Political News: ಬೆಂಗಳೂರು: ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ನಾಯಕ ಕೆ.ಗೋಪಾಲಯ್ಯ ಮತ್ತು ಅಶ್ವತ್ಥ್ ನಾರಾಯಣ್, ಕೆಂಪಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೆಂಪಣ್ಣನವರು 40% ಕಮಿಷನ್ ಎಂದು ಬೆಂಗಳೂರಿನಿಂದ ದೆಹಲಿವರೆಗೂ ದೂರು ಕೊಟ್ರಿ. ಈಗ ಕೆಂಪಯ್ಯನವರು ಗುತ್ತಿಗೆದಾರರ ಪರ ನಿಲ್ಲುತ್ತಿರಾ ಅಥವಾ ಕಾಂಗ್ರೆಸ್‌ನಿಂದ ಕಿಕ್ ಬ್ಯಾಕ್ ಪಡೆದು ಅವರ ಪರ ನಿಲ್ಲುತ್ತಿರಾ. 224 ಶಾಸಕರಲ್ಲಿ ಯಾರಿಗೆ ಎಷ್ಟು ಹಣ ಕೊಟ್ಟಿದ್ಸೀರಿ ಎಂದು ತಾಖತ್ ಇದ್ರೆ ದಾಖಲೆ ಕೊಡಿ ಎಂದು ಗೋಪಾಲಯ್ಯ ಸವಾಲ್ ಹಾಕಿದ್ದಾರೆ.
ಅಲ್ಲದೇ, 40% ಕಮಿಷನ್ ಯಾವ ಸಚಿವರಿಗೆ, ಶಾಸಕರಿಗೆ ಕೊಟ್ಡೀದ್ದೀರಿ ಎಂದು ಹೇಳಿ. ಯಾವುದೇ ಪಕ್ಷದ ಶಾಸಕರಿದ್ದರೂ 40% ಕಮಿಷನ್ ಆರೋಪ ಸಾಬೀತು ಪಡಿಸಬೇಕು. ಇಲ್ಲ ರಾಜ್ಯದ ಜನತೆಯ ಕ್ಷಮೆ ಕೋರಬೇಕು ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ಗೋಪಾಲಯ್ಯ ಕಿಕ್ ಬ್ಯಾಕ್ ಆರೋಪ ಮಾಡಿದ್ದಾರೆ.
ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡ್ರೆ ಅದಕ್ಕೆ ಯಾರು ಹೊಣೆ…? ಕೆಂಪಣ್ಣನವರು ಕಾಂಗ್ರೆಸ್ ನಿಂದ ಹಿಂದೆಯೇ ಕಿಕ್ ಬ್ಯಾಕ್ ತಗೊಂಡಿದ್ದಾರೆ. ಯಾವುದೇ ಸರ್ಕಾರದಲ್ಲಿ ನಡೆದಿರುವ ಕಾಮಗಾರಿ ಬಗ್ಗೆಯೂ ತನಿಖೆ ಮಾಡಿ. ನಿನ್ನೆ ಒಬ್ಬ ಗುತ್ತಿಗೆದಾರರ ಆತ್ಮಹತ್ಯೆ ಮಾಡಿಕೊಂಡ. ಆ ನಂತರ ಅವರ ಮನೆಯವರು ಗುತ್ತಿಗೆದಾರರ ಇಲ್ಲ ಅಂದ್ರು. ಆದರೂ ಅವರು ಗುತ್ತಿಗೆದಾರರ ಕುಟುಂಬಕ್ಕೆ ಸೇರಿದವರು. ತಾಂತ್ರಿಕ ಸಲಹೆಗಾರರಾದ ಕೆ ಟಿ ನಾಗರಾಜ್ ರಾತ್ರೋ ರಾತ್ರಿ ವೈಟ್ ಟಾಪಿಂಗ್ ಗೆ 900 ಕೋಟಿ ಬಿಡುಗಡೆ ಮಾಡಿದ್ರು. ಆ ನಂತರ ಅದನ್ನು ಸ್ಟಾಪ್ ಮಾಡಿದ್ರಲ್ಲ. ಅದರ ಬಗ್ಗೆಯೂ ತನಿಖೆ ಮಾಡಿಸಿ. ರಾಜ್ಯಪಾಲರು ಮಧ್ಯ ಪ್ರವೇಶ ಮಾಡಿ, ಗುತ್ತಿಗೆದಾರರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಗೋಪಾಲಯ್ಯ ಆಗ್ರಹಿಸಿದ್ದಾರೆ.
ಹುಲ್ಲಿನ ಬಣ್ಣ ನೀಲಿ ಎಂದ ಕತ್ತೆ, ಇಲ್ಲ ಹಸಿರು ಎಂದ ಚಿರತೆ.. ಮುಂದೇನಾಯ್ತು..?
‘ಅವರು ಕಮಿಷನ್ ದರವನ್ನು 40% ನಿಂದ 15% ಗೆ ಇಳಿಸಿರುವುದು ಸಂತೋಷದ ವಿಷಯ’