Political News: ಬೆಳಗಾವಿ: ಮಾದಿಗ ಸಮುದಾಯದ ಹಿತರಕ್ಷಣೆಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ. ಮೀಸಲಾತಿ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಅಬಕಾರಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಅವರು ಹೇಳಿದರು.
ಒಳಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು. ಈ ನಿಟ್ಟಿನಲ್ಲಿ ಹಿಂದೆ ಸರಿಯುವ ಹಾಗೂ ಓಡಿ ಹೋಗುವ ಮಾತೇ ಇಲ್ಲ. ನಮ್ಮ ಜನಾಂಗಕ್ಕೆ ನ್ಯಾಯ ಕೊಟ್ಟೇ ಕೊಡ್ತಿವಿ. ಸಮಾಜದ ಜೊತೆಗೆ ನಿಲ್ಲುತ್ತೇವೆ, ಇದು ನನ್ನ ಬದ್ಧತೆ ಎಂದರು.
ಮಾದಿಗ ಮೀಸಲಾತಿ ವಿಷಯದಲ್ಲಿ ರಾಜಕಾರಣ ಮಾಡುವುದಿಲ್ಲ. ಯಾವುದೇ ಪರಿಸ್ಥಿತಿಯಲ್ಲಿ ಜಾರಿಯಾಗಬೇಕು.
ನಮ್ಮ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಈ ದಿಸೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಎರಡು ತಿಂಗಳದಲ್ಲಿ ನಮ್ಮ ಸರ್ಕಾರ ಒಳ ಮೀಸಲಾತಿ ತಂದೇ ತರಲಿದೆ. ಇದು. ನೂರಕ್ಕೆ ನೂರರಷ್ಟು ಸತ್ಯ. ಸಮಾಜದ ಜೊತೆಗೆ ನಿಲ್ಲುತ್ತೇವೆ. ಈ ಸಮಾಜದಲ್ಲಿ ಹುಟ್ಟಿದ್ದೇನೆ. ನಾನು ಹೋರಾಟ ಮಾಡಿದ್ದೇನೆ. ಆದ್ದರಿಂದ
ಎಲ್ಲವನ್ನೂ ಬಲ್ಲೆ ಎಂದರು. ನಮ್ಮ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಮಾದಿಗ ಜನಾಂಗದ ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು. ಇಂದೂ ಅದಕ್ಕೆ ಬದ್ಧರಿದ್ದೇವೆ ಎಂದರು.
ಸಚಿವರಾದ ಸತೀಶ್ ಜಾರಕಿಹೊಳಿ, ಕೆ ಎಚ್ ಮುನಿಯಪ್ಪ ಹಾಗೂ ಡಾ. ಎಚ್ ಸಿ ಮಹದೇವಪ್ಪ ಅವರು ನಮ್ಮ ಹಿತ ಕಾಪಾಡುವ ಯಾವುದೇ ಪ್ರಶ್ನೆ ಬಂದಾಗ ಗಟ್ಟಿಯಾಗಿ ನಿಲ್ಲುತ್ತಾರೆ. ಇದು ಮೂವತ್ತು ವರ್ಷದ ಹೋರಾಟ. ಯಾವ ಸರ್ಕಾರ ಏನೇನು ಮಾಡಿದವು ಎಂಬುದು ಚರ್ಚೆ ಆಗಬೇಕು. ಇಲ್ಲದರಿದ್ದರೆ ಜನತೆಗೆ ತಪ್ಪು ತಿಳಿವಳಿಕೆ ಹೋಗುತ್ತದೆ. ಎಸ್ ಎಂ ಕೃಷ್ಣ ಅವರ ಕಾಲದಲ್ಲಿ ನಮ್ಮ ಮಾದಿಗ ಮೀಸಲಾತಿ ಆಯೋಗ ಆರಂಭವಾಯಿತು. ಆನಂತರ ಹಲವಾರು ಸರ್ಕಾರಗಳು ಏನು ಮಾಡಬೇಕು ಎಲ್ಲ ಮಾಡಿದವು. ಆದರೆ ಈಗ ನಮ್ಮ ಸರ್ಕಾರ ಅಗತ್ಯ ಕ್ರಮ ಕೈಗೊಂಡು ಜನರ ಹಿತ ಕಾಪಾಡಲಿದೆ ಎಂದರು.