Bellary News: ಬಳ್ಳಾರಿ: ನ್ಯಾಯ ಬೆಲೆ ಅಂಗಡಿಯ ಮಾಲೀಕರೇ ಅನ್ನಭಾಗ್ಯಕ್ಕೆ ಕನ್ನ ಹಾಕಿದ್ದು, ತೂಕ ತಪ್ಪಾಗಿ ಹಾಕುವ ಮೂಲಕ, ಪಡಿತರ ಹಂಚುವಲ್ಲಿ ಮೋಸ ಮಾಡುತ್ತಿದ್ದಾರೆಂದು ಆರೋಪ ಮಾಡಲಾಗಿದೆ.
ಅನ್ನಭಾಗ್ಯ ಯೋಜನೆಯಲ್ಲಿ ಗೋಲ್‌ಮಾಲ್ ಮಾಡಲಾಗಿದ್ದು,5 ಕೆಜಿಗಿಂತ ಕಡಿಮೆ ಅಕ್ಕಿ ವಿತರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕಾರಣಕ್ಕೆ ಗ್ರಾಮಸ್ಥರೆಲ್ಲ ಸೇರಿ, ನ್ಯಾಯಬೆಲೆ ಅಂಗಡಿಗೆ ಮುತ್ತಿಗೆ ಹಾಕಿದ್ದಾರೆ.
ಬಳ್ಳಾರಿಯ ಸಂಡೂರಿನ ಡಿ. ಅಂತಾಪುರ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಗೋಲ್‌ಮಾಲ್ ನಡೆದಿದ್ದು, ಬಡವರಿಗೆ ಅಕ್ಕಿ ವಿತರಿಸುವಾಗ, ಮೋಸ ಮಾಡುತ್ತಿದ್ದಾರೆ. 5 ಕೆಜಿ ಅಕ್ಕಿ ಕೊಡುವ ಜಾಗದಲ್ಲಿ, 4 ಕೆಜಿ ಅಕ್ಕಿ ಕೊಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಹೀಗಾಗಿ ಅಂಗಡಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು, ನ್ಯಾಯಬೆಲೆ ಅಂಗಡಿಯ ತೂಕದ ಯಂತ್ರ ಪರಿಶೀಲನೆ ಮಾಡಿದ್ದಾರೆ. ಆಗ ತೂಕದ ಯಂತ್ರದಲ್ಲಿ ಗೋಲ್‌ಮಾಲ್ ಕಂಡುಬಂದಿದ್ದು, ಅಕ್ಕಿ ವಿತರಕನಿಗೆ ಜನ ತರಾಟೆ ತೆಗೆದುಕೊಂಡಿದ್ದಾರೆ.
ನಕಲಿ ಟಿಕೆಟ್ ತೋರಿಸಿ ಏರ್‌ಪೋರ್ಟ್ ಒಳಗೆ ನುಗ್ಗಿದ ಮಹಿಳೆ- ಎಫ್‍ಐಆರ್ ದಾಖಲು
ಚೀನಾದಲ್ಲಿ H9N2 ಆರ್ಭಟ : ಕೇಂದ್ರ ಸರ್ಕಾರದಿಂದ ದೇಶಾದ್ಯಂತ ಮುನ್ನೆಚ್ಚರಿಕಾ ಕ್ರಮ