಾ ಮೊಬೈಲ್ಗೆ ಕನೆಕ್ಟ್ ಮಾಡುವಂಥ ಯಾವುದೇ ಸ್ಮಾರ್ಟ್ ವಾಚ್ ಬಳಸಬಹುದು) ಈ ಕಿಡ್ಸ್ ಆ್ಯಪಲ್ ವಾಚನ್ನು ನೀವು ನಿಮ್ಮ ಮಕ್ಕಳ ಕೈಗೆ ಕಟ್ಟಿ, ಅದನ್ನು ನಿಮ್ಮ ಮೊಬೈಲ್ನಲ್ಲಿರುವ ಆ್ಯಪ್ಗೆ ಕನೆಕ್ಟ್ ಮಾಡಿಕೊಳ್ಳಬಹುದು. ಇದರಿಂದ ನಿಮ್ಮ ಮಕ್ಕಳು ಯಾವ ಸ್ಥಳದಲ್ಲಿ ಇದ್ದಾರೆಂದು ಗೊತ್ತಾಗುತ್ತದೆ. ದೊಡ್ಡವರಿಗಾದರೆ ನಾವು ಮೊಬೈಲ್ನಲ್ಲೇ ಮ್ಯಾಪ್ ಕನೆಕ್ಟ್ ಮಾಡಿ, ಎಲ್ಲಿದ್ದಾರೆಂದು ನೋಡಬಹುದು. ಆದರೆ ಚಿಕ್ಕ ಮಕ್ಕಳ ಶಾಲೆಯಲ್ಲಿ ಮೊಬೈಲ್ ನಿಷಿದ್ಧವಿರುತ್ತದೆ. ಅಂಥ ಸಂದರ್ಭದಲ್ಲಿ ಈ ರೀತಿಯ ವಾಾಚ್ಗಳು ಉಪಯೋಗಕ್ಕೆ ಬರುತ್ತದೆ.
ಬರೀ ವಾಚ್ ಅಷ್ಟೇ ಅಲ್ಲದೇ, ಲಾಕೆಟ್, ಕೀ ಬಂಚ್ಗಳು ಕೂಡ ಮೊಬೈಲ್ಗೆ ಕನೆಕ್ಟ್ ಮಾಡಿಕೊಳ್ಳಬಹುದು. ಕೆಲ ತಿಂಗಳ ಹಿಂದಷ್ಟೇ ಬುದ್ಧಿ ಮಾಂದ್ಯ ಬಾಲಕನೊಬ್ಬ ತಂದೆ ತಾಯಿಯಿಂದ ದೂರವಾಗಿ, ತಪ್ಪಿಸಿಕೊಂಡಿದ್ದ. ಅವನ ಲಾಕೆಟ್ನಲ್ಲಿ ಕ್ಯೂ ಆರ್ ಕೋಡ್ ಅಳವಡಿಸಲಾಗಿತ್ತು. ಇದನ್ನು ಕಂಡು ಹಿಡಿದಿದ್ದ ಪೊಲೀಸರು, ಆ ಕೋಡ್ ಸ್ಕ್ಯಾನ್ ಮಾಡಿದಾಗ, ಅವನ ತಂದೆಯ ಫೋನ್ ನಂಬರ್ ಮತ್ತು ಮನೆ ಅಡ್ರೆಸ್ ಪತ್ತೆಯಾಗಿತ್ತು. ಬಳಿಕ ಆತನ ತಂದೆ ತಾಯಿಗೆ ಕರೆ ಮಾಡಿ, ಬಾಲಕನನ್ನು ಸೇಫ್ ಆಗಿ ಮನೆಗೆ ತಲುಪಿಸಲಾಯಿತು.