- Advertisement -
ರಾಜ್ಯ ಸರ್ಕಾರದಿಂದ ಅತಿಥಿ ಉಪನ್ಯಾಸಕರ ಬಹುದಿನಗಳ ಬೇಡಿಕೆ ಈಡೇರಿದೆ, ಕಡಿಮೆ ಸಂಬಳ ಅದರಲ್ಲೇ, ಶಿಕ್ಷಣ ವೃತ್ತಿ ಈಗೆ ಸಾಗಿಸಿಕೊಂಡು ಬರುತ್ತಿದ್ದ ಅತಿಥಿ ಉಪನ್ಯಾಸಕರ ಜೀವನ ಸುಧಾರಿಸಲು ಸರ್ಕಾರ ಮುಂದಾಗಿದೆ. ಯುಜಿಸಿ ನಿಯಮ ಅನುಸರಿಸಿ ಅರ್ಹತೆಯನ್ನು ನಿಗದಿ ಪಡಿಸಲಾಗಿದೆ. ಈವರೆಗೆ 13.000 ವೇತನ ಪಡೆಯುಯತ್ತಿದ್ದವರು ಮುಂದಿನ ದಿನಗಳಲ್ಲಿ 32.000 ಪಡೆಯಲಿದ್ದಾರೆ. 11000 ವೇತನ ಪಡೆಯಲಿದ್ದಾರೆ. ಪ್ರತಿ ತಿಂಗಳ 10 ನೇ ತಾರೀಕಿನೊಳಗೆ ವೇತನ ಪಾವತಿಗೆ ವ್ಯವಸ್ಥೆ ರೂಪಿಸಲಾಗುವುದು ಎಂದು ಸರ್ಕಾರವು ಭರವಸೆ ನೀಡಿದೆ.
ಈ ಹಿಂದೆ ಅತಿಥಿ ಉಪನ್ಯಾಸಕರು ವಿವಿದ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕಳೆದ ಒಂದು ತಿಂಗಳಿನಿAದ ತರಗತಿಗಳನ್ನು ಬಹಿಷ್ಕರಿಸಿ ಹೋರಾಟ ನಡೆಸುತ್ತಿದ್ದರು. ಹೋರಾಟದ ನಂತರ ಸರ್ಕಾರವು ಎಚ್ಚೆತ್ತು ಅತಿಥಿ ಉಪನ್ಯಾಸಕರ ಬೇಡಿಕೆಗಳೀಡೇರಿಕೆಗೆ ಮುಂದಾಗಿದೆ.
- Advertisement -