Sunday, March 3, 2024

Latest Posts

ಕೈ ಚೆಲ್ಲಿದ ರಾಜ್ಯಪಾಲರು- ಬಿಜೆಪಿ ನಿಯೋಗಕ್ಕೆ ಹಿನ್ನಡೆ..!

- Advertisement -

ಬೆಂಗಳೂರು: ಶಾಸಕರ ರಾಜೀನಾಮೆ ಅಂಗೀಕಾರ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಅತೃಪ್ತರ ರಾಜೀನಾಮೆಯನ್ನು ಊರ್ಜಿತ ಗೊಳಿಸಿ ಬಿಜೆಪಿಗೆ ಸರ್ಕಾರ ರಚಿಸಲು ಅನುವು ಮಾಡಿಕೊಡಬೇಕು ಎಂದು ರಾಜ್ಯಪಾಲರನ್ನು ಭೇಟಿ ಮಾಡಿದ್ದ ಬಿಜೆಪಿ ನಿಯೋಗಕ್ಕೆ ಹಿನ್ನಡೆಯಾಗಿದೆ.

ಶಾಸಕರ ರಾಜೀನಾಮೆ ಅಂಗೀಕಾರ ವಿಚಾರವಾಗಿ ವಿಧಾನಸಭಾ ಸ್ವೀಕರ್ ರಮೇಶ್ ಕುಮಾರ್ ವಿಳಂಬ ಮಾಡುತ್ತಿದ್ದಾರೆ ಈ ಕೂಡಲೇ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಶಾಸಕರ ರಾಜೀನಾಮೆಯನ್ನು ಆದಷ್ಟು ಬೇಗ ಅಂಗೀಕರಿಸುವಂತೆ ಮಾಡಬೇಕು ಅಂತ ಬಿಜೆಪಿ ನಿಯೋಗ ಇಂದು ರಾಜ್ಯಪಾಲರನ್ನು ಭೇಟಿ ಮಾಡಿತ್ತು. ಆದ್ರೆ ರಾಜ್ಯಪಾಲ ವಿ.ಆರ್ ವಾಲಾ ಈ ಕುರಿತಂತೆ ತಾವೇನೂ ಮಾಡಲು ಸಾಧ್ಯವಿಲ್ಲ. ಶಾಸಕರೆಲ್ಲರೂ ರಾಜೀನಾಮೆ ಕ್ರಮಬದ್ಧವಲ್ಲದಿದ್ದರೆ ಮತ್ತೆ ಸಲ್ಲಿಸಬೇಕು. ಸಂವಿಧಾನದ ಪ್ರಕಾರ ರೂಲ್ ಬುಕ್ ನಲ್ಲಿನ ನಿಯಮದಂತೆಯೇ ರಾಜೀನಾಮೆ ಸಲ್ಲಿಸಬೇಕು. ಹೀಗಾಗಿ ನಾನೇನು ಮಾಡಲು ಸಾಧ್ಯವಿಲ್ಲ ಅಂತ ರಾಜ್ಯಪಾಲರು ಬಿಜೆಪಿ ನಿಯೋಗಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಈ ಮೂಲಕ ರಾಜ್ಯಪಾಲರ ಮುಖೇನ ಆದಷ್ಟು ಬೇಗ ಶಾಸಕರ ರಾಜೀನಾಮೆ ಅಂಗೀಕರಿಸುವಂತೆ ಮಾಡಿ ಸರ್ಕಾರ ರಚನೆ ಮಾಡುವ ಕಸರತ್ತು ನಡೆಸಿದ್ದ ಬಿಜೆಪಿಗೆ ಇದೀಗ ಹಿನ್ನಡೆಯಾಗಿದೆ.

ಸಿದ್ಧರಾಮಯ್ಯ ನಿರ್ಧಾರ ಅಚಲ, ದೋಸ್ತಿ ಸರ್ಕಾರ ವಿಲವಿಲ…! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=jyT0Yce1giA
- Advertisement -

Latest Posts

Don't Miss