ವರದಕ್ಷಿಣೆಯಲ್ಲಿ ಬೈಕ್ ಕೇಳಿದ್ದಕ್ಕೆ, ಅಪ್ಪನಿಂದಲೇ ಚಪ್ಪಲಿ ಏಟು ತಿಂದ ವರ: ವೀಡಿಯೋ ವೈರಲ್

ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು ಅನ್ನೋದು ಎಲ್ಲರಿಗೂ ಗೊತ್ತು. ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ ತೆಗೆದುಕೊಳ್ಳುವುದು ಮತ್ತು ಕೊಡುವುದು ಕೆಲ ಕಡೆ ಮಾತ್ರ ಕಡಿಮೆಯಾಗಿದೆ. ಹೊರತು ಉತ್ತರ ಭಾರತದ ಹಲವೆಡೆ ಡೌರ ತೆಗೆದುಕೊಂಡೇ ಮದುವೆ ಮಾಡಿಕೊಳ್ಳಲಾಗತ್ತೆ. ವಧುವಿನ ಕಡೆಯಲು ಒಂದಿಷ್ಟು ದುಡ್ಡೋ, ವರನಿಗೆ ಮೊಟರ್ ಬೈಕೋ ಕೊಡಿಸಲೇಬೇಕೆಂದು ಹೇಳಲಾಗುತ್ತದೆ.

ಆದ್ರೆ ಇಲ್ಲೊಂದು ಮನೆಯಲ್ಲಿ ವರ ವಧುವಿನ ಮನೆಯವರ ಬಳಿ, ವರದಕ್ಷಿಣೆಯಾಗಿ ಮೊಟಾರ್ ಬೈಕ್ ಬೇಕೆಂದು ಕೇಳಿದ್ದು, ಇದನ್ನು ಕೇಳಿಸಿಕೊಂಡ ವರನ ತಂದೆಯೇ ವರನಿಗೆ, ಮದುವೆ ಮಂಟಪದಲ್ಲೇ ಚಪ್ಪಲಿಯಿಂದ ಹೊಡೆದಿದ್ದಾರೆ. ಈ ದೃಶ್ಯ, ಸ್ಥಳೀಯರ ಮೊಬೈಲ್‌ನಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ವೀಡಿಯೋದಲ್ಲಿ ವಯಸ್ಸಾದ ತಂದೆ ಮಗನ ಕೊರಳಪಟ್ಟಿ ಹಿಡಿದು, ಚಪ್ಪಲಿಯಿಂದ ಹೊಡೆಯುತ್ತ, ನಾನು ನಿನಗೆ ನನ್ನ ಜಮೀನು ಮಾರಿ, ಮೊಟಾರ್ ಬೈಕ್ ಕೊಡಿಸುತ್ತೇನೆ. ನೀನು ನನ್ನ ಸೊಸೆಯನ್ನು ಮನೆಗೆ ಕರೆದುಕೊಂಡು ಬಾ ಎಂದು ಗದರಿದ್ದಾರೆ. ಇದಕ್ಕೆ ವರ ಅಳುತ್ತಲೇ ಒಪ್ಪಿಕೊಂಡಿದ್ದಾನೆ. ಮತ್ತು ಹೆದರುತ್ತ, ವಧುವಿನ ಕೈ ಹಿಡಿದು ಕರೆದೊಯ್ದಿದ್ದಾನೆ.

‘ಈಗ ಸ್ವಲ್ಪ ಬಿಡುವು ಮಾಡಿಕೊಂಡು ತಂದೆ-ತಾಯಿ, ಹೆಂಡತಿ ಮಕ್ಕಳ ಜೊತೆ ಕಾಲ ಕಳೆಯಿರಿ’

ಕಾರ್ಪ್ಸ್ ಕಮಾಂಡರ್ ಮನೆಗೆ ನುಗ್ಗಿ ಕೆಚಪ್, ಸಲಾಡ್, ನವಿಲು ಕಳ್ಳತನ ಮಾಡಿದ ಇಮ್ರಾನ್ ಬೆಂಬಲಿಗರು..

ಮತ್ತೆ ಮದುವೆ ಸಿನಿಮಾ ಟ್ರೇಲರ್ ರಿಲೀಸ್: ಕೆಲವೇ ಗಂಟೆಯಲ್ಲಿ ಲಕ್ಷ ಲಕ್ಷ ವೀವ್ಸ್..

About The Author