Political News: ಗೃಹಲಕ್ಷ್ಮೀ ಕಂತಿನ ಹಣ ತಿಂಗಳಿಗೆ ಸರಿಯಾಗಿ ನಮ್ಮ ಅಕೌಂಟ್‌ಗೆ ಬರುತ್ತಿಲ್ಲವೆಂದು ರಾಜ್ಯದ ಹೆಣ್ಣು ಮಕ್ಕಳು ದೂರುತ್ತಿರುವಾಗಲೇ, ಅಕ್ಟೋಬರ್, ನವೆಂಬರ್ ತಿಂಗಳ ಹಣವನ್ನು ಗೃಹಲಕ್ಷ್ಮೀಯರ ಅಕೌಂಟ್‌ಗೆ ಬಂದಿತ್ತು. ಇದೀಗ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದು, ಮುಂದಿನ ಗೃಹಲಕ್ಷ್ಮೀ ಹಣ ಡಬಲ್ ಬರಲಿದೆಯಂತೆ. ಅಂದ್ರೆ ಡಿಸೆಂಬರ್, ಜನವರಿ ತಿಂಗಳ ಕಂತಿನ ಹಣ ಒಟ್ಟಾಗಿ, 4 ಸಾವಿರ ರೂಪಾಯಿ ಹಣ ಗೃಹಲಕ್ಷ್ಮೀಯರ ಅಕೌಂಟ್‌ಗೆ ಬರಲಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಮಾತನಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಾರ್ಚ್ 31ರ ಬಳಿಕ ಗೃಹಲಕ್ಷ್ಮೀಯರ ಖಾತೆಗೆ 2 ತಿಂಗಳ ಹಣವನ್ನು ಒಟ್ಟಾಗಿ ಹಾಕುವುದಾಗಿ ಹೇಳಿದ್ದಾರೆ. ಈ ಮೊದಲು ಬಾಕಿ ಉಳಿದಿದ್ದ ಗೃಹಲಕ್ಷ್ಮೀ 2 ತಿಂಗಳ ಬಾಕಿ ಕಂತು ಕೆಲ ದಿನಗಳ ಹಿಂದಷ್ಟೇ ಅಕೌಂಟ್ ಸೇರಿತ್ತು. ಆದರೆ ಇನ್ನೆರಡು ತಿಂಗಳ ಹಣ ಬಂದೇ ಇಲ್ಲವೆಂಬ ಆರೋಪವಿತ್ತು. ಹೀಗಾಗಿ ಮಾರ್ಚ್ ಬಳಿಕ ಹಣ ನಿಮ್ಮ ಅಕೌಂಟ್ ಸೇರಲಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಇನ್ನು ಅಂಗನವಾಡಿ ಕಾರ್ಯಕರ್ತರ ಗೌರವ ಧನವನ್ನು ನಮ್ಮ ಸರ್ಕಾರ 2 ಸಾವಿರ ರೂಪಾಯಿ ಹೆಚ್ಚಿಸಿದೆ. ಈ ಬಜೆಟ್‌ನಲ್ಲಿ ಕಾಾರ್ಯಕರ್ತೆಯರ ಗೌರವ ಧನ 1 ಸಾವಿರ ಮತ್ತು ಸಹಾಯಕಿಯರ ಗೌರವ ಧನ 750 ರೂಪಾಯಿ ಹೆಚ್ಚಿಸಲಾಗಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.