Thursday, August 7, 2025

Latest Posts

ದಂತ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಸಾವನ್ನಪ್ಪಿದ ಮಧುಮಗ..

- Advertisement -

Hyderabad News: ಮದುವೆ ಫಿಕ್ಸ್ ಆಯ್ತು ಅಂದ್ರೆ ನಮ್ಮ ಹೆಣ್ಣು ಮಕ್ಕಳು, ತರಹೇವಾರಿ ಬಟ್ಟೆ ಖರೀದಿಸುತ್ತಾರೆ. ಮೇಕಪ್ ಕಿಟ್‌ ಖರೀದಿಸುತ್ತಾರೆ. ಅಂದ ಚೆಂದ ಹೆಚ್ಚಿಸಿಕೊಳ್ಳಲು ಬ್ಯೂಟಿ ಪಾರ್ಲರ್‌ಗೆ ಹೋಗುತ್ತಾರೆ. ಪುರುಷರು ಕೂಡ ತಮ್ಮ ಅಂದ ಹೆಚ್ಚಿಸಿಕೊಳ್ಳಲು ಹಲವು ತಯಾರಿಗಳನ್ನು ಮಾಡುತ್ತಾರೆ. ಆದರೆ ಹೈದರಾಬಾದ್‌ನ ವ್ಯಕ್ತಿಯೋರ್ವ, ಮದುವೆಯ ಸಂದರ್ಭದಲ್ಲಿ ತನ್ನ ನಗುವಿನ ಅಂದ ಹೆಚ್ಚಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.

28 ವರ್ಷದ ಲಕ್ಷ್ಮೀ ನಾರಾಯಣ್, ಹೈದರಾಬಾದ್‌ನ ಜ್ಯುಬಿಲಿ ಹೀಲ್ಸ್‌ನಲ್ಲಿರುವ ಎಫ್‌ಎಂಎಸ್ ಇಂಟರ್ನ್ಯಾಷನಲ್ ಡೆಂಟಲ್‌ ಕ್ಲಿನಿಕ್‌ನಲ್ಲಿ ಸ್ಮೈಲ್ ಡಿಸೈನಿಂಗ್ ಆಪರೇಶನ್ ಮಾಡಿಸಿಕೊಳ್ಳಲು ಹೋಗಿದ್ದಾರೆ. ಈ ವೇಳೆ ಲಕ್ಷ್ಮೀ ನಾರಾಯಣ್ ಸಾವನ್ನಪ್ಪಿದ್ದಾರೆ.

ಚಿಕಿತ್ಸೆ ವೇಳೆ ಅವರಿಗೆ ಅನಸ್ತೇಷಿಯಾ ನೀಡಲಾಗಿದೆ. ದಂತ ಚಿಕಿತ್ಸೆ ಕೊಡುವಾಗ, ನೋವಾಗಬಾರದು ಎಂದು ವಸಡಿಗೆ ಅನಸ್ತೇಶಿಯಾ ನೀಡಲಾಗುತ್ತದೆ. ಈ ವೇಳೆ ಮತಿತಪ್ಪಿರುವ ಲಕ್ಷ್ಮೀ ನಾರಾಯಣ್, ಸಾವನ್ನಪ್ಪಿದ್ದಾರೆ ಎಂದು ಮೃತನ ತಂದೆ ಆರೋಪಿಸಿದ್ದಾರೆ.

ಅಲ್ಲದೇ ದಂತ ಚಿಕಿತ್ಸೆ ಮಾಡಿಸಿಕೊಳ್ಳುವುದಾಗಿ ನಮ್ಮ ಮಗ ನಮಗೆ ತಿಳಿಸಿರಲಿಲ್ಲ. ಅವನಿಗೆ ಯಾವುದೇ ಖಾಯಿಲೆ ಇರಲಿಲ್ಲ. ಹಾಗಾಗಿ ಇದು ದಂತ ವೈದ್ಯರ ನಿರ್ಲಕ್ಷ್ಯದಿಂದಲೇ, ನಮ್ಮ ಮಗನ ಸಾವಾಗಿದೆ. ದಂತ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮೃತನ ತಂದೆ ಆಗ್ರಹಿಸಿದ್ದಾರೆ.

ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿ ಮತ್ತವರ ಕುಟುಂಬ ಕೇಸರಿಶಾಲು ಕಿತ್ತೆಸೆಯುವುದು ನಿಶ್ಚಿತ: ಸಿಎಂ

70 ವರ್ಷ ಕಾಂಗ್ರೆಸ್ ಏನು ಮಾಡಿದೆ? ಸಂತೋಷ್‌ ಲಾಡ್‌ಗೆ ಶೆಟ್ಟ‌ರ್ ಟಾಂಗ್‌

ಶಿವಾಜಿಯವರ 36 ಬಾಡಿಗಾರ್ಡ್ಗಳಲ್ಲಿ 13 ಜನ ಮುಸ್ಲಿಂ ಇದ್ರು: ಇತಿಹಾಸ ಬಿಚ್ಚಿಟ್ಟ ಸಂತೋಷ್ ಲಾಡ್

- Advertisement -

Latest Posts

Don't Miss