Monday, August 4, 2025

Latest Posts

ಚಾಮರಾಜನಗರದಲ್ಲಿ ಕಳೆಗಟ್ಟಿದ ಗೌರಿ ಹಬ್ಬ…!

- Advertisement -

ಚಾಮರಾಜನಗರ : ನಗರದಲ್ಲಿ ಗೌರಿ-ಗಣೇಶ ಹಬ್ಬ ಕಳೆಗಟ್ಟಿದೆ. ಹನೂರು ತಾಲೂಕಿನ ಕಾಂಚಳ್ಳಿ ಗ್ರಾಮದ ಐತಿಹಾಸಿಕ ಮುನೇಶ್ವರ ದೇವಾಲಯದಲ್ಲಿ ಗೌರಿ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ನೆರವೇರಿತು.

ಕಳೆದ ವರ್ಷ ಕೊರೋನಾ ಹಿನ್ನಲೆಯಲ್ಲಿ ಐತಿಹಾಸಿಕ ದೇಗುಲ ಅಜ್ಜಿಪುರ ಮುನೇಶ್ವರ ದೇವಸ್ಥಾನದಲ್ಲಿ ಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಗಿತ್ತು. ಆದ್ರೆ ಈ ಬಾರಿ ಸೋಂಕು ತಹಬದಿಗೆ ಬಂದಿರೋದ್ರಿಂದ ದೇವಾಲಯಕ್ಕೆ ಭಕ್ತರ ದಂಡು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದ್ರು. ಇನ್ನು ಹಬ್ಬದ ಪ್ರಯುಕ್ತ ದೇವಾಲಯವನ್ನು ವಿವಿಧ ಬಣ್ಣ ಬಣ್ಣಗಳ ಹೂಗಳಿಂದ ಅಲಂಕರಿಸಲಾಗಿತ್ತು.

ಪ್ರಸಾದ್, ಕರ್ನಾಟಕ ಟಿವಿ- ಚಾಮರಾಜನಗರ

- Advertisement -

Latest Posts

Don't Miss