ಚಾರುಕೀರ್ತಿ ಸ್ವಾಮೀಜಿಗಳ ಅಂತಿಮ ದರ್ಶನ ಪಡೆದ ಗೋಪಾಲಯ್ಯ..

ಹಾಸನ : ಅಬಕಾರಿ ಸಚಿವರು ಹಾಗೂ  ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ  ಅವರು ಇಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಮಪೂಜ್ಯರು ಕಾಲೈಕ್ಯವಾಗಿರುವುದು ರಾಜ್ಯಕ್ಕೆ, ದೇಶಕ್ಕೆ ದೊಡ್ಡ ನಷ್ಟವಾಗಿದೆ ಎಂದರು.

ಎಲ್ಲರೂ ಶ್ರವಣಬೆಳಗೊಳಕ್ಕೆ ಬಹಳ ಸಂತೋಷದಿಂದ ಬಂದು ಶ್ರೀಗಳ ಆಶೀರ್ವಾದ ಪಡೆದಿದ್ದೆವು. ಐದಾರು ತಿಂಗಳ ಹಿಂದೆ ಸ್ವಾಮೀಜಿ ಜೊತೆ ಮಾತನಾಡಿದ್ದೆ. ಆದರೆ ಇವತ್ತು ಈ ಘಟನೆ ಕೇಳಿ ನಮಗೆಲ್ಲಾ ದಿಗ್ಬ್ರಮೆಯಾಗಿದೆ. ಸ್ವಾಮೀಜಿಯವರು ಬೆಳಿಗ್ಗೆ ಎದ್ದ ವೇಳೆ ಈ ಘಟನೆ ನಡೆದಿದೆ .ನಾವ್ಯಾರು ಊಹೆ ಮಾಡಿರಲಿಲ್ಲ. ಬಹಳ ನೋವಿನಿಂದ ಇಲ್ಲಿಗೆ ಬಂದಿದ್ದೇವೆ ಎಂದರು.

ಶ್ರವಣ ಬೆಳಗೊಳ ಮಠ ಲಕ್ಷಾಂತರ ಭಕ್ತಾಧಿಗಳನ್ನು ಹೊಂದಿದೆ . ಲಕ್ಷಾಂತರ ಭಕ್ತರು ಶ್ರವಣಬೆಳಗೊಳಕ್ಕೆ ಬಂದು ಗೊಮ್ಮಟೇಶ್ವರ, ಸ್ವಾಮೀಜಿ ದರ್ಶನ ಪಡೆಯುತ್ತಿದ್ದರು. ಭಗವಂತ ಅವರ ಭಕ್ತಾಧಿಗಳಿಗೆ, ಕುಟುಂಬಕ್ಕೆ ದು:ಖ ಭರಿಸುವ ಶಕ್ತಿಯನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವರು ಹೇಳಿದರು.

ಸ್ವಾಮೀಜಿ ನಿಧನದ ಸುದ್ದಿ ಕೇಳಿ ಎಲ್ಲಾ ಕಾರ್ಯಕ್ರಮ ರದ್ದು ಮಾಡಿ ಇಲ್ಲಿಗೆ ಬಂದಿದ್ದೇನೆ,ಈಗಾಗಲೇ ಮುಖ್ಯಮಂತ್ರಿಗಳು ಎಲ್ಲಾ ವ್ಯವಸ್ಥೆ ಮಾಡುವಂತೆ ತಮಗೂ,ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ ಎಂದು ಸಚಿವ ಗೋಪಾಲಯ್ಯ ತಿಳಿಸಿದರು.

ಐತಿಹಾಸಿಕ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ

ಚಲಿಸುತ್ತಿರುವ ರೈಲು ಹತ್ತಲು ಹೋಗಿ ಕಾಲು ಜಾರಿ ಬೀಳುತ್ತಿದ್ದವನನ್ನ ಕಾಪಾಡಿದ RPF : ವೀಡಿಯೋ ವೈರಲ್..

‘ಕಾಂಗ್ರೆಸ್ ಹೀನಾಯ‌ ಸ್ಥಿತಿಗೆ ಬರಲು ಕಾರಣ ಇಂತಹ ಸುಳ್ಳು ಭರವಸೆಗಳು..’

About The Author