Kolar News: ಇಂದಿನಿಂದ ರಾಜ್ಯದಾದ್ಯಂತ ಸರ್ಕಾರಿ ಶಾಲೆಗಳು ಪುನರಾರಂಭಗೊಂಡಿದ್ದು, ಬೇಸಿಗೆ ರಜೆಗಳನ್ನು ಮುಗಿಸಿ ವಿದ್ಯಾರ್ಥಿಗಳು ಶಾಲೆಯತ್ತ ಮುಖ ಮಾಡಿದ್ದಾರೆ.
ಅಂತೆಯೇ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ತ್ಯಾಗರಾಜ ಬಡಾವಣೆಯ ಸರ್ಕಾರಿ ಶಾಲೆ ನೂರು ವರ್ಷ ಪೂರೈಸಲು ಸಜ್ಜಾಗಿದೆ. ಈ ಶಾಲೆಯಲ್ಲಿ ಇಂದು ಬಂದ ಮಕ್ಕಳನ್ನು ಶಿಕ್ಷಕರು ಮತ್ತು ಅಧಿಕಾರಿಗಳು ಗುಲಾಬಿ ಹೂವು ನೀಡಿ, ಸ್ವಾಗತಿಸಿದ್ದಾರೆ.
ಸರ್ಕಾರಿ ಶಾಲೆ ಶತಮಾನೋತ್ಸವಕ್ಕೆ ಕೇವಲ ಆರು ದಿನಗಳು ಮಾತ್ರ ಬಾಕಿ ಇದ್ದು, ಈ ಕಾರಣಕ್ಕೆ ಶಾಲೆಗೆ ವಿಶೇಷವಾಗಿ ಮಾವಿನ ತೋರಣ ಕಟ್ಟಿ, ಸಿಹಿ ಹಂಚಿ ಶಿಕ್ಷಕರು ಮಕ್ಕಳಿಗೆ ಸ್ವಾಗತ ನೀಡಿದ್ದಾರೆ. ಈ ಶಾಲೆಯಲ್ಲಿ 410 ವಿದ್ಯಾರ್ಥಿಗಳು ದಾಖಲಾತಿ ಹೊಂದಿದ್ದಾರೆ.
ಶಾಲೆಗೆ ಬಂದ ಮೊದಲ ದಿನವೇ ಗೆಳೆಯರ ಬಳಗದ ವತಿಯಿಂದ ಪುಸ್ತಕಗಳು ಹಾಗೂ ಸಮವಸ್ತ್ರ ವಿತರಿಸಲಾಗಿದೆ. ಇದು ಆಂಗ್ಲ ಮಾಧ್ಯಮ ಸರ್ಕಾರಿ ಶಾಲೆಯಾಗಿರುವ ಕಾರಣಕ್ಕೆ, ಇಲ್ಲಿ ತಮ್ಮ ಮಕ್ಕಳನ್ನು ದಾಖಲು ಮಾಡಲು, ಹೆಚ್ಚಿನ ಪೋಷಕರು ಬರುತ್ತಿದ್ದು, ಕೊಠಡಿಗಳು ಇಲ್ಲದ ಕಾರಣ, ಶಾಲಾ ಶಿಕ್ಷಕರು ದಾಖಲಾತಿಯನ್ನು ನಿಲ್ಲಿಸಿದ್ದಾರೆ.
ಕುಮಾರ್ ಜಿ.ಕೆ. ಕರ್ನಾಟಕ ಟಿವಿ, ಕೋಲಾರ
ಅಂಬಿ ಸಮಾಧಿಯ ಮೇಲೆ ಮಗನ ಮದುವೆಯ ಆಮಂತ್ರಣ ಪತ್ರಿಕೆ ಇಟ್ಟು ಪೂಜೆ ಸಲ್ಲಿಸಿದ ಸುಮಲತಾ..