Thursday, November 21, 2024

Latest Posts

ಗೃಹಲಕ್ಷ್ಮೀ ಹಣದಿಂದ ಖಾರಪುಡಿ ತಯಾರಿಸುವ ಮಷಿನ್ ಖರೀದಿಸಿದ ಮಹಿಳೆ

- Advertisement -

Political news: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಹಲವು ಗ್ಯಾರಂಟಿಗಳನ್ನು ನೀಡಲಾಗುತ್ತದೆ ಎಂದು ಕಾಂಗ್ರೆಸ್ ಭರವಸೆ ನೀಡಿತ್ತು. ಅದರಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದು. ಈ ಗ್ಯಾರಂಟಿಯಡಿಯಲ್ಲಿ ಮಹಿಳೆಯರಿಗೆ ಪ್ರತೀ ತಿಂಗಳು 2 ಸಾಾವಿರ ಹಣ ಸಿಗುತ್ತದೆ. ಹೀಗೆ ಸಿಕ್ಕ ಹಣವನ್ನು ಕೂಡಿಸಿ, ಹಲವರು ತಮ್ಮ ಆರೋಗ್ಯಕ್ಕಾಗಿ ಔಷಧಿ, ಮಕ್ಕಳ ಫೀಸ್, ಮನೆಗೆ ಫ್ರಿಜ್, ಚಿನ್ನ ಸೇರಿ ಹಲವರು ಅವಶ್ಯಕ ವಸ್ತುಗಳನ್ನು ಖರೀದಿಸಿದ್ದಾರೆ.

ಅದೇ ರೀತಿ, ಓರ್ವ ಮಹಿಳೆ ಗೃಹಲಕ್ಷ್ಮೀ ಹಣವನ್ನು ಕೂಡಿಸಿ, ಖಾರಪುಡಿ ತಯಾರಿಸುವ ಮಷಿನ್ ಖರೀದಿ ಮಾಡಿದ್ದಾರೆ. ಈ ಮೂಲಕ ದೀಪಾವಳಿ ಹಬ್ಬಕ್ಕೆ ತಮಗೇ ತಾವೇ ಗಿಫ್ಟ್ ಕೊಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಕುಕಡೊಳ್ಳಿ ತಾಲೂಕಿನ ತಾಯವ್ವ ಲಕಮೋಜಿ ಎಂಬಾಕೆ, ಈ ಮಷಿನ್ ಖರೀದಿಸಿದ್ದು, ಸಣ್ಣ ಉದ್ಯಮ ಆರಂಭಿಸಲು ಮುಂದಾಾಗಿದ್ದಾರೆ.

ಇಲ್ಲಿನ ಶಾಸಕಿಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್, ಈ ಖಾರದ ಪಡಿ ಮಷಿನ್ ಶುರು ಮಾಡುವ ಮೂಲಕ, ಈಕೆಯ ಉದ್ಯಮಕ್ಕೆ ಚಾಲನೆ ನೀಡಿ, ಸಾಥ್ ಕೊಟ್ಟಿದ್ದಾರೆ. ಈ ವೇಳೆ ಮಾತನಾಡಿದ ಶಾಸಕಿ, ಗೃಹಲಕ್ಷ್ಮೀ ಹಣದಿಂದ ಹಲವು ಗೃಹಿಣಿಯರು ಉದ್ಯಮ ಶುರು ಮಾಡಿದ್ದಾರೆ. ಇದನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಹೆಬ್ಬಾಳ್ಕರ್ ಸಂತಸ ವ್ಯಕ್ತಪಡಿಸಿದರು.

ಇನ್ನು ಈ ಬಗ್ಗೆ ಟ್ವೀಟ್ ಮಾಡಿದ್ದು, ಕುಕಡೊಳ್ಳಿ ಗ್ರಾಮದ ಶ್ರೀಮತಿ ತಾಯವ್ವ ಕ ಲಕಮೋಜಿ ಎಂಬ ಮಹಿಳೆ ಗೃಹಲಕ್ಷ್ಮಿ ಹಣ ಕೂಡಿಟ್ಟು, ಮಿರ್ಚಿ ಮಿಕ್ಸರ್ ಮಷಿನ್ (ಖಾರದ ಗಿರಣಿ) ಖರೀದಿ ಮಾಡಿರುವ ಹಿನ್ನೆಲೆಯಲ್ಲಿ ಇಂದು ಮಿರ್ಚಿ ಮಿಕ್ಸರ್ ಮಷಿನ್ ನ್ನು ಉದ್ಘಾಟಿಸಿ, ಮಹಿಳೆಯ ನೂತನ ಉದ್ಯೋಗಕ್ಕೆ ಶುಭ ಕೋರಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆ ಇಂದು ಲಕ್ಷಾಂತರ ಬಡ ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆಗೊಳಿಸಿದ್ದು, ಸಾಕಷ್ಟು ಬಡ ಕುಟುಂಬಗಳು ಗೃಹಲಕ್ಷ್ಮಿ ಯೋಜನೆಯ ಮೂಲಕ ಬದುಕು ಕಟ್ಟಿಕೊಂಡಿರುವುದು ಸಂತಸದ ವಿಷಯ ಎಂದು ಬರೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಚನ್ನಬಸಯ್ಯ ಹಿರೇಮಠ್, ಬಸಯ್ಯ ಚಿಕ್ಕಮಠ್ ವೀರನಗೌಡ ಪಾಟೀಲ, ತಾಯಪ್ಪ ಮರಕಟ್ಟಿ, ಪುಂಡಲೀಕ ಬೈರೋಜಿ, ಕಲ್ಲಪ್ಪ ವಡ್ಡಿನ, ಪರಶುರಾಮ ಕುರುಬರ, ಅನ್ನಪೂರ್ಣ ಪಾಟೀಲ, ಗದಿಗೆಪ್ಪ ವಡ್ಡಿನ, ದೊಡ್ಡಪ್ಪ ದೇಶನೂರ್, ರಾಮಪ್ಪ ಕರವಿನಕೊಪ್ಪ, ಹೊಳೆಪ್ಪ ಹಟ್ಟಿ ಸೇರಿದಂತೆ ಗ್ರಾಮದ ಅನೇಕ ಮಹಿಳೆಯರು ಉಪಸ್ಥಿತರಿದ್ದರು.

- Advertisement -

Latest Posts

Don't Miss