ನೀವೇನಾದ್ರೂ ಕರ್ನಾಟಕದಲ್ಲಿ ಕೃಷಿ ಜಮೀನು ಹೊಂದಿದ್ದು, ನಿಮ್ಮ ಮನೆಯ ಹಿರಿಯರು ಅಥವಾ ಖಾತೆದಾರರು ತೀರಿಹೋಗಿದ್ರೆ, ಆ ಜಮೀನನ್ನು ನಿಮ್ಮ ಹೆಸರಿಗೆ ಅಂದ್ರೆ ‘ಪೌತಿ ಖಾತೆ’ ಮಾಡಿಸೋದು ಈಗ ತುಂಬಾನೇ ಸಿಂಪಲ್ ಆಗಿದೆ.
ಅದರಲ್ಲೂ ನೀವೊಬ್ಬರೇ ಬೇರೆ ರಾಜ್ಯದಲ್ಲೋ ಅಥವಾ ವಿದೇಶದಲ್ಲೋ ಕೆಲಸಕ್ಕೆ ಅಂತಾನೋ, ಬೇರೆ ಕಾರಣಕ್ಕೋ ಸೆಟಲ್ ಆಗಿದ್ರೆ… ‘ನಮ್ಮೂರಿನ ಜಮೀನಿನ ಖಾತೆ ಬದಲಾವಣೆ ಮಾಡೋದು ಹೇಗೆ?’ ಅನ್ನೋ ಚಿಂತೆ ಇನ್ಮೇಲೆ ಬೇಡ. ಯಾಕಂದ್ರೆ ಕರ್ನಾಟಕ ಸರ್ಕಾರ ಈ ಬಗ್ಗೆ ಹೊಸ ಹಾಗೂ ಅತ್ಯಂತ ಸುಲಭವಾದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ!”
ಮೃತಪಟ್ಟ ಖಾತೆದಾರರ ವಾರಸುದಾರರಾದ ನೀವು ಒಂದು ವೇಳೆ ಬೇರೆ ರಾಜ್ಯದಲ್ಲಿದ್ರೆ, ಪೌತಿ ಖಾತೆಗಾಗಿ ಯಾವೆಲ್ಲಾ ದಾಖಲೆಗಳನ್ನು ಕೊಡಬೇಕು ಅಂತ ನೋಡ್ಕೊಳ್ಳಿ. ಎಸ್ ‘ಮೊದಲನೆಯದಾಗಿ, ನೀವು ವಾಸಿಸುತ್ತಿರುವ ರಾಜ್ಯದ ‘ಸಕ್ಷಮ ಪ್ರಾಧಿಕಾರದಿಂದ ಡಿಜಿಟಲ್ ರೂಪದಲ್ಲಿ ಪಡೆದ ಕಾನೂನುಬದ್ಧ ವಾರಸುದಾರರ ಪ್ರಮಾಣಪತ್ರ ಬೇಕು’.
ಒಂದು ವೇಳೆ ಈ ಪ್ರಮಾಣಪತ್ರ ಕನ್ನಡದಲ್ಲೇ ಇಲ್ಲದಿದ್ರೆ, ಅದರ ಇಂಗ್ಲಿಷ್ ಅನುವಾದಿತ ಪ್ರತಿಯನ್ನು ತೆಗೆದುಕೊಂಡು, ಅಲ್ಲಿನ ನೋಟರಿಯಿಂದ ದೃಢೀಕರಿಸಬೇಕು. ಜೊತೆಗೆ, ನೂರು ರೂಪಾಯಿಯ ಸ್ಟಾಂಪ್ ಪೇಪರ್ನಲ್ಲಿ ಅಗತ್ಯವಿರುವ ಅಫಿಡವಿಟ್ ಕೊಡಬೇಕಾಗುತ್ತೆ! ಮತ್ತು ವಂಶವೃಕ್ಷದಲ್ಲಿ ಬರುವ ಕುಟುಂಬದ ಎಲ್ಲ ವಾರಸುದಾರರ ಆಧಾರ್ ಕಾರ್ಡ್ ಪ್ರತಿ ಕಡ್ಡಾಯ. ವಿದೇಶದಲ್ಲಿದ್ದರೆ ಪಾಸ್ಪೋರ್ಟ್ ಕಾಪಿ ಕೂಡ ಕೊಡಲು ಅವಕಾಶ ನೀಡಲಾಗಿದೆ.
ಇನ್ನು ಕೆಲವರಿಗೆ ಡೌಟ್ ಇರಬಹುದು – ‘ನಾವು ಬೇರೆ ದೇಶದ ಪೌರತ್ವ ಹೊಂದಿದ್ರೆ ನಮ್ಮ ಗತಿಯೇನು?’ ಅಂತ. ಅವರಿಗೂ ಕೂಡ ಕಾನೂನು ಪ್ರಕಾರ ಅಗತ್ಯವಿರುವ ವಾರಸತ್ವ ಪ್ರಮಾಣಪತ್ರ ಹಾಗೂ ಇತರ ದಾಖಲೆಗಳನ್ನು ಸಲ್ಲಿಸಿ ಪೌತಿ ಖಾತೆಗೆ ಅರ್ಜಿ ಹಾಕಲು ಈಗ ಸ್ಪಷ್ಟ ಅವಕಾಶ ಕಲ್ಪಿಸಲಾಗಿದೆ.
ಸರಿ, ಹಾಗಾದ್ರೆ ಈ ಅರ್ಜಿಯನ್ನು ಎಲ್ಲಿ ಕೊಡಬೇಕು ಗೊತ್ತಾ? ನೀವು ಹೊರರಾಜ್ಯದಲ್ಲೇ ಇರಲಿ ಅಥವಾ ವಿದೇಶದಲ್ಲೇ ಇರಲಿ, ನಿಮ್ಮ ಹತ್ತಿರದ ನಾಡಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸ್ವೀಕರಿಸಿದ ಕೂಡಲೇ ನಾಡಕಚೇರಿಯ KIOSK ಅಥವಾ ಗ್ರಾಮ ಆಡಳಿತಾಧಿಕಾರಿಗಳ ಇ-ಪೌತಿ ತಂತ್ರಾಂಶದ ಮೂಲಕ ಪ್ರಕ್ರಿಯೆ ನಡೆಯುತ್ತದೆ.
ಹೌದು ‘ಕಂದಾಯ ಇಲಾಖೆಯ ಭೂಮಿ ಉಸ್ತುವಾರಿ ಕೋಶದಿಂದ ಇ-ಪೌತಿ ತಂತ್ರಾಂಶದಲ್ಲೇ ಸ್ಪೆಷಲ್ ಆಗಿ ಅಗತ್ಯ ಮಾರ್ಪಾಡುಗಳನ್ನು ಮಾಡಲಾಗಿದೆ. ಇದರಿಂದ ದೂರದ ಊರಲ್ಲಿರೋ ಕನ್ನಡಿಗರಿಗೆ ತಮ್ಮ ಆಸ್ತಿಯ ಹಕ್ಕನ್ನು ಪಡೆದುಕೊಳ್ಳೋದು ಇನ್ಮುಂದೆ ತುಂಬಾನೇ ಸುಲಭವಾಗಲಿದೆ.




