Gold Rate: ಚಿನ್ನದ ದರದಲ್ಲಿ ಹೆಚ್ಚಳ.. ಚಿನ್ನ ಖರೀದಿಸುವಾಗ ಈ ವಿಷಯ ಗಮನದಲ್ಲಿರಲಿ

Gold Rate: ಜುಲೈ 15ರಂದು ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದ ಬದಲಾವಣೆ ಕಂಡುಬಂದಿದ್ದು, ಕರ್ನಾಟಕ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ದರಗಳು ಬಹುತೇಕ ಸ್ಥಿರವಾಗಿವೆ. ಜಾಗತಿಕ ಮಾರುಕಟ್ಟೆಯ ಏರಿಳಿತ, ರೂಪಾಯಿ ಮೌಲ್ಯದ ಚೇತರಿಕೆ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂದಿನ ಚಿನ್ನದ ದರ ನಿಗದಿಯಾಗಿದೆ. ಮದುವೆ ಸೀಸನ್ ಹಿನ್ನೆಲೆ ಚಿನ್ನದ ಖರೀದಿಗೆ ಬೇಡಿಕೆ ಮುಂದುವರಿದಿದ್ದು, ಹೂಡಿಕೆದಾರರು ಕೂಡ ಮಾರುಕಟ್ಟೆಯ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಇಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 67 ಸಾವಿರದ 100 ರೂಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 73 ಸಾವಿರದ 200 ರೂಪಾಯಿ ದಾಖಲಾಗಿದೆ. ಒಂದು ಕೆಜಿ ಬೆಳ್ಳಿಯ ಬೆಲೆ 91 ಸಾವಿರದ 500 ರೂಪಾಯಿ ಇದೆ. ಮೈಸೂರು ಮಾರುಕಟ್ಟೆಯಲ್ಲೂ ಇದೇ ದರ ಮುಂದುವರಿದಿದ್ದು, ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 67 ಸಾವಿರದ 250 ರೂಪಾಯಿ ಹಾಗೂ 24 ಕ್ಯಾರೆಟ್ ಚಿನ್ನ 73 ಸಾವಿರದ 350 ರೂಪಾಯಿಗೆ ಮಾರಾಟವಾಗುತ್ತಿದೆ. ಮುಂಬೈನಲ್ಲೂ ಬೆಂಗಳೂರಿನ ದರವೇ ಮುಂದುವರಿದಿದೆ.

ತಜ್ಞರ ಪ್ರಕಾರ, ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳನ್ನು ಅವಲಂಬಿಸಿ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಳಿತವಾಗುವ ಸಾಧ್ಯತೆ ಇದೆ. ವಿಶೇಷವಾಗಿ ಮಧ್ಯಾಹ್ನದ ಎಂಸಿಎಕ್ಸ್ ವಹಿವಾಟು ಹಾಗೂ ಕಾಮೆಕ್ಸ್ ಮಾರುಕಟ್ಟೆಯ ಸೂಚನೆಗಳು ಸಂಜೆ ಚಿಲ್ಲರೆ ದರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

About The Author