ಚಿನ್ನದ ಮಾರುಕಟ್ಟೆಯಲ್ಲಿ ಮತ್ತೆ ‘ಸೋನ ಚಂಡಮಾರುತ’ ಬೀಸಿದೆ. ದಿನೇದಿನೇ ಏರಿಕೆ ಕಾಣುತ್ತಿರುವ ಚಿನ್ನದ ದರ ಇಂದು ಮತ್ತೊಮ್ಮೆ ದಾಖಲೆ ಮಟ್ಟ ತಲುಪಿ 10 ಗ್ರಾಂ ಶುದ್ಧ ಚಿನ್ನ 1.30 ಲಕ್ಷ ರೂ ಮೀರಿ ಗಗನಕ್ಕೇರಿದೆ. ಜಾಗತಿಕ ಮಾರುಕಟ್ಟೆಯ ಉದ್ವಿಗ್ನತೆ, ಹಣದುಬ್ಬರದ ಒತ್ತಡ ಹಾಗೂ ಹೂಡಿಕೆದಾರರ ಭಾರೀ ಬೇಡಿಕೆ ಎಲ್ಲಾ ಸೇರಿ ಚಿನ್ನವನ್ನು ಮತ್ತೆ “ಸೇವಿಂಗ್ಸ್ ಕಿಂಗ್” ಆಗಿ ಪರಿಣಮಿಸಿವೆ.
ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ನಿರಂತರವಾಗಿ ಏರಿಕೆ ಕಂಡು 1.30 ಲಕ್ಷ ರೂ ಮೀರಿ ಗಗನಕ್ಕೇರಿದೆ. ಹೂಡಿಕೆದಾರರಿಂದಲೂ ಬೇಡಿಕೆ ಹೆಚ್ಚುತ್ತಿರುವ ಕಾರಣ ಚಿನ್ನದ ದರದಲ್ಲಿ ದಿನದಿಂದ ದಿನಕ್ಕೆ ಏರಿಕೆ ದಾಖಲಾಗುತ್ತಿದೆ. ಪ್ರತಿನಿತ್ಯದ ಚಿನ್ನ–ಬೆಳ್ಳಿ ದರವನ್ನ ಕೇಳಿ ಗ್ರಾಹಕರು ಶಾಕ್ ಆಗ್ತಿದ್ದಾರೆ. ಚಿನ್ನದ ಬೆಲೆ ನಿರಂತರವಾಗಿ ಏರಿಕೆ ಆಗುತ್ತಿದ್ದು, ಚಿನ್ನದ ಮೇಲಿನ ಹೂಡಿಕೆ ಹೆಚ್ಚಳದಿಂದ ಚಿನ್ನದ ಬೆಲೆ ಭಾರಿ ಏರುತ್ತಿದೆ.
22 ಕ್ಯಾರೆಟ್ 1 ಗ್ರಾಂ ಬೆಲೆ 11,955 ರೂಪಾಯಿ ಇದ್ದು, ಇಂದು 25 ರೂ ಏರಿಕೆ ಆಗಿದೆ. 10 ಗ್ರಾಂ ಬೆಲೆ 1,19,550 ರೂಪಾಯಿ ಇದೆ. ಇಂದು 10 ಗ್ರಾಂ ನಲ್ಲಿ 250 ರೂ ಹೆಚ್ಚಳ ಆಗಿದೆ. ಶುದ್ಧ ಅಪರಂಜಿ ಚಿನ್ನದ ಇಂದಿನ ದರ ಎಷ್ಟಿದೆ? ಅನ್ನೋದನ್ನ ನೋಡೋದಾದ್ರೆ ಡಿಸೆಂಬರ್ 8 ಸೋಮವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 13,042 ರೂಪಾಯಿ ಇದ್ದು, ಇಂದು 27 ರೂಪಾಯಿ ಹೆಚ್ಚಳ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,30,420 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು 270 ರೂ ಏರಿಕೆ ಆಗಿದೆ.
ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 13,042 ರೂಪಾಯಿ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,30,420 ರೂಪಾಯಿ ಇದೆ. ಈ ಬೆಲೆಯಲ್ಲಿ ಜಿಎಸ್ಟಿ ಸೇರಿಲ್ಲ, ಹೀಗಾಗಿ ಚಿನ್ನದಂಗಡಿಗಳಲ್ಲಿ ವ್ಯತ್ಯಾಸ ಇರಲಿದೆ. ಇನ್ನು ಬೆಳ್ಳಿ ಬೆಲೆ ಇಂದು ಇಳಿಕೆಯಾಗಿದ್ದು 1 ರೂ ಕಡಿತ ಆಗಿ ಬೆಲೆ 189 ರೂ ಆಗಿದ್ದು, ಕೆಜಿಗೆ 1,89,000 ರೂ ಇದೆ. ಚಿನ್ನದ ಬೆಲೆ ಇಷ್ಟು ವೇಗವಾಗಿ ಏರಿಕೆ ಕಾಣುತ್ತಿರುವುದು ನಿಮಗೆ ಆಘಾತವಾಗಿದೆಯಾ? ಹೂಡಿಕೆಗೆ ಒಂದೊಳ್ಳೆ ಅವಕಾಶವಾ? ನೀವೇನಂತೀರಿ ಕಾಮೆಂಟ್ ಮಾಡಿ.
ವರದಿ : ಲಾವಣ್ಯ ಅನಿಗೋಳ




