Hubballi Crime news: ಹುಬ್ಬಳ್ಳಿ: ಕಲಘಟಗಿಯ ಬಗಡಗೇರಿಯಲ್ಲಿ ನಡೆದಿದ್ದ ಗ್ರಾಮ ಪಂಚಾಯತಿ ಸದಸ್ಯನ ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಗ್ರಾಮದ ಮಲ್ಲಪ್ಪ ದಂಡಿನ ಹಾಗೂ ನಾಗಪ್ಪ ದಂಡಿನ ಎಂದು ಗುರುತಿಸಲಾಗಿದೆ. ಆರೋಪಿಗಳು ಗುರುವಾರ ಸಂಜೆ ಗ್ರಾಮ ಪಂಚಾಯತಿ ಸದಸ್ಯ ನಿಂಗಪ್ಪ ದಾಸಪ್ಪ ಎಂಬವರ ಜೊತೆ ಆಸ್ತಿ ವಿಚಾರಕ್ಕೆ ಗಲಾಟೆ ಮಾಡಿದ್ದರು. ಬಳಿಕ ಗಲಾಟೆ ವಿಕೋಪಕ್ಕೆ ತಿರುಗಿ ನಿಂಗಪ್ಪನ ಮುಖಕ್ಕೆ ಕಲ್ಲಿನಿಂದ ಜಜ್ಜಿ ಕೊಲೆಗೈದಿದ್ದರು.
ಕೊಲೆಗೈದ ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಪ್ರಕರಣ ದಾಖಲಾದ 24 ಗಂಟೆಗಳಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಕಲಘಟಗಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಬಿಜೆಪಿಗೆ ಮತ್ತೆ ಮಗ್ಗುಲ ಮುಳ್ಳಾದ ಪುತ್ತಿಲ ಪರಿವಾರ, ಲೋಕಸಭೆಗೆ ಪಕ್ಷೇತರವಾಗಿ ಸ್ಪರ್ಧಿಸಲು ಪ್ಲಾನ್ ರೆಡಿ!
ಪೊಲೀಸ್ ಪೇದೆ ಆರೋಗ್ಯಕ್ಕಾಗಿ “ಲಕ್ಷ” ರೂಪಾಯಿ ನೀಡಿದ ಡಿಸಿಪಿ ರವೀಶ ಸಿಆರ್…!