Friday, February 21, 2025

Latest Posts

ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್: ನಾಳೆ ಖಾತೆಗೆ ಬರಲಿದೆ ನವೆಂಬರ್ ತಿಂಗಳ ಬಾಕಿ ಹಣ

- Advertisement -

Political News: ರಾಜ್ಯ ಸರ್ಕಾರದ ಗ್ಯಾರಂಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದು. ಆದರೆ ಗೃಹಲಕ್ಷ್ಮೀ ಯೋಜನೆಯ ದುಡ್ಡು, ಫಲಾನುಭವಿಗಳಿಗೆ ಸರಿಯಾದ ಸಮಯಕ್ಕೆ ತಲುಪುತ್ತಿಲ್ಲ ಅನ್ನೋದು ಹಲವು ಮಹಿಳೆಯರ ಕಂಪ್ಲೇಂಟ್ ಆಗಿತ್ತು. ಆದರೆ ನವೆಂಬರ್ ತಿಂಗಳ ಬಾಕಿ ಹಣ ನಾಳೆ ಗೃಹಲಕ್ಷ್ಮೀಯರ ಖಾತೆ ಬರಲಿದೆ.

ಈಗಾಗಲೇ ಡಿವಿಷನ್‌ಗಳ ಮೂಲಕ ಟಿಬಿಡಿ ಪ್ರಕ್ರಿಯೆ ಶುರುವಾಗಿದ್ದು, ಒಂದು ತಿಂಗಳಿನ 2,400 ಕೋಟಿ ಹಣ ಬಿಡುಗಡೆಯಾಗಿದೆ. ಹಾಗಾಗಿ ನವೆಂಬರ್ ತಿಂಗಳ ದುಡ್ಡು ನಾಳೆ ಬರಲಿದೆ. ಇನ್ನು ಡಿಸೆಂಬರ್ ತಿಂಗಳ ದುಡ್ಡು ಮುಂದಿನ ವಾರ ಬರುವ ಎಲ್ಲ ಸಾಧ್ಯತೆಗಳಿದೆ. ಈ ಮೂಲಕ ಎರಡು ತಿಂಗಳ ದುಡ್ಡು ಈ ಒಂದೇ ತಿಂಗಳಿಗೆ ಬರಲಿದ್ದು, 4 ಸಾವಿರ ರೂಪಾಯಿ ಗೃಹಲಕ್ಷ್ಮೀಯರ ಕೈ ಸೇರಲಿದೆ.

ಇನ್ನು ಯಾಕೆ ಇಷ್ಟು ತಿಂಗಳು ಹಣ ಜಮೆಯಾಗಿಲ್ಲ ಎಂಬ ಪ್ರಶ್ನೆಗೆ ಉತ್ತರ, ಜಮಾ ಪ್ರಕ್ರಿಯೆಯಲ್ಲಿ ಬದಲಾವಣೆಯಾಗಿತ್ತು. ಈ ಕಾರಣಕ್ಕೆ ಗೃಹಲಕ್ಷ್ಮೀ ಹಣವನ್ನು ಸ್ಥಗಿತಗೊಳಸಲಾಗಿತ್ತು. ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಕ್ರಿಯೆ ಆರಂಭಿಸಿ, ಹಣ ಹಂಚಿಕೆಗೆ ಮುಂದಾಗಿದೆ.

ಗೃಹಲಕ್ಷ್ಮೀ ಯೋಜನೆಯಡಿ ಮನೆಯೊಡತಿಗೆ ಪ್ರತೀ ತಿಂಗಳು 2 ಸಾವಿರ ರೂಪಾಯಿ ಕೊಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿ ಮಾಡಿತ್ತು. ಈ ಮೊದಲು ಪ್ರತೀ ತಿಂಗಳು ಸರಿಯಾದ ಸಮಯಕ್ಕೆ ಪ್ರತೀ ತಿಂಗಳು ಹಣ ಬರುತ್ತಿದ್ದು, ಹಲವು ಹೆಣ್ಣು ಮಕ್ಕಳು ಇದರ ಉಪಯೋಗ ಪಡೆದಿದ್ದಾರೆ. ಆದರೆ ನವೆಂಬರ್‌ನಿಂದ ಹಣ ಬಿಡುಗಡೆ ಸ್ಥಗಿತಗೊಂಡಿದ್ದು, ನಾಳೆ ಖಾತೆಗೆ ಹಣ ಬರಲಿದೆ.

- Advertisement -

Latest Posts

Don't Miss