Uttara Kannada News: ಮುಂಡಗೋಡ ತಾಲೂಕಿನ ಕೊಡಂಬಿ ಗ್ರಾಮದ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಶಾಸಕ ಶಿವರಾಮ್ ಹೆಬ್ಬಾರ್, ಮಳೆಗೋಸ್ಕರ ದೇವರಲ್ಲಿ ಮೊದಲು ಪ್ರಾರ್ಥನೆ ಮಾಡಿದ ಶಾಸಕರು, ಮಳೆ ಒಂದು ಚನ್ನಾಗಿ ಆದರೆ ರೈತ ವರ್ಗ ಖುಷಿಯಾಗಿ ಇರುತ್ತೆ. ಅವರು ಖುಷಿಯಾಗಿದ್ದರೆ ನಾವು ಚನ್ನಾಗಿ ಇರುತೇವೆ ಎಂದರು.
ಸರ್ಕಾರ ಈಗಾಗಲೇ 5 ಗ್ಯಾರಂಟಿ ಕೊಟ್ಟು ಮತ್ತೆ 6ನೇ ಗ್ಯಾರಂಟಿ ಭೂ ಗ್ಯಾರಂಟಿ 7ನೇ ಗ್ಯಾರಂಟಿ ಗಂಡು ಮತ್ತು ಹೆಣ್ಣು ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತ ಬಸ್ ಪಾಸ್ ಘೋಷಣೆ ಮಾಡಿದೆ.
ಕೋಡಂಬಿ ಗ್ರಾಮ ಪಂಚಾಯಿತಿ ವ್ಯಾಪ್ತಿ 900 ರಿಂದ್ 1000 ಎಕರೆ ರೈತರ ಜಮೀನು ಇದ್ದು ಆದರೆ ಆ ಜಮೀನಿಗೆ ರೈತ ಇನ್ನು ಮಾಲೀಕನಾಗಿಲ್ಲ. ರಾಜ್ಯ ಸರ್ಕಾರದಿಂದ ನಾವು ಕೇಂದ್ರ ಸರಕಾರಕ್ಕೆ ರೈತರಿಗೆ ಜಮೀನಿನ ಮಾಲೀಕನ ಹಕ್ಕು ಕೊಡಿ ಎಂದು ಕೇಳಿದರೆ ಕೇಂದ್ರ ಸರ್ಕಾರ ರೈತರ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಆರೋಪಿಸಿದರು.
ಮಾಜಿ ಶಾಸಕ ವಿ ಎಸ್ ಪಾಟೀಲ್ ಸರ್ಕಾರ್ ಹುಟ್ಟಿನಿಂದ ಹಿಡಿದು ಒಂದಲ್ಲ ಒಂದು ಯೋಜನೆ ಕೊಡ್ತಾ ಇದೆ. ಒಂದು ಸಂಘ ಸ್ಥಾಪನೆ ಮಾಡಿದರೆ ಬಡ ಜನರಿಗೆ ಬಹಳ ಅನುಕೂಲವಾಗಲಿದೆ. ನಮ್ಮಲ್ಲಿ ಹೊಂದಾಣಿಕೆ ಬಲು ಮುಖ್ಯ. ಸಂಘದಲ್ಲಿ ಯಾವುದೇ ರೀತಿ ರಾಜಕೀಯ ಬರಬಾರದು. ರೈತರಿಗೆ ಬಡ ಜನರಿಗೆ ಈ ಸಂಘಗಳು ಅನುಕೂಲ ಆಗಬೇಕು ಎಂದು ಹೇಳಿದರು.




