Saturday, December 6, 2025

Latest Posts

ಪಶ್ಚಿಮ ಬಂಗಾಳದ ನೂತನ ರಾಜ್ಯಪಾಲರಾಗಿ ನೇಮಕಗೊಂಡ ಸಿವಿ ಆನಂದ್ ಬೋಸ್

- Advertisement -

ದೆಹಲಿ: ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ಗುರುವಾರ ಸಿವಿ ಆನಂದ್ ಬೋಸ್ ಅವರನ್ನು ನೇಮಿಸಲಾಗಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ. ಬೋಸ್ (71) ಕೇರಳ ಕೇಡರ್ ನ 1977 ಬ್ಯಾಚ್ (ನಿವೃತ್ತ) ಭಾರತೀಯ ಆಡಳಿತ ಸೇವೆ ಅಧಿಕಾರಿ. ಅವರು ಕೊನೆಯದಾಗಿ 2011 ರಲ್ಲಿ ನಿವೃತ್ತರಾಗುವ ಮೊದಲು  ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದರು.

ಶಾಲಾ ಬಾಲಕಿ ನಿಗೂಢ ರೀತಿಯಲ್ಲಿ ನಾಪತ್ತೆ

ಆನಂದ್ ಬೋಸ್ ರವರು ಡಿಬಿಎಲ್ ಹೆರಿಟೇಜ್ ಯೋಜನೆಯಲ್ಲಿ ಭಾರತ ಸರ್ಕಾರದ ಪ್ರಧಾನ ಸಲಹೆಗಾರರಾಗಿ ಸೇವೆ ಸಲ್ಲಿಸಿದ ಐಎಎಸ್ ಅಧಿಕಾರಿ. ಇದಕ್ಕೂ ಮೊದಲು ಅವರು ವಿಶ್ವವಿದ್ಯಾಯದ ಉಪಕುಲಪತಿಯಾಗಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಮತ್ತು ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದರು. ಬೋಸ್ ಅವರು ಹ್ಯಾಬಿಟಾಟ್ ಅಲೈಯನ್ಸ್ ನ ಅಧ್ಯಕ್ಷರಾಗಿದ್ದರು ಮತ್ತು ವಿಶ್ವಸಂಸ್ಥೆಯೊಂದಿಗೆ ಸಮಾಲೋಚನಾ ಸ್ಥಾನಮಾನವನ್ನು ಹೊಂದಿದ್ದಾರೆ.

ಮಾಜಿ ಸಚಿವ ವರ್ತೂರು ಪ್ರಕಾಶ್ ಆರೋಪಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಮುಖಂಡ ರಮೇಶ್

ಬೇಲೂರು ಕೃಷಿ ಪತ್ತಿನ ಸಹಕಾರ ಸಂಘ ನೂತನ ಆಡಳಿತ ಮಂಡಳಿ ಉದ್ಘಾಟಿಸಿದ ಸುಮಲತಾ ಅಂಬರೀಷ್

- Advertisement -

Latest Posts

Don't Miss