Thursday, April 17, 2025

Latest Posts

ಕೇಂದ್ರ ಗೃಹಸಚಿವ ಅಮಿತ್‌ಷಾರನ್ನು ಭೇಟಿಯಾದ ಗೌಡರ ಕುಟುಂಬ

- Advertisement -

Political News: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರ್, ಮತ್ತು ಬಿಜೆಪಿ ಲೋಕಸಭಾ ಅಭ್ಯರ್ಥಿಯಾಗಿರುವ ಡಾ.ಮಂಜುನಾಥ್ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ಡಾ. ಮಂಜುನಾಥ್, ನಾನು ಅಮಿತ್‌ ಶಾ ಅವರನ್ನು ಎಂದೂ ಭೇಟಿಯಾಗಿರಲಿಲ್ಲ. ಇಂದು ದೆಹಲಿಯಲ್ಲಿ ಅವರನ್ನು ಭೇಟಿಯಾಗಿ, ಸೌಹಾರ್ದಯುತ ಮಾತುಕತೆ ನಡೆಸಲಾಗಿದೆ. ಈ ಬಾರಿ ಚುನಾವಣೆಗೆ ಸಹಕರಿಸಲು ನಾನು ಗೃಹ ಸಚಿವರಲ್ಲಿ ಮನವಿ ಮಾಡಿದ್ದೇನೆ ಎಂದಿದ್ದಾರೆ.

ಇನ್ನು ಇದುವರೆಗೂ ಬಿಜೆಪಿ ಸೇರದ ಡಾ.ಮಂಜುನಾಥ್, ಮಾರ್ಚ್ 18ಕ್ಕೆ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ. ಈ ವಿಚಾರದ ಬಗ್ಗೆ ಮಾತನಾಡಿರುವ ಅವರು, ನಾನು ವೈಯಕ್ತಿಕವಾಗಿ ಯಾರನ್ನೂ ಟೀಕಿಸುವುದಿಲ್ಲ. ನಾನು ಚುನಾವಣೆ ನಿಲ್ಲುವ ಬಗ್ಗೆ ಎಲ್ಲರೂ ಸಕಾಾರಾತ್ಮಕವಾಗಿಯೇ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ನಿಖಿಲ ಕುಮಾರ್, ಕೇಂದ್ರ ಸರ್ಕಾರದ ಗೃಹ ಸಚಿವರಾದ ಮಾನ್ಯ ಶ್ರೀ ಅಮಿತ್ ಶಾ ಅವರನ್ನು ಇಂದು ನವದೆಹಲಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್. ಡಿ ಕುಮಾರಸ್ವಾಮಿ ಅವರೊಂದಿಗೆ ಭೇಟಿ ಮಾಡಲಾಯಿತು. ಲೋಕಸಭೆ ಚುನಾವಣೆ ಸೇರಿದಂತೆ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಲಾಯಿತು. ಇದೇ ವೇಳೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಮೈತ್ರಿ ಕೂಟದ ಅಭ್ಯರ್ಥಿ ಡಾ ಸಿ.ಎನ್ ಮಂಜುನಾಥ್ ಅವರು ಜೊತೆಯಲ್ಲಿದ್ದರು ಎಂದು ಬರೆದುಕೊಂಡಿದ್ದಾರೆ.

ಗೂಗಲ್ ಪೇ, ಫೋನ್‌ ಪೇ ಮೇಲೂ ಚುನಾವಣಾ ಆಯೋಗ ಕಣ್ಗಾವಲು ಇರಿಸಲಿದೆ: ರಾಜೀವ್ ಕುಮಾರ್

ಕಾಂಗ್ರೆಸ್ ಒಳಗೊಳಗೇ ಟ್ಯಾಂಕರ್ ಮಾಫಿಯಾಗಳಿಗೆ ಬೆಂಬಲ ನೀಡಿ ದುಡ್ಡು ಹೊಡೆಯುತ್ತಿದೆ: ಪ್ರೀತಂಗೌಡ

ಗಾಯಕಿ ಅನುರಾಧಾ ಪಡ್ವಾಲ್ ಬಿಜೆಪಿಗೆ ಸೇರ್ಪಡೆ..

- Advertisement -

Latest Posts

Don't Miss