ಇಂದಿನ ಪ್ರಮುಖ ಆರ್ಥಿಕ ವಲಯದ ವರದಿ ಇಲ್ಲಿದೆ. ಬೆಲೆ ಬಾಳುವ ಲೋಹಗಳ ಮಾರುಕಟ್ಟೆಯಲ್ಲಿ ಏರಿಕೆ ಮುಂದುವರೆದಿದ್ದು, ಆಗಸ್ಟ್ 13, 2026ರಂತೆ ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಗಮನಾರ್ಹ ಬದಲಾವಣೆ ದಾಖಲಾಗಿದೆ.
ಎಸ್ ‘ಇಂದಿನ ವಹಿವಾಟಿನಂತೆ, ಅಖಿಲ ಭಾರತ ಮಟ್ಟದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ ರೂ. 1,55,100 ತಲುಪಿದೆ. ಹಾಗೆಯೇ, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ರೂ. 1,42,175 ಇದೆ. ಕಳೆದ ಒಂದು ವಾರದಲ್ಲಿ ಶೇಕಡಾ 4ರಷ್ಟು ಏರಿಕೆ ಕಂಡಿರುವ ಹಳದಿ ಲೋಹ, ಕಳೆದ ಒಂದು ವರ್ಷದ ಅವಧಿಯಲ್ಲಿ ಶೇಕಡಾ 54ಕ್ಕಿಂತ ಹೆಚ್ಚು ಲಾಭವನ್ನು ದಾಖಲಿಸಿದೆ ಅಂತ ಹೇಳಲಾಗ್ತಿದೆ!
ದೇಶದ ಪ್ರಮುಖ ಮಹಾನಗರಗಳಲ್ಲಿ ಇಂದಿನ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಮಾರುಕಟ್ಟೆ ದರಗಳನ್ನ ಈಗ ನೋಡ್ತಾ ಹೋಗೋಣ ಬನ್ನಿ! ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನ ಪ್ರತಿ 10 ಗ್ರಾಂಗೆ ರೂ. 1,54,940 ಇದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ ರೂ. 1,42,028 ಆಗಿದೆ. ಚೆನ್ನೈನಲ್ಲಿ ದೇಶದಲ್ಲೇ ಅತ್ಯಧಿಕ ದರ ದಾಖಲಾಗಿದ್ದು, 24 ಕ್ಯಾರೆಟ್ ಚಿನ್ನ ರೂ. 1,55,270 ಹಾಗೂ 22 ಕ್ಯಾರೆಟ್ ಚಿನ್ನ ರೂ. 1,42,331 ಇದೆ.
ಹಾಗೆ ಮುಂಬೈನಲ್ಲಿ ನೋಡೋದಾದರೆ, 24 ಕ್ಯಾರೆಟ್ ಚಿನ್ನ ರೂ. 1,54,820 ಮತ್ತು 22 ಕ್ಯಾರೆಟ್ ಚಿನ್ನ ರೂ. 1,41,918 ವಹಿವಾಟು ನಡೆಸುತ್ತಿದೆ. ಇನ್ನೂ ದೆಹಲಿಯಲ್ಲಿ ಕಡಿಮೆ ದರವಿದ್ದು, 24 ಕ್ಯಾರೆಟ್ ಚಿನ್ನ ರೂ. 1,54,550 ಹಾಗೂ 22 ಕ್ಯಾರೆಟ್ ಚಿನ್ನ ರೂ. 1,41,671 ದಾಖಲಾಗಿದೆ.
ಹೈದರಾಬಾದ್ ನಲ್ಲಿ ‘ 24 ಕ್ಯಾರೆಟ್ ಚಿನ್ನಡ ಬೆಲೆ ‘1,55,060 ರೂಪಾಯಿ ಹಾಗೂ 22 ಕ್ಯಾರೆಟ್ ಚಿನ್ನ 1,42,168 ರೂಪಾಯಿ ಆಗಿದೆ.
ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ತೀವ್ರವಾದ ಏರಿಕೆಯಾಗಿದೆ. ಇಂದಿನ ವರದಿ ಪ್ರಕಾರ, 999 ಶುದ್ಧತೆಯ ಪ್ರತಿ ಕೆಜಿ ಬೆಳ್ಳಿಯ ಬೆಲೆ ರೂ. 2,38,730 ತಲುಪಿದ್ದರೆ, 925 ಸ್ಟರ್ಲಿಂಗ್ ಬೆಳ್ಳಿ ರೂ. 2,20,825 ಇದೆ. ಕಳೆದ ಒಂದು ವಾರದಲ್ಲಿ ಬೆಳ್ಳಿ ದರವು ಶೇಕಡಾ 5.3ರಷ್ಟು ಹೆಚ್ಚಳ ಕಂಡಿದ್ದು, ವಾರ್ಷಿಕ ಆಧಾರದ ಮೇಲೆ ಬರೋಬ್ಬರಿ ಶೇಕಡಾ 107ರಷ್ಟು ಬಲವಾದ ಏರಿಕೆಯನ್ನು ದಾಖಲಿಸಿದೆ.
ಪ್ರಮುಖ ನಗರಗಳಾದ ಬೆಂಗಳೂರಿನಲ್ಲಿ ಪ್ರತಿ ಕೆಜಿ ಬೆಳ್ಳಿ ರೂ. 2,38,490 ಇದ್ದರೆ, ಚೆನ್ನೈನಲ್ಲಿ ಗರಿಷ್ಠ ರೂ. 2,38,990 ಮತ್ತು ದೆಹಲಿಯಲ್ಲಿ ರೂ. 2,37,890 ರಂತೆ ಮಾರಾಟವಾಗುತ್ತಿದೆ. ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳು ಮತ್ತು ಆರ್ಥಿಕ ಅಂಶಗಳ ಪ್ರಭಾವದಿಂದ ಅಮೂಲ್ಯ ಲೋಹಗಳ ಬೆಲೆಯಲ್ಲಿ ಈ ಏರಿಳಿತ ಮುಂದುವರೆದಿದೆ. ಗ್ರಾಹಕರು ಮತ್ತು ಹೂಡಿಕೆದಾರರು ಮಾರುಕಟ್ಟೆಯ ಇತ್ತೀಚಿನ ದರಗಳನ್ನು ಗಮನಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತ.



