Sunday, September 8, 2024

Latest Posts

ಸರ್ಕಾರ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು: ಶೆಟ್ಟರ್ ಆಗ್ರಹ

- Advertisement -

Hubli News: ಹುಬ್ಬಳ್ಳಿ: ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಕೂಡಲೇ ಸರ್ಕಾರ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಒತ್ತಾಯಿಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ನಾಚಿಕೆಯಿಲ್ಲ, ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಆಂತರಿಕ ಕಲಹ ಹೊರಗಡೆ ಬರಲಿದೆ. ಈ ವೇಳೆ ಸಿಎಂ, ಡಿಸಿಎಂ ನಡುವಿನ. ಕಲಹ ಹೊರಗಡೆ ಬರುತ್ತದೆ. ಕಾಂಗ್ರೆಸ್’ನವರ ಅಸಮಾಧಾನದಿಂದ ಸರ್ಕಾರ ಬೀಳುತ್ತದೆ. ಹೀಗಿದ್ದಾಗ ಬಿಜೆಪಿಯವರು ಆಪರೇಷನ್ ಕಮಲ ಮಾಡುವ ಅವಶ್ಯಕತೆಯಿಲ್ಲ ಎಂದರು.

ಯಾಗ ಮಾಡಿಸೋದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಎಕ್ಸಪರ್ಟ್, ಕೇರಳ ಅಲ್ಲ ಭೂಗತದಲ್ಲಿ ಹೋಗಿ ಯಾಗ ಮಾಡಿಸೋ ತಾಕತ್ತು ಡಿಕೆಶಿಗೆ ಇದೆ. ಯಾಗ ಪೂಜೆ ಮಾಡೋದ್ರಲ್ಲಿ ಅವರು ಎಕ್ಸಪರ್ಟ್, ಯಾಗದಿಂದ ಒಬ್ಬರಿಗೆ ತೊಂದರೆ ಆಗುತ್ತೆ ಎಂದ್ರೆ ಎಲ್ಲರೂ ಅದನ್ನೇ ಮಾಡುತ್ತಿದ್ರು, ನಾನು ಬಸವ ತತ್ವದವನು, ಅದರ ಮೇಲೆ ನಂಬಿಕೆಯಿಲ್ಲ. ಹೀಗಾಗಿ ಈ ಬಗ್ಗೆ ಡಿಕೆಶಿಗೆ ಕೇಳಿ ಎಂದರು.

ಮೋದಿ ಮೂರನೇ ಬಾರಿ ಪ್ರಧಾನಿ ಆಗಬೇಕು ಅನ್ನೋದು ಜನರ ಆಶಯವಾಗಿತ್ತು. ಎಕ್ಸಿಟ್ ಪೋಲ್ ನಲ್ಲಿ ಸ್ಪಷ್ಟ ಬಹುಮತ ಸಿಕ್ಕಿದೆ. ಹೀಗಾಗಿ ಫಲಿತಾಂಶದಲ್ಲಿ ನಮಗೆ 375 ಆಗಬಹುದು, 400 ಕ್ಕೂ ಹೆಚ್ಚು ಸ್ಥಾನ ಗೆಲ್ಲಬಹುದು ಎಂದರು.

ಕಳೆದ ಬಾರಿ ಎಕ್ಸಿಟ್ ಪೋಲ್’ ಕಾಂಗ್ರೆಸ್ ಪರವಾಗಿ ಹೇಳಿತ್ತು. ಬಿಜೆಪಿ ಅಧಿಕಾರಕ್ಕೆ ಬರತ್ತೆ ಅಂತಾ ಎಲ್ಲೂ ಹೇಳಿಲ್ಲ. ಇದೀಗ ಕಾಂಗ್ರೆಸ್ ನಾಯಕರು ಸುಳ್ಳ ಹೇಳುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಸೋಲು ಒಪ್ಪಿಕೊಳ್ಳೋ ಬದಲು ಸಬೂಬು ಹೇಳತ್ತಿದ್ದಾರೆ. ಬಹುತೇಕ ಎಕ್ಸಿಟ್‌ಪೋಲ್ NDA ಪರವಾಗಿದೆ ಎಂದರು.

ಬೆಳಗಾವಿಯಲ್ಲಿ ಜನರ ಆಶೀರ್ವಾದದಿಂದ ನಾನು ಹೆಚ್ಚು ಮತಗಳ ಅಂತರದಿಂದ ಗೆಲ್ತೀನಿ. ಸಂವಿಧಾನ ಬದಲಾವಣೆ ಮಾಡೋ ಪ್ರಶ್ನೆ ಇಲ್ಲ. ಸಂವಿಧಾನ ಬದಲಾವಣೆ ಮಾಡೋ ಹಕ್ಕು ಯಾರಿಗೂ ಇಲ್ಲ. ಪ್ರೀಯಾಂಕ್ ಖರ್ಗೆ, ಕಾಂಗ್ರೆಸ್ ನವರು ಸುಳ್ಳು ಹೇಳತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

Bigg boss OTT 3: ಸಲ್ಮಾನ್ ಖಾನ್ ಜಾಗಕ್ಕೆ ಬಂದ ನಟ ಅನಿಲ್ ಕಪೂರ್

ಬಿಜೆಪಿಯವರು ನಮ್ಮನ್ನು ರಾಜಕೀಯ ಮಾಡಲು ಆಹ್ವಾನಿಸುತ್ತಿದ್ದಾರೆ ನಾವು ಮಾಡಿ ತೋರಿಸುತ್ತೇವೆ: ಡಿಕೆಶಿ

ಮಾನ್ಯ ಪ್ರಧಾನಿಯವರೇ, ಸಂಘದಲ್ಲಿ ಕಲಿತ ಪಾಠ ಬಿಟ್ಟು ವಾಸ್ತವಕ್ಕೆ ಕಣ್ತೆರೆಯಿರಿ: ಸಿಎಂ ಸಿದ್ದರಾಮಯ್ಯ

- Advertisement -

Latest Posts

Don't Miss