Monday, November 17, 2025

Latest Posts

ಚಿನ್ನದ ಬೆಲೆಯಲ್ಲಿ ₹5,620 ಭಾರೀ ಇಳಿಕೆ: ಇಂದಿನ ಚಿನ್ನದ ದರ ಎಷ್ಟು?

- Advertisement -

ಚಿನ್ನದ ಬೆಲೆಯಲ್ಲಿ ಹಾವು–ಏಣಿ ಆಟ ಮುಂದುವರಿದಿದೆ. ನವೆಂಬರ್ ತಿಂಗಳ ಆರಂಭದಿಂದಲೂ ಏರಿಕೆ ಕಂಡಿದ್ದ ಚಿನ್ನದ ದರ, ಕೆಲವು ದಿನಗಳ ಹಿಂದೆ ದಾಖಲೆಯ ಗರಿಷ್ಠ ಮಟ್ಟ ತಾಕಿದ ನಂತರ ಈಗ ಗಟ್ಟಿಯಾಗಿ ಇಳಿಕೆಯಾಗಿದೆ. ಈ ನಡುವೆ, ಇಂದು ಚಿನ್ನದ ಬೆಲೆ ಮತ್ತೆ ಸ್ವಲ್ಪ ತಗ್ಗಿದರೂ, ಮುಂದಿನ ದಿನಗಳಲ್ಲಿ ಮರುಏರಿಕೆ ಸಾಧ್ಯತೆ ಹೆಚ್ಚಾಗಿದೆ ಎಂದು ವ್ಯಾಪಾರ ವಲಯ ಅಂದಾಜು ಮಾಡುತ್ತಿದೆ.

ನವೆಂಬರ್ 13 ರಂದು 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ ₹12,862 ತಲುಪಿ ಈ ತಿಂಗಳ ಗರಿಷ್ಠ ದಾಖಲೆ ಬರೆಯಿತ್ತು. ಆದರೆ ಇದೀಗ ದರ ₹12,300ಕ್ಕೆ ಇಳಿಕೆ ಆಗಿದ್ದು, ಕಳೆದ ಗರಿಷ್ಠ ದರದಿಂದ ಒಟ್ಟು ₹5,620 ರಷ್ಟು ಕುಸಿತ ಕಂಡಿದೆ. ಹೀಗಿದ್ದರೂ, ತಿಂಗಳ ಆರಂಭದ ದರಕ್ಕಿಂತ ಇನ್ನೂ ಚಿನ್ನವು ಹೆಚ್ಚುವ ದರದಲ್ಲೇ ಇದೆ.

ಇಂದಿನ ಶುದ್ಧ ಚಿನ್ನದ ದರ ನವೆಂಬರ್ 17, ಸೋಮವಾರದಂತೆ 1 ಗ್ರಾಂ ಗೆ ₹12,497 ಇದೆ. ಅಂದ್ರೆ ₹11 ಇಳಿಕೆಯಾಗಿದೆ. 10 ಗ್ರಾಂ ಗೆ ₹1,24,970 ಇದೆ. ಅಂದ್ರೆ ₹110 ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ದರ 1 ಗ್ರಾಂ ₹11,455.

10 ಗ್ರಾಂ ಗೆ ₹1,14,550. ಜಿಎಸ್‌ಟಿ ಹೊರತುಪಡಿಸಿ ಬೆಂಗಳೂರಿನ ಇಂದಿನ ಚಿನ್ನದ ದರ 24 ಕ್ಯಾರೆಟ್ 1 ಗ್ರಾಂ ಗೆ ₹12,497. 24 ಕ್ಯಾರೆಟ್ 10 ಗ್ರಾಂ ಗೆ ₹1,24,970 ಇದೆ. ಬೆಳ್ಳಿ ಬೆಲೆ ಇಂದು 2 ರೂ ಇಳಿಕೆ ಆಗಿದ್ದು, ಒಂದು ಗ್ರಾಂ ಬೆಲೆ 167 ರೂ ಆಗಿದ್ದು, ಕೆಜಿಗೆ 1,67,000 ರೂ ಇದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss