- Advertisement -
Gokak News: ಗೋಕಾಕ: ಪ್ರೇಮಿಗಳು ಆಟೊ ರೀಕ್ಷಾದಲ್ಲಿ ನೇಣಿಗೆ ಶರಣಾಗಿರುವ ಘಟನೆ ಗೋಕಾಕ ತಾಲೂಕಿನ ಹೀರೆನಂದಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ರಾಘವೇಂದ್ರ ನಾರಾಯಣ ಜಾದವ (28),ರಂಜಿತಾ ಅಡಿವೆಪ್ಪ ಚೌಬಾರಿ 25 ಸಾವಿಗೀಡಾಗಿರುವ ಪ್ರೇಮಿಗಳಾಗಿದ್ದು, ಇಬ್ಬರು ಸವದತ್ತಿ ತಾಲೂಕಿನ ಮುನ್ನೋಳಿಯ ನಾಗಲಿಂಗ ನಗರದ ನಿವಾಸಿಗಳು. ಸುಮಾರು ದಿನಗಳಿಂದ ಇಬ್ಬರು ಪರಸ್ಪರ ಪ್ರೀತಿಸುತಿದ್ದರು. ಕೆಲವು ದಿನಗಳ ಹಿಂದೆ ರಂಜಿತಾಳಿಗೆ ಬೇರೆ ಹುಡುಗನ ಜೊತೆ ನಿಶ್ಚಿತಾರ್ಥವಾಗಿತ್ತು.
ಆದರೆ ಇವರಿಬ್ಬರು ಪ್ರೀತಿ ಮಾಡುವ ವಿಷಯ ಕುಟುಂಬಕ್ಕೆ ಗೊತ್ತಿರಲಿಲ್ಲ. ಮದುವೆಯಾದರೆ ತಾವು ಬೇರೆ ಬೇರೆಯಾಗುತ್ತೇವೆ ಎಂದು ಇಬ್ಬರೂ ಆಟೊ ರೀಕ್ಷಾದಲ್ಲಿ ನೇಣಿಗೆ ಶರಣಾಗಿದ್ದಾರೆ. ಗೋಕಾಕ ಗ್ರಾಮೀಣ ಪಿಎಸ್ಐ ಕಿರಣ ಮೊಹಿತೆ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕ“ಂಡಿದ್ದಾರೆ.
- Advertisement -