ದಿನದಿಂದ ದಿನಕ್ಕೆ ಚಿನ್ನದ ಬೆಲೆ ರಾಕೆಟ್ ವೇಗದಲ್ಲಿ ಗಗನಕ್ಕೇರುತ್ತಿದೆ. ಇಂದು ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆಗೆ ಮತ್ತೊಂದು ದಾಖಲೆ ಸೇರ್ಪಡೆವಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಕಳೆದ ಕೆಲ ದಿನಗಳಿಂದ ಲಕ್ಷವನ್ನು ದಾಟಿದೆ. ಇಂದು 22 ಕ್ಯಾರೆಟ್ ಚಿನ್ನದ ದರ ಕೂಡ ₹1 ಲಕ್ಷ ಗಡಿ ದಾಟಿದೆ. ಇದರೊಂದಿಗೆ ಚಿನ್ನದ ದರ ಎಲ್ಲ ಸಮಯದ ಗರಿಷ್ಠ ಮಟ್ಟ ತಲುಪಿ
ದೆ. ಒಂದು ದಿನದಲ್ಲೇ 24 ಕ್ಯಾರೆಟ್ ಚಿನ್ನದ ದರ ₹1360 ಏರಿಕೆಯಾಗಿದೆ. ಮತ್ತು 22 ಕ್ಯಾರೆಟ್ ಚಿನ್ನದ ದರ ₹1250 ಹೆಚ್ಚಳವಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಪ್ರತಿ ಔನ್ಸ್‌ಗೆ 20 ಡಾಲರ್‌ನಷ್ಟು ಏರಿಕೆಯಾಗಿದೆ. ಪರಿಣಾಮವಾಗಿ, ಒಂದು ಔನ್ಸ್ ಚಿನ್ನ ಪ್ರಸ್ತುತ 3,655 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಇಂದು ಬೆಳ್ಳಿಯ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಚಿನ್ನದ ದರ ಏರಿಕೆಗೆ ಡಾಲರ್ ಮೌಲ್ಯ ಕುಸಿತವೇ ಕಾರಣವಾಗಿದೆ ಅಂತ ಹೇಳಾಗುತ್ತಿದೆ.
gfx : ಇಂದಿನ ದರ ಎಷ್ಟು?
24 ಕ್ಯಾರೆಟ್ ಚಿನ್ನ (1 ಗ್ರಾಂ): ₹11,029
22 ಕ್ಯಾರೆಟ್ ಚಿನ್ನ (1 ಗ್ರಾಂ): ₹10,110
24 ಕ್ಯಾರೆಟ್ ಚಿನ್ನ (10 ಗ್ರಾಂ): ₹1,10,290
22 ಕ್ಯಾರೆಟ್ ಚಿನ್ನ (10 ಗ್ರಾಂ): ₹1,01,100
gfx (V/O) : ಹಾಗಾದ್ರೆ ಚಿನ್ನದ ಇಂದಿನ ಬೆಲೆ ಎಷ್ಟು ಅನ್ನೋದನ್ನ ನೋಡೋದಾದ್ರೆ 1 ಗ್ರಾಂ ನ 24 ಕ್ಯಾರೆಟ್ ಚಿನ್ನ 11,029 ರೂಪಾಯಿಯಾಗಿದೆ. 1 ಗ್ರಾಂ ನ 22 ಕ್ಯಾರೆಟ್ ಚಿನ್ನ 10,110, ರೂಪಾಯಿಯಾಗಿದೆ. 10 ಗ್ರಾಂ ನ 24 ಕ್ಯಾರೆಟ್ ಚಿನ್ನ 1,10,290, 10 ಗ್ರಾಂ ನ 22 ಕ್ಯಾರೆಟ್ ಚಿನ್ನ 1,01,100 ರೂ. ಆಗಿದೆ.
gfx : ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳು
ಬೆಂಗಳೂರು / ಮುಂಬೈ / ಚೆನ್ನೈ:
22 ಕ್ಯಾರೆಟ್ (10 ಗ್ರಾಂ): ₹1,01,100
24 ಕ್ಯಾರೆಟ್ (10 ಗ್ರಾಂ): ₹1,10,290
ದೆಹಲಿ:
22 ಕ್ಯಾರೆಟ್ (10 ಗ್ರಾಂ): ₹1,01,250
24 ಕ್ಯಾರೆಟ್ (10 ಗ್ರಾಂ): ₹1,10,440
ಹೈದರಾಬಾದ್ / ವಿಜಯವಾಡ / ವಿಶಾಖಪಟ್ಟಣಂ:
22 ಕ್ಯಾರೆಟ್ (10 ಗ್ರಾಂ): ₹1,01,100
24 ಕ್ಯಾರೆಟ್ (10 ಗ್ರಾಂ): ₹1,10,290
gfx (V/O) : ಇನ್ನು ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಎಷ್ಟಿದೆ ಅನ್ನೋದನ್ನ ನೋಡೋದಾದ್ರೆ ಮುಂಬೈ, ಚೆನ್ನೈ, ಬೆಂಗಳೂರು ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,01,100 ರೂ. ಆಗಿದ್ದರೆ, 24 ಕ್ಯಾರೆಟ್ ಬೆಲೆ 1,10,290 ರೂ. ಆಗಿದೆ. ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,01,250 ರೂ. ಆಗಿದ್ದರೆ, 24 ಕ್ಯಾರೆಟ್ ಬೆಲೆ 1,10,440 ರೂ. ಆಗಿದೆ. ಇನ್ನು ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣದಲ್ಲಿ, 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 1,01,100 ರೂ. ಇದ್ದರೆ, 24 ಕ್ಯಾರೆಟ್ ಬೆಲೆ 1,10,290 ರೂ. ಆಗಿದೆ.
ಇದೀಗ ಮದುವೆ, ಉತ್ಸವಗಳ ಸೀಸನ್ ನಡೆಯುತ್ತಿರುವ ಕಾರಣ, ಗ್ರಾಹಕರು ಚಿನ್ನದ ಖರೀದಿಯಿಂದ ಹಿಂದೆ ಸರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಚಿನ್ನದ ಬೆಲೆ ಇಂಥ ರೀತಿ ಏರಿಕೆಯಾಗುವುದು ಸಾಮಾನ್ಯ ಗ್ರಾಹಕರ ಬಜೆಟ್‌ಗೆ ಆಘಾತ ನೀಡಲಿದೆ.
ಪ್ರಸ್ತುತ ಚಿನ್ನದ ಬೆಲೆಗಳು ಎಷ್ಟೆಂದರೆ ಈ ವರ್ಷದ ಆರಂಭದಿಂದ ಹಿಡಿದು ಈಗಾಗಲೇ 42%ರಷ್ಟು ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಬಡ್ಡಿ ದರಗಳ ಕುರಿತು ಫೆಡ್ ಪ್ರಕಟಣೆಗಳು ಹೊರಬರಬೇಕಿರುವ ಕಾರಣ, ಚಿನ್ನದ ಬೆಲೆ ಇನ್ನೂ ಏರಿಕೆ ಸಾಧ್ಯತೆ ಇದೆ ಎಂಬ ನಿರೀಕ್ಷೆಯಿದೆ.
ವರದಿ : ಲಾವಣ್ಯ ಅನಿಗೋಳ


