Political News: 31 ವರ್ಷ ಹಳೆಯ ಕೇಸ್ ರಿಓಪೆನ್ ಮಾಡಿದ್ದಕ್ಕಾಗಿ, ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ನಾವು ದ್ವೇಷದ ರಾಜಕಾರಣ ಮಾಡುತ್ತಿಲ್ಲ, ನಿರಪರಾಧಿಗಳನ್ನು ಬಂಧಿಸಿಲ್ಲ ಎಂದಿದ್ದಾರೆ.
ಹುಬ್ಬಳ್ಳಿಯ ಕರಸೇವಕರ ಬಂಧನದಲ್ಲಿ ಸರ್ಕಾರ ದ್ವೇಷದ ರಾಜಕಾರಣ ಮಾಡಿಲ್ಲ, ನಿರಪರಾಧಿಗಳನ್ನು ಕೂಡಾ ಬಂಧಿಸಿಲ್ಲ. ಹಳೆಯ ಪ್ರಕರಣಗಳನ್ನು ವಿಲೇವಾರಿ ಮಾಡಬೇಕೆಂಬ ಗೃಹ ಇಲಾಖೆಯ ಸೂಚನೆಯಂತೆ ಪೊಲೀಸರು ಕ್ರಮ ಕೈಕೊಂಡಿದ್ದಾರೆ. ಆ ಬಂಧಿತರಲ್ಲಿ ಕೆಲವರು ಹಳೆಯ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ಕರಸೇವಕರು ಇದ್ದಿರಬಹುದು. ರಾಜ್ಯ ಸರ್ಕಾರ ಕರಸೇವಕರನ್ನೇ ಗುರಿಯಾಗಿಟ್ಟುಕೊಂಡು ಕ್ರಮಕೈಗೊಂಡಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಸೂಚನೆ ಏನಿದೆ ಅದರಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಹುಬ್ಬಳ್ಳಿಯ ಕರಸೇವಕರ ಬಂಧನದಲ್ಲಿ ಸರ್ಕಾರ ದ್ವೇಷದ ರಾಜಕಾರಣ ಮಾಡಿಲ್ಲ, ನಿರಪರಾಧಿಗಳನ್ನು ಕೂಡಾ ಬಂಧಿಸಿಲ್ಲ.
ಹಳೆಯ ಪ್ರಕರಣಗಳನ್ನು ವಿಲೇವಾರಿ ಮಾಡಬೇಕೆಂಬ ಗೃಹ ಇಲಾಖೆಯ ಸೂಚನೆಯಂತೆ ಪೊಲೀಸರು ಕ್ರಮ ಕೈಕೊಂಡಿದ್ದಾರೆ.ಆ ಬಂಧಿತರಲ್ಲಿ ಕೆಲವರು ಹಳೆಯ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ಕರಸೇವಕರು ಇದ್ದಿರಬಹುದು.
ರಾಜ್ಯ ಸರ್ಕಾರ ಕರಸೇವಕರನ್ನೇ… pic.twitter.com/tGvqrqqDN3— Siddaramaiah (@siddaramaiah) January 2, 2024
ಅಯೋಧ್ಯಾ ರಾಮಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್‌ಗೆ ಅಭಿನಂದನೆಗಳ ಮಹಾಪೂರ..
‘ಹುಬ್ಬಳ್ಳಿಯ ರಾಮ ಜನ್ಮಭೂಮಿ ಹೋರಾಟ ಬಂಧನ ಮತ್ತು ಅಯೋಧ್ಯೆಗೂ ಯಾವುದೇ ಸಂಬಂಧವಿಲ್ಲ’